ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ಪ್ರಕರಣ

ವಾಷಿಂಗ್ಟನ್ (ಅಮೆರಿಕಾ) – ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಬ್ರಿಯಾನ್ ಮಾಸ್ಟ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ‘ನ್ಯೂಯಾರ್ಕ್ ಟೈಮ್ಸ್’ ದಿನಪತ್ರಿಕೆಯನ್ನು ನೇರವಾಗಿ ಟೀಕಿಸಿದ್ದಾರೆ. ಅವರು, “ಅರೆ ನ್ಯೂಯಾರ್ಕ್ ಟೈಮ್ಸ್, ಸತ್ಯ ಏನು ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ. ಇದು ಸ್ಪಷ್ಟವಾಗಿ ಭಯೋತ್ಪಾದಕ ದಾಳಿಯಾಗಿತ್ತು. ಭಾರತವಾಗಲಿ ಅಥವಾ ಇಸ್ರೇಲ್ ಆಗಲಿ, ಭಯೋತ್ಪಾದನೆಯ ವಿಷಯ ಬಂದಾಗ, ನ್ಯೂಯಾರ್ಕ್ ಟೈಮ್ಸ್ ವಾಸ್ತವದಿಂದ ದೂರ ಓಡುತ್ತದೆ”, ಎಂದು ಬರೆದಿದ್ದಾರೆ.
1. ಅಮೆರಿಕಾ ಸರಕಾರವು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ ‘ದಿ ರೆಸಿಸ್ಟೆಂಟ್ ಫ್ರಂಟ್’ (TRF) ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು. ಇದರ ಬಗ್ಗೆ ಬ್ರಿಯಾನ್ ಮಾಸ್ಟ್ ಪ್ರತಿಕ್ರಿಯಿಸಿದ್ದಾರೆ.

2. ‘ನ್ಯೂಯಾರ್ಕ್ ಟೈಮ್ಸ್’ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿಯ ಶೀರ್ಷಿಕೆಯಲ್ಲಿ ‘ಉಗ್ರಗಾಮಿಗಳು ಕನಿಷ್ಠ 24 ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು’ ಎಂದು ಬರೆದಿತ್ತು. ವಿದೇಶಾಂಗ ವ್ಯವಹಾರಗಳ ಸಮಿತಿಯು ಅದೇ ಶೀರ್ಷಿಕೆಯೊಂದಿಗೆ ಒಂದು ಚಿತ್ರವನ್ನು ಹಂಚಿಕೊಂಡಿತು. ಅದರಲ್ಲಿ ‘ಉಗ್ರಗಾಮಿ’ (ಮಿಲಿಟೆಂಟ್) ಎಂಬ ಪದದ ಬದಲಿಗೆ ‘ಭಯೋತ್ಪಾದಕ’ (ಟೆರರಿಸ್ಟ್) ಎಂಬ ಪದವನ್ನು ಬಳಸಿ ನ್ಯೂಯಾರ್ಕ್ ಟೈಮ್ಸ್ ಅನ್ನು ಖಂಡಿಸಿತು.
ಸಂಪಾದಕೀಯ ನಿಲುವುಅಮೆರಿಕಾದ ಮಾಧ್ಯಮಗಳು ಭಾರತವನ್ನು ದ್ವೇಷಿಸುತ್ತವೆ ಮತ್ತು ಪಾಕಿಸ್ತಾನ ಹಾಗೂ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರನ್ನು ಯಾವಾಗಲೂ ಬೆಂಬಲಿಸುತ್ತವೆ. ಸತ್ಯವನ್ನು ಮರೆಮಾಚುವ ಇಂತಹ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara