ಆಲ್ಟ್ ಬಾಲಾಜಿ, ಉಲ್ಲು, ಬಿಗ್ ಶಾಟ್ಸ್ ಅಪ್ಲಿಕೇಶನ್, ದೇಸಿಫ್ಲಿಕ್ಸ್ ಇತ್ಯಾದಿ ಅಪ್ಲಿಕೇಶನ್‌ಗಳು ಬಂದ್
(ಓಟಿಟಿ ಎಂದರೆ ‘ಓವರ್ ದಿ ಟಾಪ್.’ ಅಪ್ಲಿಕೇಶನ್‌ಗಳ ಮೂಲಕ ಚಲನಚಿತ್ರಗಳು, ಸರಣಿಗಳು ಇತ್ಯಾದಿ ಕಾರ್ಯಕ್ರಮಗಳನ್ನು ನೋಡುವುದು.)

ನವದೆಹಲಿ – ಅಶ್ಲೀಲ ಚಿತ್ರೀಕರಣಗಳನ್ನು ಪ್ರದರ್ಶಿಸುವ 25 ಅಪ್ಲಿಕೇಶನ್‌ಗಳು, ಓಟಿಟಿ ಪ್ಲಾಟ್ ಫಾರ್ಮ್ ಗಳು ಮತ್ತು ವೆಬ್ ಸೈಟ್ ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಇವುಗಳಲ್ಲಿ ಆಲ್ಟ್ ಬಾಲಾಜಿ, ಉಲ್ಲು, ಬಿಗ್ ಶಾಟ್ಸ್ ಅಪ್ಲಿಕೇಶನ್, ದೇಸಿಫ್ಲಿಕ್ಸ್, ಬೂಮೆಕ್ಸ್, ನವರಸ ಲೈಟ್, ಗುಲಾಬ್ ಅಪ್ಲಿಕೇಶನ್ ಇತ್ಯಾದಿಗಳು ಸೇರಿವೆ. ಡಿಜಿಟಲ್ ಪ್ಲಾಟ್ ಫಾರ್ಮ್ ಗಳನ್ನು ನಿಯಂತ್ರಿಸಲು ಮತ್ತು ಅಶ್ಲೀಲ ಪ್ರಸಾರ ಮಾಡುವವರ ಮೇಲೆ ನಿಗಾ ಇಡಲು ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಕ್ರಮ ಕೈಗೊಂಡಿದೆ.
🔞 Central Govt Bans 25 Apps & OTT Platforms for Obscene Content!
🚫 Platforms like Alt Balaji, Ullu, Desiflix, Boomex & more now banned nationwide.
📡 ISPs ordered to block access immediately!
👨⚖️ Move follows a Supreme Court PIL seeking regulation of OTT obscenity.
🙏 Kudos… pic.twitter.com/wkmBaNnCAX
— Sanatan Prabhat (@SanatanPrabhat) July 25, 2025
ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ದೇಶಾದ್ಯಂತ ಇಂತಹ ವಿಷಯಗಳನ್ನು ಪ್ರದರ್ಶಿಸುವ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು ಮತ್ತು ಓಟಿಟಿಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ, ಸರಕಾರವು ‘ಮಾಹಿತಿ ತಂತ್ರಜ್ಞಾನ ಕಾಯಿದೆ, 2000’ ರ ಸೆಕ್ಷನ್ 79(3)(ಬಿ) ಮತ್ತು ‘ಐಟಿ ನಿಯಮಗಳು, 2021’ ರ ನಿಯಮ 3(2)(5) ಅಡಿಯಲ್ಲಿ ಕ್ರಮ ಕೈಗೊಂಡಿದೆ. ಇಂಟರ್ನೆಟ್ ಒದಗಿಸುವವರನ್ನು ಮಧ್ಯವರ್ತಿಗಳೆಂದು ಘೋಷಿಸಲಾಗಿದ್ದು, ಈ ಜವಾಬ್ದಾರಿಯನ್ನು ಅವರ ಮೇಲೆ ವಹಿಸಲಾಗಿದೆ.

ಏಪ್ರಿಲ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಸಂಬಂಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುವಾಗ ಕೇಂದ್ರ ಸರಕಾರ ಮತ್ತು ಪ್ರಮುಖ ಡಿಜಿಟಲ್ ಪ್ಲಾಟ್ ಫಾರ್ಮ್‌ಗಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ಅರ್ಜಿಯಲ್ಲಿ ಓಟಿಟಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಅಶ್ಲೀಲ ವಿಷಯಗಳನ್ನು ತಡೆಯುವಂತೆ ಆಗ್ರಹಿಸಲಾಗಿತ್ತು. ನಂತರ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಸೇರಿದಂತೆ ಅನೇಕ ಜನಪ್ರಿಯ ಮತ್ತು ಅಂತರಾಷ್ಟ್ರೀಯ ಓಟಿಟಿ ಸಂಸ್ಥೆಗಳು, ಹಾಗೆಯೇ ಸಣ್ಣ ಮತ್ತು ದೊಡ್ಡ ಓಟಿಟಿ ಸಂಸ್ಥೆಗಳು, ಅಪ್ಲಿಕೇಶನ್‌ಗಳು ಮತ್ತು ಸಂಕೇತ ಸ್ಥಳಗಳಿಗೆ ನೋಟಿಸು ನೀಡಲಾಗಿತ್ತು. ಇದರಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಉಲ್ಲು, ಆಲ್ಟ್ ಬಾಲಾಜಿ, ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಗಳು ಸೇರಿದ್ದವು.
ಈ ಅಪ್ಲಿಕೇಶನ್‌ಗಳು, ಸಂಕೇತ ಸ್ಥಳಗಳು ಮತ್ತು ಓಟಿಟಿಗಳಿಗೆ ನಿಷೇಧ!

ಎಎಲ್ ಟಿಟಿ, ಉಲ್ಲು, ಬಿಗ್ ಶಾಟ್ಸ್ ಅಪ್ಲಿಕೇಶನ್, ದೇಸಿಫ್ಲಿಕ್ಸ್, ಬೂಮೆಕ್ಸ್, ನವರಸ ಲೈಟ್, ಗುಲಾಬ್ ಅಪ್ಲಿಕೇಶನ್, ಕಂಗನ್ ಅಪ್ಲಿಕೇಶನ್, ಬುಲ್ ಅಪ್ಲಿಕೇಶನ್, ಜಲ್ವಾ ಅಪ್ಲಿಕೇಶನ್, ವಾಹ್ ಎಂಟರ್ ಟೈನ್ ಮೆಂಟ್, ಲುಕ್ ಎಂಟರ್ ಟೈನ್ ಮೆಂಟ್, ಹಿಟ್ ಪ್ರೈಮ್, ಫೆನಿಯೋ, ಶೋಎಕ್ಸ್, ಸೋಲ್ ಟಾಕೀಸ್, ಅಡ್ಡಾ ಟಿವಿ, ಹಾಟ್‌ಎಕ್ಸ್ ವಿಐಪಿ, ಹಲ್‌ಚಲ್ ಅಪ್ಲಿಕೇಶನ್, ಮೂಡ್‌ಎಕ್ಸ್, ನಿಯಾನ್‌ಎಕ್ಸ್ ವಿಐಪಿ, ಫುಗಿ, ಮೊಜ್‌ಫ್ಲಿಲಿಕ್ಸ್ ಮತ್ತು ಟ್ರೈಫ್ಲಿಕ್ಸ್ ಇವುಗಳನ್ನು ನಿಷೇಧಿಸಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!