‘ಕ್ರೈಸ್ತ ಆಗದವನನ್ನು ರಕ್ತ ಬರುವವರೆಗೂ ಹೊಡೆಯಿರಿ’ ಎಂದು ಹೇಳಿದ ಪಾದ್ರಿಯ ಹೆಸರಿನಲ್ಲಿ ರಸ್ತೆ! : Ezra Sargunam Road

ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ದ್ರಾವಿಡ ಪ್ರಗತಿ ಒಕ್ಕೂಟ) ಸರಕಾರದ ಹಿಂದುದ್ವೇಷ!

ಚೆನ್ನೈ (ತಮಿಳುನಾಡು) – ಇಲ್ಲಿನ ಕಿಲ್ಪಾಕ್ ಪ್ರದೇಶದಲ್ಲಿರುವ ‘ವಾಡೆಲ್ಸ್ ರಸ್ತೆ’ಯ ಹೆಸರನ್ನು ಬದಲಿಸಿ ‘ಆರ್ಚ್‌ಬಿಷಪ್ (ಹಿರಿಯ ಪಾದ್ರಿ) ಎಜ್ರಾ ಸರ್ಗುಣಂ ರಸ್ತೆ’ ಎಂದು ಇಡಲಾಗಿದೆ. ಈ ರಸ್ತೆಯ ನಾಮಕರಣದ ಔಪಚಾರಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಿಎಂಕೆ ಸಚಿವರಾದ ಕೆ.ಎನ್. ನೆಹರು, ಹಿಂದೂ ಧಾರ್ಮಿಕ ಮತ್ತು ದತ್ತಿ ಟ್ರಸ್ಟ್ ಸಚಿವ ಶೇಖರ್ ಬಾಬು, ಚೆನ್ನೈ ಮೇಯರ್ ಆರ್. ಪ್ರಿಯಾ ಮತ್ತು ಡಿಎಂಕೆ ಶಾಸಕ ಇನಿಕೊ ಇರುದಯರಾಜ್ ಉಪಸ್ಥಿತರಿದ್ದರು.

ಈ ನಾಮಕರಣಕ್ಕೆ ಜನರಿಂದ ವಿರೋಧವೂ ವ್ಯಕ್ತವಾಯಿತು. ತಮಿಳುನಾಡಿನ ಭಾಜಪ ಅಧ್ಯಕ್ಷ ಮತ್ತು ಶಾಸಕ ನೈನಾರ್ ನಾಗೇಂದ್ರನ್ ಅವರು ಆರ್ಚ್‌ಬಿಷಪ್ ಎಜ್ರಾ ಅವರ ಹಿಂದೂ ವಿರೋಧಿ ಭಾಷಣಗಳ ವೀಡಿಯೊಗಳನ್ನು ಎಕ್ಸ್‌ನಲ್ಲಿ ಪ್ರಸಾರ ಮಾಡಿದರು. ಹಿಂದೂಗಳ ವಿರುದ್ಧ ವಿಷ ಉಗುಳಿದ ವ್ಯಕ್ತಿಯ ಹೆಸರಿನಲ್ಲಿ ಡಿಎಂಕೆ ಸರಕಾರ ರಸ್ತೆಗೆ ಹೆಸರಿಟ್ಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು. ನಾನು ಪ್ರಸಾರ ಮಾಡಿದ ವೀಡಿಯೊಗಳಿಂದ ‘ಅವನಿಗೆ ಹಿಂದೂಗಳ ಬಗ್ಗೆ ಎಷ್ಟು ದ್ವೇಷವಿತ್ತು?’ ಎಂಬುದು ಸ್ಪಷ್ಟವಾಗುತ್ತದೆ. ಅವನು ಹಿಂದೂಗಳ ವಿರುದ್ಧ ಹಿಂಸೆಗೆ ಬಹಿರಂಗವಾಗಿ ಕರೆ ನೀಡಿದ್ದನು.

ಎಜ್ರಾ ಸರ್ಗುಣಂ ನೀಡಿದ ಹಿಂದೂ ಧರ್ಮ ವಿರೋಧಿ ಹೇಳಿಕೆಗಳು

. ಹಿಂದೂ ಯಾವುದೇ ಧರ್ಮವಲ್ಲ.

. ಹಿಂದೂ ಧರ್ಮವನ್ನು ನಿಜವಾದ ‘ಧರ್ಮ’ ಎಂದು ಭಾವಿಸುವವರನ್ನು ಸುಮ್ಮನಾಗಿಸುವುದು ಅವಶ್ಯಕ. ಅದಕ್ಕಾಗಿ ಮಾಡುವ ಹಿಂಸೆಯೂ ಸರಿ. (ಮೋಹನ್‌ದಾಸ್ ಗಾಂಧಿಯವರ ಅಹಿಂಸಾ ವಾದ ಹಿಂದೂಗಳಿಗಾಗಿತ್ತು, ಆದರೆ ಇತರ ಧರ್ಮದವರು ತಮ್ಮ ಧರ್ಮಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ ಎಂಬುದನ್ನು ಗಮನಿಸಿ! – ಸಂಪಾದಕರು)

. ಕ್ರೈಸ್ತ ಆಗದವನನ್ನು ಎರಡು ಬಾರಿ ಹೊಡೆಯಿರಿ ಮತ್ತು ರಕ್ತ ಬರುವವರೆಗೆ ಹೊಡೆಯಿರಿ, ದೇವರು ಅವನನ್ನು ಕ್ಷಮಿಸುತ್ತಾನೆ. (ಪಾದ್ರಿಗಳನ್ನು ಶಾಂತಿಯ ಪ್ರತೀಕ ಎಂದು ಭಾವಿಸುವವರಿಗೆ ಇದು ಕಪಾಳಮೋಕ್ಷ! ಇಂತಹ ಪಾದ್ರಿಗಳ ಬಗ್ಗೆ ಎಂದಾದರೂ ಚಲನಚಿತ್ರಗಳನ್ನು ಮಾಡಲಾಗುತ್ತದೆಯೇ? ಅವರನ್ನು ಈ ರೂಪದಲ್ಲಿ ತೋರಿಸಲಾಗುತ್ತದೆಯೇ? – ಸಂಪಾದಕರು)

. ಹರಿದ್ವಾರದ ಕುಂಭಮೇಳದಲ್ಲಿ ನಾನು ಹಿಂದೂಗಳಿಗೆ ಕ್ರೈಸ್ತ ಸಾಹಿತ್ಯವನ್ನು ವಿತರಿಸಿದೆ, ಅದಕ್ಕಾಗಿ ನನ್ನನ್ನು ಅಲ್ಲಿಂದ ಹೊರಹಾಕಲಾಯಿತು; ಆದರೆ ಇದರಿಂದ ನನ್ನ ಅಭಿಯಾನಕ್ಕೆ ಇನ್ನಷ್ಟು ಸ್ಫೂರ್ತಿ ಸಿಕ್ಕಿತು. (ಹಿಂದೂಗಳು ಸರ್ವಧರ್ಮ ಸಮಭಾವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ, ಆದರೆ ಇತರ ಧರ್ಮದವರು ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದಾರೆ! – ಸಂಪಾದಕರು)

. ಈ ರಾಷ್ಟ್ರ ಕ್ರೈಸ್ತ ಆಗಿದೆ. ೨೦೦ ವರ್ಷಗಳ ಹಿಂದೆ ಇಲ್ಲಿ ಹಿಂದೂ ಹೆಸರಿನ ಧರ್ಮವೇ ಇರಲಿಲ್ಲ. ಹಿಂದೂ ಒಂದು ರಾಜಕೀಯ ಉದ್ದೇಶಕ್ಕಾಗಿ ಸೃಷ್ಟಿಸಲಾದ ನಕಲಿ ಪಂಥ. ಮುಸಲ್ಮಾನರು ಇದನ್ನು ಹೇಗೆ ಸಹಿಸಿಕೊಳ್ಳುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. (ಕಪಟ ಜಾತ್ಯತೀತವಾದಿಗಳು ಇದರ ಬಗ್ಗೆ ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಿ! – ಸಂಪಾದಕರು)

ಎಜ್ರಾ ಸರ್ಗುಣಂ ಯಾರು?

ಎಜ್ರಾ ಸರ್ಗುಣಂ ‘ಇವಾಂಜೆಲಿಕಲ್ ಚರ್ಚ್ ಆಫ್ ಇಂಡಿಯಾ’ದ ಮಾಜಿ ಮುಖ್ಯಸ್ಥರಾಗಿದ್ದ. ಆತ ದೇಶಾದ್ಯಂತ ಚರ್ಚ್‌ಗಳನ್ನು ಸ್ಥಾಪಿಸಲು ದೊಡ್ಡ ಪ್ರಚಾರ ಅಭಿಯಾನವನ್ನು ನಡೆಸಿದ. ೨೦೦೫ ರ ಹೊತ್ತಿಗೆ ೨ ಸಾವಿರಕ್ಕೂ ಹೆಚ್ಚು ಚರ್ಚ್‌ಗಳನ್ನು ಸ್ಥಾಪಿಸಲಾಗಿತ್ತು ಮತ್ತು ೨೦೫೬ ರ ಹೊತ್ತಿಗೆ ೧ ಲಕ್ಷ ಚರ್ಚ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿತ್ತು. ಎಜ್ರಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತು ಹಿಂದೂಗಳ ವಿರುದ್ಧ ಅನೇಕ ಬಾರಿ ಅತ್ಯಂತ ಅವಮಾನಕರ ಹೇಳಿಕೆಗಳನ್ನು ನೀಡಿದ್ದ.

೨೦೧೮ ರಲ್ಲಿ ಒಂದು ಭಾಷಣದಲ್ಲಿ ಅವರು ‘ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಎಂಬ ಕಟ್ಟರ ಇಸ್ಲಾಮಿಕ್ ಪಕ್ಷವನ್ನು ಹಿಂದೂಗಳ ವಿರುದ್ಧ ಬಹಿರಂಗವಾಗಿ ಪ್ರಚೋದಿಸಿದ್ದ. ಆ ಸಮಯದಲ್ಲಿ ಮತಾಂತರದ ವಿರುದ್ಧ ಮಾತನಾಡುತ್ತಿದ್ದ ಪಟ್ಟಾಲಿ ಮಕ್ಕಳ್ ಕಚ್ಚಿ ಪಕ್ಷದ (ಸರ್ವಹಾರ ಜನತಾ ಪಕ್ಷ) ಕಾರ್ಯಕರ್ತ ರಾಮಲಿಂಗಂ ಅವರನ್ನು ಹತ್ಯೆ ಮಾಡಲಾಗಿತ್ತು.

ಸಂಪಾದಕೀಯ ನಿಲುವು

  • ಇದು ಕೇವಲ ಭಾರತದಲ್ಲಿ ಮತ್ತು ಹಿಂದೂಗಳ ವಿಷಯದಲ್ಲಿ ಜನ್ಮ ಹಿಂದೂಗಳಾದವರಿಂದ ಸಾಧ್ಯ!
  • ಹಿಂದೂ ರಾಷ್ಟ್ರ ಸ್ಥಾಪನೆ ಎಷ್ಟು ಅವಶ್ಯಕ ಎಂಬುದಕ್ಕೆ ಇದೊಂದು ಜೀವಂತ ಉದಾಹರಣೆ!