ವಿಮಾನದಲ್ಲಿ ಬಾಂಬ್ ಬೆದರಿಕೆ: ‘ಅಲ್ಲಾಹು ಅಕ್ಬರ್’ ನ ಘೋಷಣೆ ಕೂಗಿದ ಪ್ರಯಾಣಿಕನ ಬಂಧನ – Mid Air Bomb Threat Panic

ಲಂಡನ್ (ಬ್ರಿಟನ್) – ಇಲ್ಲಿನ ಲ್ಯುಟನ್ ವಿಮಾನ ನಿಲ್ದಾಣದಿಂದ ಗ್ಲಾಸ್ಗೋಗೆ ಹೊರಟಿದ್ದ ‘ಈಸಿಜೆಟ್ ಏರ್‌ಲೈನ್ಸ್’ ನ ವಿಮಾನದಲ್ಲಿ ಓರ್ವ ಪ್ರಯಾಣಿಕ ಕಿರುಚುತ್ತಾ ವಿಮಾನವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆತ ಜೋರಾಗಿ ಕೂಗುತ್ತಾ ‘ಅಮೆರಿಕಾ ಮುರ್ದಾಬಾದ್’, ‘ಟ್ರಂಪ್ ಮುರ್ದಾಬಾದ್’, ‘ಅಲ್ಲಾಹು ಅಕ್ಬರ್’ ಎಂದು ಘೋಷಣೆಗಳನ್ನು ಕೂಗುತ್ತಿದ್ದನು. ಆ ನಂತರ ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಆತನನ್ನು ಹಿಡಿದು ಕೆಳಗೆ ಕೆಡವಿದ್ದಾನೆ. ವಿಮಾನ ಗ್ಲಾಸ್ಗೋ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಯುತ್ತಿದೆ. ಆತನ ಬಳಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಈ ಘಟನೆಯಲ್ಲಿ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.

ಸಂಪಾದಕೀಯ ನಿಲುವು

ಹಿಂಸಾಚಾರ ಮಾಡುವವರು, ಭಯೋತ್ಪಾದಕ ಕೃತ್ಯಗಳನ್ನು ಎಸಗುವವರು ಯಾವ ಘೋಷಣೆಗಳನ್ನು ಕೂಗುತ್ತಾರೆ, ಎಂಬುದು ಈಗ ಜಗತ್ತಿಗೆ ತಿಳಿದಿದ್ದು ಅಂತಹವರೊಂದಿಗೆ ಎಂದಿಗೂ ಸಹಬಾಳ್ವೆ ಸಾಧ್ಯವಿಲ್ಲ! (‘ಅಲ್ಲಾಹು ಅಕ್ಬರ್’ ಎಂದರೆ ಅಲ್ಲಾಹನು ಮಹಾನ್ ಎಂದಿದೆ).