ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಛೀಮಾರಿ ಹಾಕಿದೆ!

ನ್ಯೂಯಾರ್ಕ್ (ಅಮೆರಿಕ) – ಒಂದು ಕಡೆ ಭಾರತ ಇದೆ, ಅದು ಒಂದು ಪರಿಪಕ್ವ ಪ್ರಜಾಪ್ರಭುತ್ವ, ಒಂದು ಉದಯೋನ್ಮುಖ ಆರ್ಥಿಕತೆ, ಒಂದು ಬಹುವಿಧ ಮತ್ತು ಸಮಗ್ರ ಸಮಾಜವಾಗಿದೆ. ಇನ್ನೊಂದು ಕಡೆ ಪಾಕಿಸ್ತಾನವಿದೆ, ಅದು ಅತಿರೇಕ ಮತ್ತು ಭಯೋತ್ಪಾದನೆಯಲ್ಲಿ ಮುಳುಗಿದೆ. ಅದು ನಿರಂತರವಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯುತ್ತಿದೆ, ಈ ಶಬ್ದಗಳಲ್ಲಿ ಭಾರತ ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದೆ. ಪಾಕಿಸ್ತಾನವು ಇಲ್ಲಿ ಕಾಶ್ಮೀರ ಮತ್ತು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಷಯವನ್ನು ಪ್ರಸ್ತಾಪಿಸಿತ್ತು. ಅದಕ್ಕೆ ಭಾರತವು ಪ್ರತ್ಯುತ್ತರ ನೀಡಿ ಛೀಮಾರಿ ಹಾಕಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಪಿ. ಹರೀಶ್ ಅವರು, ನಾವು ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯನ್ನು ಉತ್ತೇಜಿಸುವ ಬಗ್ಗೆ ಚರ್ಚಿಸುವಾಗ, ಕೆಲವು ಮೂಲಭೂತ ತತ್ವಗಳಿವೆ, ಅವುಗಳನ್ನು ಸಾರ್ವತ್ರಿಕವಾಗಿ ಗೌರವಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು. ಅವುಗಳಲ್ಲಿ ಒಂದು ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ. ಅಂತರರಾಷ್ಟ್ರೀಯ ಸಮುದಾಯಕ್ಕೆ ಸ್ವೀಕಾರಾರ್ಹವಲ್ಲದ ವರ್ತನೆಯಲ್ಲಿ ತೊಡಗಿರುವಾಗ ಉಪದೇಶ ಮಾಡುವುದು ಮಂಡಳಿಯ ಯಾವುದೇ ಸದಸ್ಯರಿಗೆ ಶೋಭಿಸುವುದಿಲ್ಲ. ಪಹಲ್ಗಾಮ್ ಮೇಲಿನ ಆಕ್ರಮಣದ ನಂತರ ನಾವು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿದೆವು. ನಾವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡೆವು. ಈಗ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ಉತ್ತಮ ನೆರೆಹೊರೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಭಾವನೆಗಳನ್ನು ಉಲ್ಲಂಘಿಸುವ ದೇಶಗಳೂ ಅದರ ಗಂಭೀರ ಬೆಲೆಯನ್ನು ತೆರಬೇಕಾಗುತ್ತದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಎಮ್ಮೆಯ ಚರ್ಮದ ಪಾಕಿಸ್ತಾನಕ್ಕೆ ಶಬ್ದಗಳಲ್ಲ, ಶಸ್ತ್ರಾಸ್ತ್ರಗಳ ಭಾಷೆ ಮಾತ್ರ ಅರ್ಥವಾಗುತ್ತದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation