ಮಂದಿರಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ವಿದ್ಯುತ್ ಪ್ರವಾಹದ ವದಂತಿ ಹರಡಿದ್ದರಿಂದ ಅಪಘಾತ

ಹರಿದ್ವಾರ (ಉತ್ತರಾಖಂಡ) – ಜುಲೈ 28 ರಂದು ಬೆಳಿಗ್ಗೆ 9:15 ಕ್ಕೆ ಹರಿದ್ವಾರದ ಮಾನಸಾ ದೇವಿ ದೇವಾಲಯದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ, ಇಲ್ಲಿಯವರೆಗೆ 6 ಜನರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿದ್ದಾರೆ. “ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ವಿದ್ಯುತ್ ಪ್ರವಾಹವಿದೆ ಎಂಬ ವದಂತಿ ಹರಡಿದ್ದರಿಂದ ಹೆದರಿದ ಜನರು ಓಡಲು ಪ್ರಾರಂಭಿಸಿದರು,” ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ, ಗಡ್ವಾಲ್ ವಿಭಾಗದ ಆಯುಕ್ತ ವಿನಯ ಶಂಕರ ಪಾಂಡೆ ಅವರು, ದೇವಾಲಯದಲ್ಲಿ ಅತಿಯಾದ ಜನಸಂದಣಿಯಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಿದರು.
ಮಾನಸಾ ದೇವಿ ದೇವಾಲಯವು ಹರಿದ್ವಾರದ ಶಿವಾಲಿಕ ಬೆಟ್ಟಗಳಲ್ಲಿರುವ ಬಿಲ್ವ ಪರ್ವತದ ಮೇಲೆ ಇದೆ. ಇದು ಹರ್-ಕಿ-ಪೌಡಿಯಿಂದ 3 ಕಿ.ಮೀ ದೂರದಲ್ಲಿದ್ದು ಅಲ್ಲಿಂದ 1.5 ಕಿ.ಮೀ ಏರಿ ಹೋಗಿ (ಹತ್ತುವುದರ ಮೂಲಕ) ಅಥವಾ ‘ರೋಪ್ ವೇ’ (ಹಗ್ಗದ ಮೂಲಕ) ಮೂಲಕ ತಲುಪಬಹುದು.
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !