ಮತಾಂತರ ಜಾಲಕ್ಕೆ ಬ್ರೇಕ್: ಆರು ರಾಜ್ಯಗಳಿಂದ 10 ಮಂದಿಯ ಬಂಧನ!

  • ಇಸ್ಲಾಮಿಕ್ ಸ್ಟೇಟ್‌ ನಂತೆ ಕಾರ್ಯನಿರ್ವಹಿಸುತ್ತಿದ್ದ ಸಂಘಟನೆ

  • ಲವ್ ಜಿಹಾದ್ ಚಟುವಟಿಕೆಗಳಲ್ಲಿಯೂ ಈ ಗ್ಯಾಂಗ್ ಭಾಗಿ

  • ಅಮೆರಿಕ, ಕೆನಡಾ ಸೇರಿದಂತೆ ಹಲವು ದೇಶಗಳಿಂದ ಆರ್ಥಿಕ ನೆರವು

  • ಮತಾಂತರಗೊಂಡ ಯುವತಿಯರನ್ನು ಕಟ್ಟರವಾದಿ ಚಟುವಟಿಕೆಗಳಲ್ಲಿ ತೊಡಗಿಸಲಾಯಿತು

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಕ್ರಮವಾಗಿ ಮತಾಂತರ ಮಾಡುತ್ತಿದ್ದ ಒಂದು ಗ್ಯಾಂಗ್‌ನ ಮುಖವಾಡವನ್ನು ಪೊಲೀಸರು ಕಳಚಿದ್ದಾರೆ. ಈ ಜಾಲವು ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದಕ ಸಂಘಟನೆಯ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಕಾರ್ಯಾಚರಣೆಯಲ್ಲಿ 6 ವಿವಿಧ ರಾಜ್ಯಗಳಿಂದ 10 ಜನರನ್ನು ಬಂಧಿಸಲಾಗಿದೆ. ಮಾರ್ಚ್ 2025 ರಲ್ಲಿ, ಕ್ರಮವಾಗಿ 33 ಮತ್ತು 18 ವರ್ಷ ವಯಸ್ಸಿನ 2 ಸಹೋದರಿಯರು ನಾಪತ್ತೆಯಾಗಿದ್ದರು ಎಂದು ಆಗ್ರಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪೊಲೀಸರು ತನಿಖೆ ಪ್ರಾರಂಭಿಸಿದರು. ತನಿಖೆಯಲ್ಲಿ ಪೊಲೀಸರಿಗೆ ನಾಪತ್ತೆಯಾದ 2 ಸಹೋದರಿಯರನ್ನು ಮತಾಂತರ ಗೊಳಿಸಿರುವುದು ಕಂಡುಬಂದಿತ್ತು. ಈ ಪ್ರಕರಣದಲ್ಲಿ ರಾಜಸ್ಥಾನದಿಂದ 3, ಉತ್ತರ ಪ್ರದೇಶ ಮತ್ತು ಬಂಗಾಳದಿಂದ ತಲಾ 2, ಹಾಗೂ ದೆಹಲಿ, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತರ ಗುರುತು ಪತ್ತೆಯಾಗಿದೆ. ಗೋವಾದಲ್ಲಿನ ಆಯಷಾ ಉರ್ಫ್ ಎಸ್.ಬಿ. ಕೃಷ್ಣ, ಕೋಲಕತಾದ ಅಬ್ಬು ತಾಲೀಬ್ ಖಲಾಪರ್, ಡೆಹ್ರಾಡೂನ್‌ ನ ಅಬುರ್ ರೆಹಮಾನ್ ದೆಹ್ರಾಡೂನ್, ದೆಹಲಿಯ ಮುಸ್ತಫಾ ಅಲಿಯಾಸ್ ಮನೋಜ್, ಜೈಪುರದ ಮೊಹಮ್ಮದ್ ಅಲಿ ಮತ್ತು ಜುನೈದ್ ಖುರೇಷಿ ಬಂಧಿತ ಆರೋಪಿಗಳಲ್ಲಿ ಕೆಲವರ ಹೆಸರುಗಳಾಗಿವೆ.

ಆಗ್ರಾ ಪೊಲೀಸ್ ಆಯುಕ್ತ ದೀಪಕ ಕುಮಾರ ಅವರ ಪ್ರಕಾರ, “ನಾಪತ್ತೆಯಾದ ಒಬ್ಬ ಹುಡುಗಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಚಿತ್ರವನ್ನು ಹಂಚಿಕೊಂಡಿದ್ದಳು. ಅದರಲ್ಲಿ ಒಂದು ಹುಡುಗಿಯ ಕೈಯಲ್ಲಿ ‘ಎಕೆ-47’ ರೈಫಲ್ ಇತ್ತು. ಬಳಿಕ ಪೊಲೀಸರ ತನಿಖೆಗೆ ವೇಗ ಸಿಕ್ಕಿತು. ದೀಪಕ ಕುಮಾರ ಇವರು, “ಪ್ರಾಥಮಿಕ ತನಿಖೆಯಲ್ಲಿ ಈ ಸಹೋದರಿಯರನ್ನು ‘ಲವ್ ಜಿಹಾದ್’ ಮತ್ತು ಕಟ್ಟರವಾದದಲ್ಲಿ ತೊಡಗಿರುವ ಜಾಲವು ಗುರಿಯಾಗಿಸಿಕೊಂಡಿತ್ತು ಎಂದು ಕಂಡುಬಂದಿದೆ, ಈ ಜಾಲಕ್ಕೆ ಅಮೆರಿಕ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳಿಂದ ಹಣ ಬರುತ್ತಿತ್ತು. ಈ ಬಗ್ಗೆ ಪುರಾವೆಗಳು ಲಭ್ಯವಾಗಿವೆ”, ಎಂದು ಹೇಳಿದ್ದಾರೆ.

ಇಸ್ಲಾಮಿಕ್ ಸ್ಟೇಟ್‌ ನ ಕಾರ್ಯಶೈಲಿಯಂತೆ ಜಾಲ ಕಾರ್ಯನಿರ್ವಹಿಸುತ್ತಿತ್ತು

ಇಸ್ಲಾಮಿಕ್ ಸ್ಟೇಟ್ ಕಾರ್ಯನಿರ್ವಹಿಸುವ ರೀತಿಯಲ್ಲಿಯೇ, ಈ ಜಾಲದಲ್ಲಿ ಭಾಗಿಯಾಗಿರುವ ಗ್ಯಾಂಗ್ ಈ ದುಷ್ಕೃತ್ಯಗಳನ್ನು ಮಾಡಲು ವಿವಿಧ ಪಾತ್ರಗಳನ್ನು ನಿರ್ವಹಿಸಿದೆ ಎಂದು ಶಂಕಿಸಲಾಗಿದೆ. ಬಂಧಿತ ವ್ಯಕ್ತಿಗಳು ಮತಾಂತರ ಮತ್ತು ಲವ್ ಜಿಹಾದ್‌ ಗಾಗಿ ಹಣ ಸಂಗ್ರಹಿಸುವುದು, ಆಶ್ರಯ ನೀಡುವುದು, ಮತಾಂತರ ಮತ್ತು ಇತರ ಕಟ್ಟರವಾದ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸೇರಿದಂತೆ ಅನೇಕ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಈ ಗುಂಪು ಐಸಿಸ್‌ ನ ಕ್ರೂರ ಜಿಹಾದಿ ಭಯೋತ್ಪಾದಕ ಸಂಘಟನೆಯ ಮಾದರಿಯಲ್ಲಿ ಮತಾಂತರ ಮಾಡುತ್ತಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ, ಎಂದು ಪೊಲೀಸ್ ಆಯುಕ್ತರಾದ ಕುಮಾರ ಇವರು ತಿಳಿಸಿದರು. ಬಂಧಿತ 10 ವ್ಯಕ್ತಿಗಳಲ್ಲಿ ಓರ್ವ ಮಹಿಳೆಯೂ ಸೇರಿದ್ದಾರೆ.

‘ಮಿಷನ್ ಅಸ್ಮಿತಾ’ ಅಡಿಯಲ್ಲಿ ಕಾರ್ಯಾಚರಣೆ ಪ್ರಾರಂಭ!

ಈ ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ಚುರುಕುಗೊಳಿಸಲು ವಿಶೇಷ ಕಾರ್ಯಪಡೆ ಮತ್ತು ಭಯೋತ್ಪಾದನಾ ನಿಗ್ರಹ ದಳದ ವಿಶೇಷ ತಂಡಗಳನ್ನು ನಿಯೋಜಿಸಿದ್ದಾರೆ. ಯೋಗಿ ಆದಿತ್ಯನಾಥ ನೇತೃತ್ವದ ಸರಕಾರವು ಪ್ರಾರಂಭಿಸಿದ ‘ಮಿಷನ್ ಅಸ್ಮಿತಾ’ ಅಡಿಯಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಅಕ್ರಮ ಮತಾಂತರ, ಕಟ್ಟರವಾದ, ಲವ್ ಜಿಹಾದ್ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿ ಉಂಟುಮಾಡಲು ವಿದೇಶಿ ನಿಧಿಯ ಮೂಲಕ ನಡೆಯುವ ಪ್ರಯತ್ನಗಳನ್ನು ತಡೆಗಟ್ಟಲು ಸರಕಾರ ಈ ಉಪಕ್ರಮವನ್ನು ಪ್ರಾರಂಭಿಸಿದೆ.

 

  • ಒಂದು ಜಾಲದ ಚಟುವಟಿಕೆಗಳು 6 ರಾಜ್ಯಗಳಿಗೆ ಹರಡುವವರೆಗೂ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳಿಗೆ ಸುಳಿವು ಸಿಗಲಿಲ್ಲವೇ? ಇದು ಅವರಿಗೆ ನಾಚಿಕೆಗೇಡಿನ ಸಂಗತಿ!
  • ಭಾರತದಲ್ಲಿ ಮತಾಂಧ ಮುಸಲ್ಮಾನರು ಹಿಂದೂ ಯುವತಿಯರ ಜೀವನವನ್ನು ಹಾಳು ಮಾಡುತ್ತಿರುವ ಹಲವು ಉದಾಹರಣೆಗಳು ಹೊರಬರುತ್ತಿರುವಾಗ ‘ಲವ್ ಜಿಹಾದ್ ಅಸ್ತಿತ್ವದಲ್ಲಿಲ್ಲ’ ಎಂದು ಹೇಳುವವರು ಈಗ ಏಕೆ ಮೌನ ?
  • ಭಾರತದ ಉತ್ತರ ಪ್ರದೇಶ, ಹಾಗೆಯೇ ಇತರ ರಾಜ್ಯಗಳಲ್ಲಿ ಲವ್ ಜಿಹಾದ್ ಮತ್ತು ಮತಾಂತರ ವಿರೋಧಿ ಕಾನೂನುಗಳಿದ್ದರೂ, ಮತಾಂಧರಿಗೆ ಅವುಗಳ ಬಗ್ಗೆ ಭಯವಿಲ್ಲ ಎಂಬುದು ಇಂತಹ ಘಟನೆಗಳಿಂದ ಪದೇ ಪದೇ ಸಾಬೀತಾಗುತ್ತಿದೆ. ಲವ್ ಜಿಹಾದ್ ತಡೆಗಟ್ಟಲು ಅವರ ಮೇಲೆ ಭಯ ಹುಟ್ಟಿಸುವಂತಹ ಕ್ರಮ ಕೈಗೊಳ್ಳುವುದು ಅವಶ್ಯಕ!