ರಾಜಧಾನಿ ಪಾಟಲೀಪುತ್ರದಲ್ಲಿ ಆಸ್ಪತ್ರೆಗೆ ನುಗ್ಗಿ ಗೂಂಡಾನನ್ನು ಗುಂಡಿಕ್ಕಿ ಹತ್ಯೆ

ಬಿಹಾರದಲ್ಲಿ ‘ಜಂಗಲ್‌ರಾಜ್’

ಪಾಟಲೀಪುತ್ರ (ಬಿಹಾರ) – ಇಲ್ಲಿನ ಪಾರಸ್ ಆಸ್ಪತ್ರೆಯಲ್ಲಿ ಚಂದನ ಮಿಶ್ರಾ ಎಂಬ ಗೂಂಡಾನನ್ನು ಮತ್ತೊಂದು ಗೂಂಡಾ ಗ್ಯಾಂಗ್‌ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ 5 ಗೂಂಡಾಗಳು ಪಿಸ್ತೂಲ್‌ ಗಳೊಂದಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ಚಂದನ ಮಿಶ್ರಾ ಅವನ ಕೊಠಡಿಗೆ ನುಗ್ಗಿ ಗುಂಡು ಹಾರಿಸುವುದು ಕಾಣಿಸುತ್ತದೆ. ಚಂದನ ಮಿಶ್ರಾ ಬಿಹಾರದ ಬಕ್ಸರ್ ಜಿಲ್ಲೆಯ ನಿವಾಸಿಯಾಗಿದ್ದ. ಅವನ ವಿರುದ್ಧ 10 ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗಿದ್ದವು. ಅವನ ವಿರುದ್ಧ ದರೋಡೆ, ಅಪಹರಣ ಮತ್ತು ಬೆದರಿಸಿ ಹಣ ವಸೂಲಿ ಮಾಡಿದ ಆರೋಪಗಳೂ ಇದ್ದವು. ಚಂದನ್ ಅವನ ಗೂಂಡಾ ಸ್ನೇಹಿತ ಶೆರು ಜೊತೆಗಿನ ವಿವಾದದ ನಂತರ, ಶೆರು ತನ್ನದೇ ಆದ ಹೊಸ ಗ್ಯಾಂಗ್ ರಚಿಸಿದ್ದು, ಇದೇ ಗುಂಪು ಚಂದನನನ್ನು ಹತ್ಯೆ ಮಾಡಿದೆ.

ಚಂದನ್ ಬೇಗೂರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಗ, ವೈದ್ಯಕೀಯ ಚಿಕಿತ್ಸೆಗಾಗಿ ಪಾರಸ್ ಆಸ್ಪತ್ರೆಗೆ ‘ಪರೋಲ್‌’ ಮೇಲೆ (ಒಳ್ಳೆಯ ನಡತೆ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಕೈದಿಯನ್ನು ಷರತ್ತುಬದ್ಧವಾಗಿ ಕೆಲವು ದಿನಗಳವರೆಗೆ ಬಿಡುಗಡೆ ಮಾಡುವುದು) ದಾಖಲಿಸಲಾಗಿತ್ತು. ಆತನ ಯಕೃತ್ತು ಹಾಳಾಗಿತ್ತು.

ಸಂಪಾದಕೀಯ ನಿಲುವು

ಗೂಂಡಾಗಳಿಗೆ ಕಾನೂನಿನ ಭಯವೇ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಪೊಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ!