‘ಬಾಂಗ್ಲಾದೇಶದಲ್ಲಿ ಕಾಫಿರರಿಗೆ ಜಾಗವಿಲ್ಲ’ ಎಂಬ ಘೋಷಣೆ

ಢಾಕಾ (ಬಾಂಗ್ಲಾದೇಶ) – ನಗರದ ‘ರಾಷ್ಟ್ರೀಯ ಮಸೀದಿ’ ಎಂದು ಗುರುತಿಸಲ್ಪಡುವ ಬೈತುಲ್ ಮುಕರ್ರಮ್ ಮಸೀದಿ ಆವರಣದಲ್ಲಿ ಹಿಜ್ಬ ಉತ-ತಹರೀರ, ವಿಲಾಯಾಹ ಬಾಂಗ್ಲಾದೇಶ, ಅನ್ಸಾರ ಅಲ್-ಇಸ್ಲಾಂ ಮತ್ತು ಜಮಾತ-ಎ-ಇಸ್ಲಾಮಿಯಂತಹ ಮೂಲಭೂತವಾದಿ ಇಸ್ಲಾಮಿಕ್ ಜಿಹಾದಿ ಸಂಘಟನೆಗಳ ಸದಸ್ಯರು ಬಹಿರಂಗವಾಗಿ ‘ಜಿಹಾದ್’ನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಅದರೊಂದಿಗೆ, ಅವರು ತಮ್ಮನ್ನು ತಾವು ‘ಜಿಹಾದಿ’ ಎಂದು ಹೇಳಿಕೊಂಡರು. ಈ ಜಿಹಾದಿ ಗುಂಪುಗಳ ಸದಸ್ಯರು ವಿವಿಧ ಜಿಲ್ಲೆಗಳಿಂದ ಬಂದಿದ್ದರು. ಅವರು ನಮಾಜ್ ನಂತರ ಮಸೀದಿಯ ಹೊರಗೆ ‘ಜಿಹಾದ್ ಬೇಕು, ಜಿಹಾದ್ ಮಾಡುತ್ತಾ ಬದುಕಬೇಕು’, ‘ನಾವು ಯಾರು? … ಭಯೋತ್ಪಾದಕರು, ಭಯೋತ್ಪಾದಕರು’, ‘ಇಸ್ಲಾಮಿಕ್ ಬಾಂಗ್ಲಾದೇಶದಲ್ಲಿ ಕಾಫಿರರಿಗೆ ಜಾಗವಿಲ್ಲ’ ಎಂದು ಘೋಷಣೆಗಳನ್ನು ಕೂಗಿದರು.

1. ಶೇಖ ಹಸೀನಾರವರ ಅವಾಮಿ ಲೀಗ ಪಕ್ಷದ ಸರಕಾರದ ಅವಧಿಯಲ್ಲಿ, ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸುವುದು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ ಈ ಸಂಘಟನೆಗಳನ್ನು ನಿಷೇಧಿಸಲಾಗಿತ್ತು. ದಾಖಲೆಗಳ ಪ್ರಕಾರ, ಇಂದಿಗೂ ಈ ಸಂಘಟನೆಗಳ ಮೇಲೆ ನಿಷೇಧವಿದೆ; ಆದರೆ ಪ್ರಧಾನಿ ಶೇಖ ಹಸೀನಾರವರು ಪದಚ್ಯುತಗೊಂಡ ನಂತರ ಈ ಸಂಘಟನೆಗಳು ಬಹಿರಂಗವಾಗಿ ಸಕ್ರಿಯವಾಗಿವೆ.
2. ಬಾಂಗ್ಲಾದೇಶದಲ್ಲಿ ಆಗಸ್ಟ್ 5, 2024 ರಂದು ಅಧಿಕಾರದಲ್ಲಿ ಬದಲಾವಣೆಯಾಯಿತು. ಅನಂತರ ಬಂದ ವರದಿಗಳ ಪ್ರಕಾರ, ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ನೂರಾರು ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
3. ಕಾರಾಗೃಹ ವಿಭಾಗದ ಮಾಹಿತಿಯ ಅನುಸಾರ, ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಭಯೋತ್ಪಾದಕರು ಜೈಲಿನಿಂದ ಹೊರಬಂದಿದ್ದಾರೆ. ಅವರಲ್ಲಿ ಕೆಲವರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಗಿತ್ತು.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’