ಭಾರತೀಯರ 37,600 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಸ್ವಿಸ್ ಬ್ಯಾಂಕ್‌ಗಳಲ್ಲಿದೆ!

ನವದೆಹಲಿ – ಕಳೆದ 10 ವರ್ಷಗಳಲ್ಲಿ ಕಪ್ಪುಹಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ 338 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಆಸ್ತಿಯು ಎರಡು ಪಟ್ಟು ಹೆಚ್ಚಳವಾಗಿರುವ ಬಗ್ಗೆ ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿ ಖಾನ್ ಸಂಸತ್ತಿನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಹಣಕಾಸು ರಾಜ್ಯ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಸ್ವಿಸ್ ನ್ಯಾಷನಲ್ ಬ್ಯಾಂಕ್ 2024ರಲ್ಲಿ , ಸ್ವಿಸ್ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾದ ಭಾರತೀಯರ ಹಣ ಮೂರು ಪಟ್ಟು ಹೆಚ್ಚಾಗಿ 350 ಕೋಟಿ ಸ್ವಿಸ್ ಫ್ರಾಂಕ್, ಅಂದರೆ ಸುಮಾರು 37,600 ಕೋಟಿ ರೂಪಾಯಿಗಳಾಗಿವೆ ಎಂದು ಮಾಹಿತಿ ನೀಡಿತ್ತು. ಈ ಆಧಾರದ ಮೇಲೆ ಈ ಪ್ರಶ್ನೆಯನ್ನು ಕೇಳಲಾಗಿತ್ತು.
💰 In 10 years, Govt recovered just ₹338 Cr under Black Money Act (2015) – while tax demands stand at a whopping ₹35,000 Cr! 🐌📉
Meanwhile, Indians hold over ₹37,600 Cr in Swiss Banks! 🇨🇭
🔍 Enough secrecy! Reveal the names and take decisive action NOW! 🚨🧾… pic.twitter.com/JozVa8HUk6
— Sanatan Prabhat (@SanatanPrabhat) July 24, 2025
ಸರಕಾರವು ತನ್ನ ಉತ್ತರದಲ್ಲಿ, “ಸ್ವಿಸ್ ಅಧಿಕಾರಿಗಳು ನಮ್ಮ ‘ವಾರ್ಷಿಕ ಬ್ಯಾಂಕಿಂಗ್ ಡೇಟಾ’ವನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಭಾರತೀಯ ನಾಗರಿಕರ ಠೇವಣಿಗಳ ಬಗ್ಗೆ ಸಾರ್ವಜನಿಕ ಮಾಹಿತಿಯನ್ನು ಪ್ರಕಟಿಸಲು ಬಳಸಬಾರದು ಎಂದು ಹೇಳಿದೆ. ಸ್ವಿಟ್ಜರ್‌ಲ್ಯಾಂಡ್ 2018 ರಿಂದ ಭಾರತೀಯ ಖಾತೆದಾರರ ವಾರ್ಷಿಕ ಆರ್ಥಿಕ ಮಾಹಿತಿಯನ್ನು ಭಾರತ ಸರಕಾರಕ್ಕೆ ನೀಡುತ್ತಿದೆ. ಭಾರತೀಯ ಅಧಿಕಾರಿಗಳಿಗೆ ಮೊದಲ ಡೇಟಾ ಸೆಪ್ಟೆಂಬರ್ 2019 ರಲ್ಲಿ ಸಿಕ್ಕಿತ್ತು, ಆ ಬಳಿಕ ನಿರಂತರವಾಗಿ ಈ ಮಾಹಿತಿ ಸಿಗುತ್ತಿದೆ. ಹಾಗೆಯೇ, ಭಾರತಕ್ಕೆ 100 ಕ್ಕೂ ಹೆಚ್ಚು ಸಂಸ್ಥೆಗಳಿಂದ ವಿದೇಶಿ ಆಸ್ತಿ ಮತ್ತು ಆದಾಯದ ಮಾಹಿತಿ ಸಿಗುತ್ತಿದೆ,” ಎಂದು ಸರ್ಕಾರ ತಿಳಿಸಿದೆ.
ಸಂಪಾದಕೀಯ ನಿಲುವುಅಂತವರ ಹೆಸರುಗಳನ್ನು ಬಹಿರಂಗಪಡಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸಹ ನಿರೀಕ್ಷಿತ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!