‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಕಾರ್ಯಸ್ಥಳದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಗಮನದ ನಂತರ ವಾತಾವರಣದಲ್ಲಾದ ಬದಲಾವಣೆ !

‘೯ ಮೇ ೨೦೨೫ ರಂದು ನಾನು ಸಂಜೆ ೬.೧೫ ಕ್ಕೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಡೆಯುವ ಕಾರ್ಯಸ್ಥಳವನ್ನು ನೋಡಲು ಕೆಲವು ಸಂತರೊಂದಿಗೆ ಹೋಗಿದ್ದೆನು. ಅಲ್ಲಿ ವೇದಿಕೆ ಮತ್ತು ಡೇರೆಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿತ್ತು. ಆಗ ಆಕಾಶವು ನಿರ್ಮಲವಾಗಿತ್ತು. ಅದೇ ಸಮಯಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೈದಾನಕ್ಕೆ ಆಗಮಿಸಿದರು. ಅವರು ಮೈದಾನಕ್ಕೆ ಬಂದ ತಕ್ಷಣ ವಾತಾವರಣದಲ್ಲಿ ಬದಲಾವಣೆಯಾದ ಅನುಭವವಾಯಿತು.

ಸದ್ಗುರು (ಡಾ.) ಚಾರುದತ್ತ ಪಿಂಗಳೆ

೧. ವೇದಿಕೆಯನ್ನು ನಿರ್ಮಿಸುವ ಕೆಲಸ ನಡೆಯುತ್ತಿದ್ದ ಸ್ಥಳದ ಹಿಂಭಾಗದಲ್ಲಿ ಆಕಾಶವನ್ನು ನೋಡಿದಾಗ, ಮೋಡಗಳ ಆಕಾರವು ಕೈಲಾಸ ಪರ್ವತದಂತೆ ಕಾಣಿಸಿತು.

೨. ಆಕಾಶದಲ್ಲಿ ಕೈಲಾಸ ಪರ್ವತದ ಆಕಾರದ ಪಕ್ಕದಲ್ಲಿಯೇ ಚಿನ್ನದ ಬಣ್ಣದ ಛಾಯೆ ಮೂಡಿ, ಚಿನ್ನದ ಕಿರಣಗಳು ಎಲ್ಲೆಡೆ ಹರಡಿಕೊಂಡಿದ್ದವು.

೩. ವಾಸ್ತವದಲ್ಲಿ, ಸೂರ್ಯಾಸ್ತದ ಸಮಯದಲ್ಲಿ ಸೂರ್ಯನು ಕೆಂಪು ಬಣ್ಣದಲ್ಲಿರುತ್ತಾನೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಗಮನದ ನಂತರ ‘ಅವರ ಪ್ರಭಾವಲಯವು ಸುವರ್ಣಮಯವಾಗಿದ್ದು, ಅದರ ಪ್ರತ್ಯಕ್ಷ ರೂಪವೇ ವಾತಾವರಣದಲ್ಲಿ ಎಲ್ಲೆಡೆ ಹರಡಿದ್ದ ಚಿನ್ನದ ಬಣ್ಣದ ಕಿರಣಗಳು’ ಎಂದು ನನಗೆ ಅನಿಸಿತು.

೪. ಆ ಸಮಯದಲ್ಲಿ ‘ಆಕಾಶತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ನನಗೆ ಅನುಭವವಾಯಿತು.’

– ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ (೧೧ ಮೇ ೨೦೨೫)