ಮೀರತ್ (ಉತ್ತರ ಪ್ರದೇಶ): ಹಿಂದೂ ಹೆಸರು ಹೇಳಿ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ‘ಖಾಸಿಂ’!

ಮೀರತ್ (ಉತ್ತರ ಪ್ರದೇಶ) – ಮೀರತ್ ಜಿಲ್ಲೆಯ ದಾದ್ರಿ ಗ್ರಾಮದಲ್ಲಿ ಖಾಸಿಂ ಎಂಬ ಮುಸ್ಲಿಂ ವ್ಯಕ್ತಿ ತನ್ನ ಹೆಸರನ್ನು ‘ಕೃಷ್ಣ’ ಎಂದು ಬದಲಾಯಿಸಿ ಕಳೆದ ಆರು ತಿಂಗಳಿಂದ ದೇವಸ್ಥಾನದಲ್ಲಿ ಅರ್ಚಕನಾಗಿ ವಾಸಿಸುತ್ತಿರುವುದು ಬೆಳಕಿಗೆ ಬಂದಿದೆ. ಆತ ದೇವಸ್ಥಾನದಲ್ಲಿ ಕೇಸರಿ ವಸ್ತ್ರ ಧರಿಸಿ ವಾಸವಾಗಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಖಾಸಿಂನ ಉದ್ದೇಶ ಏನಿತ್ತು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

1. ಕೆಲವು ದಿನಗಳಿಂದ ಗ್ರಾಮಸ್ಥರಿಗೆ ಆತನ ನಡವಳಿಕೆಯ ಬಗ್ಗೆ ಅನುಮಾನ ಮೂಡಿತ್ತು. ಇತ್ತೀಚೆಗೆ ಆತನನ್ನು ವಿಚಾರಿಸಿದಾಗ ತೃಪ್ತಿದಾಯಕ ಉತ್ತರಗಳನ್ನು ನೀಡಲು ಆತನಿಗೆ ಸಾಧ್ಯವಾಗಲಿಲ್ಲ. ಇದರಿಂದ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು. ಆತನನ್ನು ತಪಾಸಣೆ ಮಾಡಿದಾಗ ನಿಜವಾದ ಗುರುತು ಬಯಲಾಯಿತು. ಆತ ಕೃಷ್ಣನಲ್ಲ, ಬದಲಿಗೆ ಖಾಸಿಂ ಆಗಿದ್ದು, ಬಿಹಾರದ ಸೀತಾಮಢಿ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ.

2.. ಖಾಸಿಂ ದೇವಸ್ಥಾನದಲ್ಲಿ ವಾಸಿಸಲು ತನ್ನನ್ನು ದೆಹಲಿಯ ನಿವಾಸಿ ಎಂದು ಹೇಳಿಕೊಂಡಿದ್ದ. ಆತ ಜನರ ಹಸ್ತರೇಖೆಯನ್ನು ನೋಡಿ ಭವಿಷ್ಯ ಹೇಳುವ ನಾಟಕವನ್ನೂ ಸಹ ಮಾಡುತ್ತಿದ್ದ.

ಸಂಪಾದಕೀಯ ನಿಲುವು

ಈ ಬಗ್ಗೆ ಮುಸ್ಲಿಂ ಧರ್ಮಗುರುಗಳು ಏಕೆ ಮೌನವಾಗಿದ್ದಾರೆ? ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮುಂತಾದ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು ಈ ಬಗ್ಗೆ ಬಾಯಿ ತೆರೆಯುತ್ತವೆಯೇ?