19 ವರ್ಷಗಳ ಹಿಂದೆ ರದ್ದುಪಡಿಸಿದ್ದ ನಿರ್ಧಾರದಲ್ಲಿ ಬದಲಾವಣೆ !

ಪುಣೆ – ಬಾಣೇರನಲ್ಲಿರುವ ಪುಣೆ-ಮುಂಬಯಿ ಹೆದ್ದಾರಿ ಸಮೀಪ ಹಜಾರ್ ವಲಿ ಶಾಹ ದರ್ಗಾ ಮತ್ತು ಮಸೀದಿ ಇದೆ. ಬಾಣೇರನಲ್ಲಿರುವ ವಕ್ಫ್ ಬೋರ್ಡ್‌ಗೆ ಸೇರಿದ 7 ಹೆಕ್ಟೇರ್ 34 ಗುಂಟೆ, ಅಂದರೆ 18 ಎಕರೆ 14 ಗುಂಟೆ ಭೂಮಿಯನ್ನು, 19 ವರ್ಷಗಳ ಹಿಂದೆ ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಲು ವಕ್ಫ್ ಬೋರ್ಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುನೈದ್ ಸೈಯದ್ ಅನುಮತಿ ನೀಡಿದ್ದಾರೆ. ಇಂದಿನ ಮಾರುಕಟ್ಟೆ ಮೌಲ್ಯದ ಪ್ರಕಾರ ಈ ಭೂಮಿಯ ಬೆಲೆ ಸುಮಾರು 900 ಕೋಟಿ ರೂಪಾಯಿ ಆಗಿದ್ದು, ಅದನ್ನು ಕೇವಲ 9 ಕೋಟಿ 5 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ವಕ್ಫ್ ಬೋರ್ಡ್ ನ ಈ ನಿರ್ಧಾರ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೀಡಿದ ಆದೇಶಗಳು ಆಶ್ಚರ್ಯಕರವಾಗಿವೆ. ಈ ಸಂಪೂರ್ಣ ಪ್ರಕರಣದ ತನಿಖೆಗೆ ಮುಸ್ಲಿಂ ಸಮುದಾಯದಿಂದ ಬೇಡಿಕೆ ಕೇಳಿಬಂದಿದೆ. ಈ ಬೃಹತ್ ಹಗರಣದ ಬಗ್ಗೆ ಮುಸ್ಲಿಂ ಸಮುದಾಯ ಧ್ವನಿ ಎತ್ತಬೇಕು ಎಂದು ಮೊಹ್ಸಿನ್ ಶೇಖ್ ಮನವಿ ಮಾಡಿದ್ದಾರೆ.
ಯಾವ ಪ್ರಕರಣ?
1. ಈ ಜಾಗದ 1860 ರಿಂದ ಲಭ್ಯವಿರುವ ದಾಖಲೆಗಳಿವೆ. ಈ ಜಾಗವನ್ನು ಮಾರಾಟ ಮಾಡುವ ಆದೇಶವನ್ನು 2006 ರಲ್ಲಿಯೂ ಹೊರಡಿಸಲಾಗಿತ್ತು. ಆ ಸಮಯದಲ್ಲಿ ಆ ಜಾಗವನ್ನು 9 ಕೋಟಿ 5ಲಕ್ಷ ರೂಪಾಯಿಗೆ ಮಾರಾಟ ಮಾಡಲು ವಕ್ಫ್ ಬೋರ್ಡ್ ನಿರ್ಧರಿಸಿತ್ತು; ಆದರೆ ಅದರಲ್ಲಿ 7 ಕೋಟಿ ವಕ್ಫ್ ಬೋರ್ಡ್ ಗೆ ಪಾವತಿಸಬೇಕಾಗಿತ್ತು. ಆ ಮೊತ್ತವನ್ನು 2009 ರವರೆಗೆ ಪಾವತಿಸದ ಕಾರಣ ವಕ್ಫ್ ಬೋರ್ಡ್ ಆ ವ್ಯವಹಾರವನ್ನು ರದ್ದುಪಡಿಸಿತ್ತು.
2. ಈ ಸಂಬಂಧ ಹಲವು ದಾವೆಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದವು. ನ್ಯಾಯಾಲಯದಿಂದ ವಿಭಿನ್ನ ಆದೇಶಗಳು ಬಂದಿದ್ದವು; ಆದರೆ ಈಗ ಇದ್ದಕ್ಕಿದ್ದಂತೆ ಮೇ 27, 2025 ರಂದು ಜುನೈದ್ ಸೈಯದ್ ಈ ವಕ್ಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪತ್ರ ಬರೆದು, 19 ವರ್ಷಗಳ ಹಿಂದೆ ಅಸಿಂಧುಗೊಂಡಿದ್ದ ಅದೇ ಬೆಲೆಗೆ ಮತ್ತೆ ಅಸಿಂಧು ವ್ಯವಹಾರವನ್ನು ಮಾನ್ಯ ಎಂದು ಘೋಷಿಸಿದ್ದಾರೆ. 19 ವರ್ಷಗಳ ನಂತರ ಈ ಭೂಮಿಯ ಬೆಲೆ ಸರಿಸುಮಾರು 900 ಕೋಟಿ ರೂಪಾಯಿ ಆಗಿದೆ.
‘ಮಾಲೀಕತ್ವದ ಹಕ್ಕುಗಳನ್ನು ಹೊಂದಿರುವ ವ್ಯಕ್ತಿ ವರ್ಗ ಒಂದು’ ಎಂದು ನಮೂದಿಸಿ!
ಜುನೈದ್ ಸೈಯದ್ ಅವರು ಪ್ರಾಂತಾಧಿಕಾರಿಗಳಿಗೆ ನೀಡಿದ ಪತ್ರದಲ್ಲಿ, ವಕ್ಫ್ ಅಧಿನಿಯಮ 1995 ರ ಅಂದಿನ ಕಲಂ 108 ರ ಅನ್ವಯವಿರುವ ನಿಬಂಧನೆಗಳು ಇತರೆ ಯಾವುದೇ ಕಾನೂನುಗಳಿಗಿಂತ ಶ್ರೇಷ್ಠವಾಗಿವೆ ಎಂದು ಉಲ್ಲೇಖಿಸಿದ್ದಾರೆ. ಆದ್ದರಿಂದ, ಕಲಂ 51 ರ ಅಡಿಯಲ್ಲಿ ವಕ್ಫ್ ಬೋರ್ಡ್ ಮಾರಾಟಕ್ಕೆ ಅನುಮತಿ ನೀಡಿದ ಈ ಆಸ್ತಿಯು ಇನಾಮ್ ವರ್ಗದಿಂದ ಹೊರಬರುತ್ತದೆ ಮತ್ತು ಈ ಆಸ್ತಿಯು ‘ಫ್ರೀ ಹೋಲ್ಡ್ ಲ್ಯಾಂಡ್’ (ಭೂಮಿಯ ಮೇಲೆ ಮಾಲೀಕನ ಸಂಪೂರ್ಣ ಮತ್ತು ಶಾಶ್ವತ ಮಾಲೀಕತ್ವ) ಆಗುತ್ತದೆ. ಹಾಗಾಗಿ, ಎಲ್ಲಾ ಗುರುತುಗಳನ್ನು ತೆಗೆದುಹಾಕುವುದರ ಜೊತೆಗೆ ‘ಮಾಲೀಕತ್ವದ ಹಕ್ಕುಗಳನ್ನು ಹೊಂದಿರುವ ವ್ಯಕ್ತಿ ವರ್ಗ’ ‘2 ಇನಾಮ್ ವರ್ಗ 3’ ಎಂಬ ಅಳತೆಯನ್ನು ಸಹ ತೆಗೆದುಹಾಕಿ, ಭೂಮಿಯ ೭/೧೨ ಸಾರ ಅಥವಾ ದಾಖಲೆ ಪತ್ರದ ಮೇಲೆ ‘ಮಾಲೀಕತ್ವದ ಹಕ್ಕುಗಳನ್ನು ಹೊಂದಿರುವ ವ್ಯಕ್ತಿ ವರ್ಗ ಒಂದು’ ಎಂದು ನಮೂದಿಸಬೇಕು.
ಸಂಪಾದಕೀಯ ನಿಲುವುಹೀಗೆ ನಡೆಯುತ್ತದೆ ವಕ್ಫ್ ಬೋರ್ಡ್ ನ ಕಾರ್ಯವೈಖರಿ! ಇಂತಹ ವಕ್ಫ್ ಬೋರ್ಡ್ ನ ಮಾನ್ಯತೆಯನ್ನೇ ರದ್ದುಗೊಳಿಸುವುದು ಆವಶ್ಯಕವಾಗಿದೆ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ