ತಿಲಕವಿಟ್ಟ ಹಿಂದೂ ಉದ್ಯೋಗಿಗೆ ಥಳಿಸಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮುಸ್ಲಿಂ ಅಧಿಕಾರಿ !

ಅಲಿಗಢ (ಉತ್ತರ ಪ್ರದೇಶ) – ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಹಿಂದೂ ಉದ್ಯೋಗಿ ಆಶಿಶ ಶರ್ಮಾ ಅವರು ಸಹಾಯಕರ ಹಣಕಾಸು ಅಧಿಕಾರಿ ಸಮೀರ ಮುರ್ಸಿಲ್ ಖಾನ್ ಎಂಬ ಮುಸ್ಲಿಂ ಅಧಿಕಾರಿಯ ವಿರುದ್ಧ ಧಾರ್ಮಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಸಮೀರ ಖಾನ್ ಧಾರ್ಮಿಕ ಕಾರಣಗಳಿಗಾಗಿ ನಿರಂತರ ಕಿರುಕುಳ ನೀಡುತ್ತಿದ್ದಾರೆ. ನಾನು ತಿಲಕವಿಡುತ್ತಿರುವುದರಿಂದ ನನಗೆ ತೊಂದರೆ ನೀಡಲಾಗುತ್ತಿದೆ ಎಂದು ಆಶಿಶ ಶರ್ಮಾ ತಿಳಿಸಿದ್ದಾರೆ.

1. ಪ್ರಸಾರ ಮಾಧ್ಯಮದವರೊಂದಿಗೆ ಮಾತನಾಡಿದ ಆಶಿಶ್ ಶರ್ಮಾ, “ಸಮೀರ ಮುರ್ಸಿಲ್ ಖಾನ್ ಎಲ್ಲರ ಮುಂದೆ ‘ಈ ತಿಲಕ ಇಟ್ಟವನು ಯಾರು?’ ಎಂದು ಕೇಳುತ್ತಾರೆ. ‘ಈ ತಿಲಕ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ’ ಎಂದೂ ಅವರು ಹೇಳುತ್ತಾರೆ. ಸಮೀರ ಖಾನ್ ನಮ್ಮ ಕಚೇರಿಯ ಕೆಲಸದಲ್ಲಿ ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಾರೆ. ಸಮೀರ ಖಾನ್ ಬೆದರಿಕೆ ಹಾಕಿ, ‘ನಾನು ಯಾರೆಂದು ನಿನಗೆ ಗೊತ್ತಿಲ್ಲ, ನನ್ನ ಹಿನ್ನೆಲೆ ಏನು ಎಂದು ನಿನಗೆ ತಿಳಿದಿಲ್ಲ. ನನ್ನನ್ನು ಹಗುರವಾಗಿ ತೆಗೆದುಕೊಳ್ಳಬೇಡ. ನನ್ನ ತಂದೆ ಕಾಲೇಜಿನ ಅಧ್ಯಕ್ಷರಾಗಿದ್ದರು’ ಎಂದು ಹಾಕುತ್ತಾರೆ” ಎಂದು ಹೇಳುತ್ತಾರೆ.

2. “ನಾನು ಸಮೀರ ಖಾನ್ ಅವರ ಕಚೇರಿಗೆ ಅವರ ಸಾಮಗ್ರಿಗಳನ್ನು ತೆಗೆದುಕೊಂಡು ಹೋದಾಗ, ನನ್ನನ್ನು ಒಳಗೆ ಬಿಡುವುದಿಲ್ಲ. ನನ್ನ ಜೀವಕ್ಕೆ ಅಪಾಯವಿದೆ ಮತ್ತು ನನ್ನ ಇಡೀ ಕುಟುಂಬ ಭಯದಲ್ಲಿದೆ. ಜೊತೆಗೆ, ಕೆಲಸ ಬಿಡುವಂತೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ” ಎಂದು ಶರ್ಮಾ ಆರೋಪಿಸಿದ್ದಾರೆ.

3. ಆಶಿಶ ಶರ್ಮಾ ಕಳೆದ 7 ವರ್ಷಗಳಿಂದ ಈ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ, ಧಾರ್ಮಿಕ ತಾರತಮ್ಯದಿಂದಾಗಿ ಅವರಿಗೆ ಇಲ್ಲಿಯವರೆಗೆ ವೇತನ ಹೆಚ್ಚಳ ಮತ್ತು ಬಡ್ತಿ (ಪ್ರಮೋಷನ್) ಸಿಕ್ಕಿಲ್ಲ. ಅವರ ಮೇಲೆ ವಿವಿಧ ರೀತಿಯ ಮಿತಿಗಳು ಮತ್ತು ನಿರ್ಬಂಧಗಳನ್ನು ಹೇರಲಾಗಿದೆ.
ಆಶಿಶ್ ಶರ್ಮಾ ಅವರು ಧಾರ್ಮಿಕ ಸ್ವಾತಂತ್ರ್ಯದ ಆಧಾರದ ಮೇಲೆ ವಿಶ್ವವಿದ್ಯಾಲಯದ ಕುಲಪತಿ ಮತ್ತು ರಿಜಿಸ್ಟ್ರಾರ್ ಅವರಿಗೆ ದೂರು ನೀಡಿದ್ದಾರೆ. ಅಗತ್ಯ ಬಿದ್ದರೆ ಸ್ಥಳೀಯ ಸಂಸದರನ್ನೂ ಸಂಪರ್ಕಿಸುವುದಾಗಿ ಹೇಳಿದ್ದಾರೆ.

4. ಕಾಲೇಜಿನ ಕೆಲವು ವಿದ್ಯಾರ್ಥಿ ನಾಯಕರು ಆಶಿಶ ಶರ್ಮಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ವಿಶ್ವವಿದ್ಯಾಲಯದ ಪ್ರೊ. ವಸೀಮ ಅಲಿ ಅವರು ಆಶಿಶ ಶರ್ಮಾ ಅವರ ದೂರಿನ ಬಗ್ಗೆ ದೃಢಪಡಿಸಿದ್ದು, “ಎರಡೂ ಕಡೆಯವರ ಹೇಳಿಕೆಗಳನ್ನು ಆಲಿಸಿ, ಪ್ರಕರಣವನ್ನು ಸರಿಯಾದ ರೀತಿಯಲ್ಲಿ ಇತ್ಯರ್ಥಪಡಿಸಲಾಗುವುದು” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಸರಕಾರದ ಅನುದಾನದಲ್ಲಿ ನಡೆಯುವ ಇಂತಹ ವಿಶ್ವವಿದ್ಯಾಲಯಗಳನ್ನು ಈಗ ಮುಚ್ಚಲೇಬೇಕು!