ಸಿಗರೇಟ್‌ನ ಹೊಗೆಗಿಂತ ಊದಿನಕಡ್ಡಿಯ ಹೊಗೆ ಹೆಚ್ಚು ಹಾನಿಕಾರಕ, ಇದರಿಂದ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ ! – China Research Incense Sticks Cigarette Smoke

ಚೀನಾದ ವಿಶ್ವವಿದ್ಯಾಲಯ ಮತ್ತು ಖಾಸಗಿ ಕಂಪನಿಯ ವಿಚಿತ್ರ ಸಂಶೋಧನೆ

ನವದೆಹಲಿ – ಊದಿನಕಡ್ಡಿಯ ಹೊಗೆ ಸಿಗರೇಟಿನ ಹೊಗೆಗಿಂತ ಹೆಚ್ಚು ಹಾನಿಕಾರಕ. ಇದರಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆ ಎಂದು ‘ಸೌತ್ ಚೈನಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿ’ ಮತ್ತು ‘ಚೀನಾ ಟೊಬ್ಯಾಕೋ ಗುವಾಂಗ್‌ಡಾಂಗ್ ಇಂಡಸ್ ರೈಲ್ವೆ’ ಕಂಪನಿ ಜಂಟಿಯಾಗಿ ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.

ಈ ಸಂಶೋಧನೆಯಲ್ಲಿ, ಸಿಗರೇಟ್ ಮತ್ತು ಊದಿನಕಡ್ಡಿಯ ಹೊಗೆಯಿಂದಾಗುವ ಹಾನಿಯ ಕುರಿತು ತುಲನಾತ್ಮಕ ಅಧ್ಯಯನ ನಡೆಸಲಾಯಿತು. ಊದಿನಕಡ್ಡಿಯ ಹೊಗೆಯ ಮಾದರಿಯಲ್ಲಿ ಶೇ. ೯೯ ರಷ್ಟು ಅತಿ ಸೂಕ್ಷ್ಮ ಮತ್ತು ಸೂಕ್ಷ್ಮ ಕಣಗಳು ಪತ್ತೆಯಾಗಿವೆ. ಇವು ದೇಹಕ್ಕೆ ಹಾನಿ ಮಾಡುತ್ತವೆ ಎಂದು ಈ ಸಂಶೋಧನೆ ಹೇಳಿದೆ.

ಸಂಶೋಧನೆಯಲ್ಲಿ ಹೇಳಿರುವ ಅಂಶಗಳು

೧. ಊದಿನಕಡ್ಡಿಯನ್ನು ಸುಟ್ಟಾಗ, ಹೊಗೆಯ ಜೊತೆಗೆ ಕೆಲವು ಸೂಕ್ಷ್ಮ ಕಣಗಳು ಸಹ ಹೊರಬರುತ್ತವೆ. ಈ ಕಣಗಳು ಗಾಳಿಯಲ್ಲಿ ಬೆರೆತುಕೊಳ್ಳುತ್ತವೆ. ಈ ವಿಷಕಾರಿ ಕಣಗಳು ದೇಹದ ಜೀವಕೋಶಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ.

೨. ಈ ಹೊಗೆಯಲ್ಲಿ ೩ ವಿಧದ ವಿಶೇಷ ವಸ್ತುಗಳಿರುತ್ತವೆ, ಅವು ಶ್ವಾಸಕೋಶದ ಕ್ಯಾನ್ಸರ್‍‌ಗೆ ಕಾರಣವಾಗಬಹುದು. ಈ ವಿಷಕಾರಿ ವಸ್ತುಗಳನ್ನು ಮ್ಯುಟಾಜೆನಿಕ್, ಜೀನೋಟಾಕ್ಸಿಕ್ ಮತ್ತು ಸೈಟೋಟಾಕ್ಸಿಕ್ ಎಂದು ಕರೆಯಲಾಗುತ್ತದೆ.

೩. ಊದಿನಕಡ್ಡಿಯ ಹೊಗೆಯು ಶ್ವಾಸಕೋಶದಲ್ಲಿ ಉರಿಯೂತ ಮತ್ತು ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ಅಲ್ಲದೆ, ಈ ಹೊಗೆಯಲ್ಲಿರುವ ಹಾನಿಕಾರಕ ರಾಸಾಯನಿಕಗಳಿಂದ ಕಣ್ಣುಗಳಲ್ಲಿ ತುರಿಕೆ, ಉರಿಯೂತ ಮತ್ತು ಚರ್ಮದ ಅಲರ್ಜಿಯಂತಹ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಈ ಹೊಗೆಯಿಂದ ದೃಷ್ಟಿ ಕಳೆದುಕೊಳ್ಳುವ ಅಪಾಯವೂ ಇದೆ.

ಸಂಪಾದಕೀಯ ನಿಲುವು

ಚೀನಾದ ಊದಿನಕಡ್ಡಿ ಬಳಸುವುದರಿಂದ ಹೀಗಾಗುತ್ತಿದ್ದರೆ ಆಶ್ಚರ್ಯಪಡಬೇಕಾಗಿಲ್ಲ!