
ದಮಾಸ್ಕಸ್ (ಸಿರಿಯಾ) – ಸಿರಿಯಾದ ಶಿಯಾ ಡ್ರುಜ್ ಮತ್ತು ಸುನ್ನಿ ಬೆದುಯಿನ್ ಎಂಬ ಎರಡು ಸಮುದಾಯಗಳ ನಡುವಿನ ಸಂಘರ್ಷದಲ್ಲಿ ಇಸ್ರೇಲ್ ಧುಮುಕಿದೆ. ಇಸ್ರೇಲಿ ಸೇನೆಯು ಸಿರಿಯಾದ ಸೇನಾ ಟ್ಯಾಂಕ್ ಮೇಲೆ ದಾಳಿ ಮಾಡಿದೆ. ಅಲ್ಲಿನ ಸರಕಾರ ಮತ್ತು ಸೇನೆಯು ಸುನ್ನಿ ಬೆದುಯಿನ್ ಸಮುದಾಯಕ್ಕೆ ಬೆಂಬಲ ನೀಡುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಿರಿಯಾ ಸರಕಾರವು ಡ್ರುಜ್ ಸಮುದಾಯದ ಮೇಲೆ ದಾಳಿ ಮಾಡಲು ತನ್ನ ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ಹೇಳಿದೆ. ದಕ್ಷಿಣ ಸಿರಿಯಾದ ಸ್ವೆಇದಾ ಪ್ರಾಂತ್ಯದಲ್ಲಿ ಡ್ರುಜ್ ಮತ್ತು ಬೆದುಯಿನ್ ಸೇನೆಗಳ ನಡುವಿನ ಹಿಂಸಾತ್ಮಕ ಸಂಘರ್ಷವನ್ನು ನಿಲ್ಲಿಸಲು ಸಿರಿಯಾದ ಸರಕಾರಿ ಭದ್ರತಾ ಪಡೆಗಳು ಅಲ್ಲಿಗೆ ತಲುಪಿದಾಗ ಇಸ್ರೇಲ್ ಈ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು 100 ಜನರು ಸಾವನ್ನಪ್ಪಿದ್ದಾರೆ.
ಸಿರಿಯಾದ ಸಂಘರ್ಷದಲ್ಲಿ ಇಸ್ರೇಲ್ ಪ್ರವೇಶಿಸಲು ಕಾರಣ !

ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು, ಇಸ್ರೇಲ್ ನ ಗೋಲನ್ ಹೈಟ್ಸ್ ನಲ್ಲಿರುವ ಡ್ರುಜ್ ಸಮುದಾಯಕ್ಕೆ ಸಿರಿಯಾದ ಡ್ರುಜ್ ಜನರೊಂದಿಗೆ ಆಳವಾದ ಸಂಬಂಧ ಇರುವುದರಿಂದ ಅವರನ್ನು ರಕ್ಷಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದರು. ಮತ್ತೊಂದೆಡೆ, ಈ ಹಿಂಸಾಚಾರವು ಕೋಮು ಗಲಭೆಯಲ್ಲ, ಬದಲಿಗೆ ಸರಕಾರ ಮತ್ತು ಅಪರಾಧಿಗಳ ನಡುವಿನ ಹೋರಾಟ ಎಂದು ಸಿರಿಯಾ ಹೇಳಿಕೊಂಡಿದೆ. ಸರಕಾರವು ಡ್ರುಜ್ ಸಮುದಾಯವನ್ನು ಅಪರಾಧಿಗಳು ಎಂದು ಪರಿಗಣಿಸುತ್ತದೆ.
ಶಿಯಾ ಇಸ್ಲಾಂನ ಒಂದು ಶಾಖೆಯಾದ ಡ್ರುಜ್ ಸಮುದಾಯವು ಸಿರಿಯಾ, ಲೆಬನಾನ್ ಮತ್ತು ಇಸ್ರೇಲ್ ನಲ್ಲಿ ಹರಡಿಕೊಂಡಿದೆ. ಸಿರಿಯಾದಲ್ಲಿ ಪ್ರಸ್ತುತ ಸುನ್ನಿ ಬಹುಸಂಖ್ಯಾತ ಸರಕಾರವಿದ್ದು, ಅದು ಬಶರ್ ಅಲ್-ಅಸದ್ ಅವರನ್ನು ಪದಚ್ಯುತಗೊಳಿಸಿದ ನಂತರ ಅಧಿಕಾರಕ್ಕೆ ಬಂದಿದೆ; ಆದರೆ ಇದರ ನಂತರವೂ, ಡ್ರುಜ್, ಶಿಯಾ, ಕ್ರೈಸ್ತ ಮತ್ತು ಕುರ್ದ್‌ಗಳಂತಹ ಅಲ್ಪಸಂಖ್ಯಾತರಿಗೆ ಸರಕಾರದ ಬಗ್ಗೆ ಸಂಶಯವಿದೆ.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು