ಹೃದಯ ಮತ್ತು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸುಧಾರಿಸಲು ‘ಕಾರ್ಡಿಯೋ ವ್ಯಾಯಾಮಗಳು ಆವಶ್ಯಕ !

ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ಭಾಗ ೧೯

‘ದೇಹದ ಜೀವಕೋಶಗಳಿಗೆ ಆಮ್ಲಜನಕ (ಆಕ್ಸಿಜನ್) ಮತ್ತು ಪೋಷಕಾಂಶಗಳನ್ನು ಪೂರೈಸಲು ರಕ್ತಪರಿಚಲನೆ ಮತ್ತು ಉಸಿರಾಟದ ವ್ಯವಸ್ಥೆ, ಅಂದರೆ ಹೃದಯ, ಶ್ವಾಸಕೋಶಗಳು ಮತ್ತು ರಕ್ತನಾಳಗಳ ಕಾರ್ಯಕ್ಷಮತೆ ಉತ್ತಮವಾಗಿರುವುದು ಮುಖ್ಯವಾಗಿದೆ.

ಕು. ವೈದೇಹಿ ಶಿಂದೆ

ರಕ್ತಪರಿಚಲನೆ ಉತ್ತಮವಾಗಿದ್ದರೆ, ವ್ಯಕ್ತಿಯ ಕೆಲಸ ಮಾಡುವ ಸಾಮರ್ಥ್ಯ ಸುಧಾರಿಸುತ್ತದೆ ಮತ್ತು ಇದರಿಂದ ಅವನು ದಣಿಯದೇ ದೀರ್ಘಕಾಲ ದೈಹಿಕ ಶ್ರಮವನ್ನು ಮಾಡಬಹುದು. ತೂಕವನ್ನು ಸಮತೋಲನದಲ್ಲಿಟ್ಟುಕೊಂಡು ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ, ಪಾರ್ಶ್ವವಾಯು (ಸ್ಟ್ರೋಕ್) ಇಂತಹ ಕಾಯಿಲೆಗಳನ್ನು ತಪ್ಪಿಸಲು ಸಹಾಯವಾಗುತ್ತದೆ. ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ‘ಕಾರ್ಡಿಯೋ ವ್ಯಾಯಾಮಗಳನ್ನು ಮಾಡಲಾಗುತ್ತದೆ. ಇದರಲ್ಲಿ ಇಡೀ ದೇಹವನ್ನು ಚುರುಕುಗೊಳಿಸುವ ಚಲನೆಗಳಿಗೆ ಒತ್ತು ನೀಡಲಾಗುತ್ತದೆ, ಉದಾಹರಣೆಗೆ ಓಡುವುದು, ಈಜುವುದು, ಸೈಕಲ್ ಓಡಿಸುವುದು ಇತ್ಯಾದಿ. ಈ ಚಲನೆಗಳಲ್ಲಿ ದೇಹದ ದೊಡ್ಡ ಸ್ನಾಯುಗಳು ಸಕ್ರಿಯವಾಗಿ, ಹೃದಯ ಮತ್ತು ಶ್ವಾಸಕೋಶಗಳು ಹೆಚ್ಚು ಸಾಮರ್ಥ್ಯದಿಂದ ಕೆಲಸ ಮಾಡಲು ಉತ್ತೇಜಿತಗೊಳ್ಳುತ್ತವೆ. ಅದರಿಂದ ವ್ಯಾಯಾಮ ಮಾಡುವಾಗ ಆರಂಭದಲ್ಲಿ ಹೃದಯ ಬಡಿತ ಮತ್ತು ಉಸಿರಾಟದ ವೇಗ ಹೆಚ್ಚಾಗುತ್ತದೆ ಮತ್ತು ಕಾಲಾಂತರದಲ್ಲಿ ಹೃದಯ ಮತ್ತು ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಯ ಪ್ರಯೋಜನಗಳು ಇಡೀ ದೇಹದಲ್ಲಿ ಕಂಡುಬರುತ್ತವೆ, ಉದಾಹರಣೆಗೆ ಆಯಾಸವಿದ್ದರೆ ಅದು ಕಡಿಮೆಯಾಗುತ್ತದೆ, ಅನಗತ್ಯ ಕೊಬ್ಬು ಕಡಿಮೆ ಯಾಗುತ್ತದೆ ಇತ್ಯಾದಿ. ಆದ್ದರಿಂದ, ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ವ್ಯಾಯಾಮದ ಸಂಪೂರ್ಣ ದೇಹದ ಮೇಲೆ ಉತ್ತಮ ಪರಿಣಾಮ ಬೀರಲು ‘ಕಾರ್ಡಿಯೋ ವ್ಯಾಯಾಮಗಳನ್ನು ಮಾಡುವುದು ಆವಶ್ಯಕ.

– ಕು. ವೈದೇಹಿ ಶಿಂದೆ, ಭೌತಿಕೋಪಚಾರ (ಫಿಸಿಯೋಥೆರಪಿ) ಅಭ್ಯಾಸಕಿ, ಫೋಂಡಾ, ಗೋವಾ. (೩೦.೯.೨೦೨೪)