ಪೃಥ್ವಿಗೆ ಮತ್ತು ಪೃಥ್ವಿಯಲ್ಲಿರುವ ಜೀವಗಳಿಗೆ ‘ಸೌರಮಂಡಲದಲ್ಲಿರುವ ನವಗ್ರಹಗಳಿಂದ ಪರಿಣಾಮವಾಗುತ್ತದೆ. ನವಗ್ರಹಗಳಿಂದ ಪ್ರಕ್ಷೇಪಿಸುವ ಸೂಕ್ಷ್ಮಸ್ತರದ ಶಕ್ತಿಯ ಲಹರಿಗಳಿಂದ ವ್ಯಕ್ತಿಯ ಮೇಲೆ ವಿವಿಧ ರೀತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮವಾಗುತ್ತದೆ. ಆದ್ದರಿಂದ ನವಗ್ರಹಗಳನ್ನು ಉಪಾಸನೆಯಿಂದ ಪ್ರಸನ್ನಗೊಳಿಸಿ ಆರಾಧಿಸುವ ಪದ್ಧತಿಯು ಪೃಥ್ವಿಯಲ್ಲಿ ಅನಾದಿ ಕಾಲದಿಂದಲೂ ನಡೆದಿದೆ. ಈ ಆರಾಧನೆಯ ತುಲನಾತ್ಮಕ ಮಹತ್ವ ಮತ್ತು ಆಧ್ಯಾತ್ಮಿಕ ಮಹತ್ವ ಮತ್ತು ಆಧ್ಯಾತ್ಮಿಕ ವೈಶಿಷ್ಟ್ಯಗಳು ಮುಂದಿನಂತಿವೆ.
೧. ನವಗ್ರಹಗಳಿಗೆ ಸಂಬಂಧಿಸಿದ ರತ್ನಗಳನ್ನು ಧರಿಸುವುದು, ಮಂತ್ರಜಪ ಮಾಡುವುದು, ಸ್ತೋತ್ರ ಅಥವಾ ಶ್ಲೋಕಗಳನ್ನು ಪಠಿಸುವುದು, ನವಗ್ರಹಗಳ ಯಜ್ಞವನ್ನು ಮಾಡುವುದು, ನವಗ್ರಹ ಗಳ ಜಪ ಮಾಡುವುದು. ಈ ಆರಾಧನೆಗಳ ಆಧ್ಯಾತ್ಮಿಕ ಮಹತ್ವ
೧ ಅ. ನವಗ್ರಹಗಳ ರತ್ನಗಳ ಮಹತ್ವ : ರತ್ನಗಳಲ್ಲಿ ಪೃಥ್ವಿತತ್ತ್ವ ಹೆಚ್ಚು, ಆಪತತ್ತ್ವ ಕಡಿಮೆ ಮತ್ತು ತೇಜತತ್ತ್ವ ಅತ್ಯಲ್ಪ ಪ್ರಮಾಣದಲ್ಲಿರುವುದ ರಿಂದ ರತ್ನವನ್ನು ಧರಿಸುವುದರಿಂದ ಹೆಚ್ಚೆಂದರೆ ಶೇ. ೨೦ ರಷ್ಟು ಲಾಭವಾಗುತ್ತದೆ. ಉದಾ. ಸೂರ್ಯಗ್ರಹಕ್ಕೆ ಸಂಬಂಧಿಸಿದ ‘ಮಾಣಿಕ್ಯ ರತ್ನವನ್ನು ಧರಿಸುವುದರಿಂದ ರತ್ನವನ್ನು ಧರಿಸುವ ವ್ಯಕ್ತಿಗೆ ಶೇ. ೨೦ ರಷ್ಟು ಲಾಭವಾಗುತ್ತದೆ.
೧ ಆ. ನವಗ್ರಹಗಳ ಯಂತ್ರವನ್ನು ಧರಿಸುವುದು : ನವಗ್ರಹಗಳಿಗೆ ಸಂಬಂಧಿತ ಯಂತ್ರವನ್ನು ಪೂಜಿಸಿದ ನಂತರ ಅಥವಾ ಈ ಯಂತ್ರವನ್ನು ಧರಿಸುವುದರಿಂದ ಹೆಚ್ಚೆಂದರೆ ಶೇ. ೪೦ ರಷ್ಟು ಲಾಭವಾಗು ತ್ತದೆ, ಉದಾ. ಮನೆಯಲ್ಲಿ ಸೂರ್ಯಯಂತ್ರವನ್ನು ಹಾಕುವುದು.
೧ ಇ. ನವಗ್ರಹಗಳ ಮಂತ್ರಜಪ, ಸ್ತೋತ್ರ ಅಥವಾ ಶ್ಲೋಕ ಪಠಿಸುವುದರ ಮಹತ್ವ : ನವಗ್ರಹಗಳ ಮಂತ್ರಜಪ, ಸ್ತೋತ್ರ ಅಥವಾ ಶ್ಲೋಕದಿಂದ ನವಗ್ರಹಗಳಿಗೆ ಸಂಬಂಧಿಸಿದ ತಾರಕ ಅಥವಾ ಮಾರಕ ಶಕ್ತಿ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸುತ್ತದೆ. ಆದ್ದರಿಂದ ನವಗ್ರಹಗಳ ಮಂತ್ರಜಪವನ್ನು ಜಪಿಸಿದರೆ ಹೆಚ್ಚೆಂದರೆ ಶೇ. ೫೦ ರಷ್ಟು ಲಾಭವಾಗುತ್ತದೆ.
೧ ಇ ೧. ಸೂರ್ಯನ ಮಂತ್ರಜಪ : ‘ಓಂ ಹ್ರಾಂ ಹ್ರೀಂ ಹ್ರೌ ಸಃ ಸೂರ್ಯಾಯ ನಮಃ |
೧ ಇ ೨. ಸೂರ್ಯನ ಬೀಜಮಂತ್ರ : ‘ಓಂ ಘೃಣಿಃ ಸೂರ್ಯಾಯ ನಮಃ |
– ಸಂದರ್ಭ : hಣಣಠಿs://ಠಿಚಿಟಿಜiಣಟಚಿಟiಣಣಡಿiveಜi.ಛಿom/೨೦೨೧/೦೭/suಡಿಥಿಚಿ-gಡಿಚಿh-ಞe-mಚಿಟಿಣಡಿಚಿ.hಣmಟ
೧ ಇ ೩. ಸೂರ್ಯ ಗಾಯತ್ರಿ ಮಂತ್ರ : ‘ಭಾಸ್ಕರಾಯ ವಿದ್ಮಹೇ | ಮಹದ್ಯುತಿಕರಾಯ ಧೀಮಹಿ | ತನ್ನೋ ಆದಿತ್ಯ ಪ್ರಚೋದಯಾತ್ ||
೧ ಇ ೪. ನವಗ್ರಹಸ್ತೋತ್ರದಲ್ಲಿನ ಸೂರ್ಯನ ಪೌರಾಣಿಕ ಮಂತ್ರ
ಜಪಾಕುಸುಮಸಙ್ಕಾಶಂ, ಕಾಶ್ಯಪೇಯಂ ಮಹದ್ಯುತಿಮ್ |
ತಮೋರಿಂ ಸರ್ವಪಾಪಘ್ನಂ, ಪ್ರಣತೋಽಸ್ಮಿ ದಿವಾಕರಮ್ ||
– ನವಗ್ರಹಸ್ತೋತ್ರ, ಶ್ಲೋಕ ೧
ಅರ್ಥ : ದಾಸವಾಳದ ಹೂವಿನಂತೆ ಕೆಂಪು ಬಣ್ಣದ ದೇಹಕಾಂತಿಯುಳ್ಳ, ಕಶ್ಯಪ ಋಷಿಗಳ ಕುಲದಲ್ಲಿ ಜನಿಸಿದ ಅತ್ಯಂತ ತೇಜಸ್ವಿ, ಕತ್ತಲಿನ ಶತ್ರು ಮತ್ತು ಎಲ್ಲ ರೀತಿಯ ಪಾಪಗಳನ್ನು ನಾಶ ಮಾಡುವ ಹಗಲಿನ ರಾಜನಾದ, ‘ಸೂರ್ಯನಿಗೆ ನಾನು ನಮಸ್ಕರಿಸುತ್ತೇನೆ.
೧ ಇ ೫. ಸೂರ್ಯನಿಗೆ ಸಂಬಂಧಿಸಿದ ವಿವಿಧ ಸ್ತೋತ್ರಗಳು : ಆದಿತ್ಯ ಸ್ತೋತ್ರ, ಆದಿತ್ಯಹೃದಯ ಸ್ತೋತ್ರ, ಸೂರ್ಯಕವಚ, ಸೂರ್ಯಸ್ತುತಿ, ಸೂರ್ಯಾಷ್ಟಕ, ಸೂರ್ಯ ದ್ವಾದಶನಾಮ ಸ್ತೋತ್ರ, ಶ್ರೀ ಸೂರ್ಯಸ್ತವರಾಜ ಸ್ತೋತ್ರ ಮತ್ತು ಶ್ರೀ ಸೂರ್ಯ ಸಹಸ್ರನಾಮ ಸ್ತೋತ್ರ
೧ ಈ. ನವಗ್ರಹಗಳ ಯಜ್ಞ ಮಾಡುವುದು : ನವಗ್ರಹಗಳಿಗಾಗಿ ಯಜ್ಞವನ್ನು ಮಾಡಿದರೆ ನವಗ್ರಹಗಳು ಪ್ರಸನ್ನಗೊಂಡು ಆಶೀರ್ವಾದ ನೀಡುತ್ತವೆ. ಅವುಗಳಿಗಾಗಿ ಮಾಡಿದ ಯಜ್ಞದಿಂದ ಶೇ. ೬೦ ರಷ್ಟು ಲಾಭವಾಗುತ್ತದೆ, ಉದಾ. ನವಗ್ರಹಹೋಮ ಮತ್ತು ಸೂರ್ಯಹೋಮ
೧ ಉ. ನವಗ್ರಹಗಳ ಜಪದ ಮಹತ್ವ : ನವಗ್ರಹಗಳ ಜಪದಿಂದ ನವಗ್ರಹಗಳಿಗೆ ಸಂಬಂಧಿತ ಚೈತನ್ಯ ಕಾರ್ಯನಿರತವಾಗುತ್ತದೆ. ಆದ್ದರಿಂದ ನವಗ್ರಹಗಳ ಜಪದಿಂದ ಶೇ. ೭೦ ರಷ್ಟು ಲಾಭವಾಗುತ್ತದೆ.
೧ ಊ ೧. ಸೂರ್ಯನ ಜಪ : ‘ಓಂ ಸೂರ್ಯಾಯ ನಮಃ |
೧ ಊ. ನವಗ್ರಹಗಳಿಗೆ ಸಂಬಂಧಿಸಿದ ಇತರ ಉಪಾಸನೆಗಳನ್ನು ಮಾಡುವುದು : ನವಗ್ರಹದೇವತೆಗಳಿಗೆ ನಮಸ್ಕರಿಸುವುದು, ಅವರ ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕುವುದು, ನವಗ್ರಹಗಳಿಗೆ ಸಂಬಂಧಿಸಿದ ಹೂವು ಅಥವಾ ಎಲೆಗಳನ್ನು ಅರ್ಪಿಸುವುದು, ಇಂತಹ ಇತರ ಆರಾಧನೆಗೆ ಕೇವಲ ಶೇ. ೧೦ ರಷ್ಟೇ ಮಹತ್ವ ಇದೆ.
೧ ಊ ೧. ಸೂರ್ಯನ ಇತರ ಆರಾಧನೆ : ಸೂರ್ಯನಿಗೆ ನಮಸ್ಕಾರ ಮಾಡುವುದು, ಸೂರ್ಯನ ಕಡೆಗೆ ನೋಡಿ ಅರ್ಘ್ಯ ನೀಡುವುದು ಅಥವಾ ಸೂರ್ಯನಮಸ್ಕಾರಗಳನ್ನು ಹಾಕುವುದು

೨. ನವಗ್ರಹಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಆರಾಧನೆಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳು
೨ ಅ. ನವಗ್ರಹಗಳಿಗೆ ಸಂಬಂಧಿತ ವಿವಿಧ ರೀತಿಯ ಆರಾಧನೆ ಮಾಡುವುದರ ಮಹತ್ವ
| ಆರಾಧನೆ (ಉಪಾಸನೆ) | ಆರಾಧನೆಯ ಮಹತ್ವ (ಶೇ.) (ಟಿಪ್ಪಣಿ) |
| ೧. ನವಗ್ರಹಗಳ ರತ್ನಗಳನ್ನು ಧರಿಸುವುದ | 20 |
| ೨. ನವಗ್ರಹಗಳ ಯಂತ್ರದ ಪೂಜೆ ಅಥವಾ ಅವುಗಳನ್ನು ಧರಿಸುವುದ | 50 |
| ೩. ನವಗ್ರಹಗಳ ಮಂತ್ರಜಪ, ಶ್ಲೋಕ ಅಥವಾ ಸ್ತೋತ್ರಗಳ ಪಠಣ | 50 |
| ೪. ನವಗ್ರಹಗಳಿಗಾಗಿ ಹವನ | 60 |
| ೫. ನವಗ್ರಹಗಳ ನಾಮಜಪ | 70 |
| ೬. ನವಗ್ರಹಗಳಿಗೆ ಸಂಬಂಧಿಸಿದ ಇತರ ಆರಾಧನ | 10 |
೨ ಆ. ಆರಾಧನೆ, ಪಂಚತತ್ತ್ವಗಳ ಕಾರ್ಯನಿರತ ತತ್ತ್ವ ಮತ್ತು ಕಾರ್ಯನಿರತ ತತ್ತ್ವದ ಸ್ತರ
| ಆರಾಧನೆ (ಉಪಾಸನೆ) | ಪಂಚತತ್ತ್ವಗಳಲ್ಲಿನ ಕಾರ್ಯನಿರತ ತತ್ತ್ವ | ಕಾರ್ಯನಿರತ ತತ್ತ್ವದ ಸ್ತರ |
| ೧. ನವಗ್ರಹಗಳಿಗಾಗಿ ಹವನ | ವಾಯು ಮತ್ತು ಆಕಾಶ | ಸಗುಣ – ನಿರ್ಗುಣ |
| ೨. ನವಗ್ರಹಗಳ ಮಂತ್ರಜಪ, ಶ್ಲೋಕ ಅಥವಾ ಸ್ತೋತ್ರ ಪಠಣ | ಆಕಾಶ | ಸಗುಣ – ನಿರ್ಗುಣ |
| ೩. ನವಗ್ರಹಗಳ ನಾಮಜಪ | ಆಕಾಶ | ನಿರ್ಗುಣ – ಸಗುಣ |
| ೪. ನವಗ್ರಹಗಳಿಗೆ ಸಂಬಂಧಿತ ಇತರ ಆರಾಧನ | ಸಂಮಿಶ್ರ | ಸಗುಣ – ನಿರ್ಗುಣ |
| ೫. ನವಗ್ರಹಗಳ ಯಂತ್ರದ ಪೂಜೆ ಅಥವಾ ಅವುಗಳನ್ನು ಧರಿಸುವುದು | ತೇಜ | ಸಗುಣ – ನಿರ್ಗುಣ |
| ೬. ನವಗ್ರಹಗಳ ರತ್ನಗಳನ್ನು ಧರಿಸುವುದು | ಪೃಥ್ವಿ | ಸಗುಣ |
೩. ನವಗ್ರಹಗಳಿಂದಾಗುವ ವಿವಿಧ ರೀತಿಯ ಲಾಭ ಮತ್ತು ಅವುಗಳ ಪ್ರಮಾಣ
| ನವಗ್ರಹಗಳ ಆರಾಧನೆಯಿಂದಾಗುವ ವಿವಿಧ ರೀತಿಯ ಲಾಭಗಳು | ಅತೀಹೆಚ್ಚು ಲಾಭವಾಗುವ ಪ್ರಮಾಣ (ಶೇ.) (ಟಿಪ್ಪಣಿ) |
| ೧. ಶಾರೀರಿಕ | 30 |
| ೨. ಮಾನಸಿಕ | 30 |
| ೩. ಬೌದ್ಧಿಕ | 30 |
| ೪. ಸಾಮಾಜಿಕ | 20 |
| ೫. ಆಧ್ಯಾತ್ಮಿಕ | 30 |
೪. ವಿವಿಧ ಯುಗಗಳಲ್ಲಿ ವ್ಯಕ್ತಿಯ ಪ್ರಾರಬ್ಧದ ಪ್ರಮಾಣ ಮತ್ತು ನವಗ್ರಹಗಳ ಆರಾಧನೆ ಮಾಡುವುದರಿಂದ ಆಗುವ ಲಾಭದ ಪ್ರಮಾಣ
| ಯುಗ | ಪ್ರಾರಬ್ಧದ ಪ್ರಮಾಣ (ಶೇ.) | ನವಗ್ರಹಗಳ ಆರಾಧನೆಯಿಂದ ಆಗುವ ಲಾಭದ ಪ್ರಮಾಣ (ಶೇ.) |
| ೧. ಸತ್ಯಯುಗ | 10 | 30 |
| ೨. ತ್ರೇತಾಯುಗ | 30 | 30 |
| ೩. ದ್ವಾಪರಯುಗ | 50 | 20 |
| ೪. ಕಲಿಯುಗ | 65 | 10 |
೪ ಅ. ನವಗ್ರಹಗಳ ಆರಾಧನೆಗಿಂತ ಉಚ್ಚ ದೇವತೆಗಳ ಆರಾಧನೆ ಮಾಡುವುದರ ಮಹತ್ವ : ಇದರಿಂದ ನಮ್ಮ ಗಮನಕ್ಕೆ ಬರುವುದೇನೆಂದರೆ, ಕಲಿಯುಗದಲ್ಲಿ ನವಗ್ರಹಗಳ ಆರಾಧನೆಯಿಂದ ಹೆಚ್ಚೆಂದರೆ ಶೇ. ೧೦ ರಷ್ಟು ಮಾತ್ರ ಲಾಭವಾಗುತ್ತದೆ. ಆದ್ದರಿಂದ ಸಾಧಕರು ನವಗ್ರಹಗಳ ಆರಾಧನೆಗಿಂತ ನವಗ್ರಹಗಳ ಮೇಲೆ ಪ್ರಭುತ್ವವಿರುವ ಉಚ್ಚ ದೇವತೆಗಳ ಆರಾಧನೆ ಮಾಡಿದರೆ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಲಾಭವಾಗುವುದು.
೫. ನವಗ್ರಹಗಳ ಆರಾಧನೆಗೆ ಸಂಬಂಧಿಸಿದ ವಿವಿಧ ಘಟಕಗಳು ಮತ್ತು ಅವುಗಳ ಲಾಭವಾಗುವ ಪ್ರಮಾಣ
| ನವಗ್ರಹಗಳ ಆರಾಧನೆಗೆ ಸಂಬಂದಿತ ವಿವಿಧ ಘಟಕಗಳು | ವಿವಿಧ ಘಟಕಗಳಿಂದ ನವಗ್ರಹಗಳ ಆರಾಧನೆಯಿಂದ ಲಾಭವಾಗುವ ಪ್ರಮಾಣ (ಶೇ.)(ಟಿಪ್ಪಣಿ) |
| ೧. ಕಾಲಮಹಾತ್ಮೆ | 30 |
| ೨. ಆರಾಧಕರ ಮೇಲೆ ಗುರುಕೃಪೆ ಇರುವುದು | 50 |
| ೩. ಆರಾಧಕರ ಪ್ರಾರಬ್ಧ | 20 |
೫ ಅ. ಸಾಧನೆ ಮಾಡಿ ಗುರುಕೃಪೆಯನ್ನು ಸಂಪಾದಿಸುವ ಮಹತ್ವ :
ಕಾಲಮಹಾತ್ಮೆ ಮತ್ತು ಪ್ರಾರಬ್ಧದ ಪ್ರಮಾಣವನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ; ಆದರೆ ಆರಾಧಕನು ಒಳ್ಳೆಯ ಸಾಧನೆ ಮಾಡಿದರೆ ಅವನ ಮೇಲೆ ಗುರುಕೃಪೆಯಾಗಿ ಅವನ ಸಾಧನೆ ಚೆನ್ನಾಗಿ ಆಗುತ್ತದೆ. ಆದ್ದರಿಂದ ಅವನಿಗೆ ಪ್ರಾರಬ್ಧವನ್ನು ಎದುರಿಸಲು ಆಧ್ಯಾತ್ಮಿಕ ಶಕ್ತಿ ದೊರಕುತ್ತದೆ ಮತ್ತು ಶ್ರೀಗುರು ಗಳ ಕೃಪೆಯೊಂದಿಗೆ ಅವನಿಗೆ ನವಗ್ರಹಗಳ ಕೃಪೆಯೂ ಪ್ರಾಪ್ತವಾಗುತ್ತದೆ.
– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫) (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ.

ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯವಾಗಿದೆ !
ಅತಿಯಾಗಿ ಶೋಕಿಸುವುದು ಮೃತವ್ಯಕ್ತಿಯ ಮುಂದಿನ ಪ್ರಯಾಣಕ್ಕೊಂದು ಅಡ್ಡಿ !
ದೇವಸ್ಥಾನಗಳಲ್ಲಿ ನಡೆಯುವ ಕಳ್ಳತನಗಳು ಯಾವಾಗ ನಿಲ್ಲುತ್ತವೆ ?
ಯಜ್ಞದ ಮಹತ್ವ !
‘ಜಾತ್ಯತೀತ’ ಮತ್ತು ‘ಸಮಾಜವಾದ’ ಶಬ್ದಗಳನ್ನು ತೆಗೆದುಹಾಕಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರೀತಿಯಿಂದಾಗಿ ‘ಎಲ್ಲ ಸಾಧಕರಲ್ಲಿರುವ ಕೌಟುಂಬಿಕ ಭಾವನೆ’ಯೇ ಸನಾತನ ಸಂಸ್ಥೆಯ ಅದ್ವಿತೀಯ ವೈಶಿಷ್ಟ್ಯವಾಗಿದೆ !