
ಫೋಂಡಾ – ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐ.ಎಂ.ಎ.) ಫೋಂಡಾ ಶಾಖೆ’ಯ ವತಿಯಿಂದ ‘ಡಾಕ್ಟರ್ಸ್ ಡೇ’ ನಿಮಿತ್ತ 3 ಆಧುನಿಕ ವೈದ್ಯರನ್ನು ಸನ್ಮಾನಿಸಲಾಯಿತು. ಇದರಲ್ಲಿ ಸನಾತನ ಸಂಸ್ಥೆಯ ಸಾಧಕರಾದ ಡಾ. ಪಾಂಡುರಂಗ ಮರಾಠೆ ಹಾಗೂ ಡಾ. ಗಜಾನನ ನಾಯಿಕ ಮತ್ತು ಡಾ. ಸೂರಜ ಕಾಣೇಕರ್ ಸೇರಿದ್ದರು. ‘ಐ.ಎಂ.ಎ. ಗೋವಾ’ ಅಧ್ಯಕ್ಷರಾದ ಡಾ. ದತ್ತಾರಾಮ ದೇಸಾಯಿ ಅವರು ಎಲ್ಲರಿಗೂ ಸನ್ಮಾನ ಮಾಡಿದರು.

‘ಡಾಕ್ಟರ್ಸ್ ಡೇ’ ನಿಮಿತ್ತ ‘ದಿಲಾಸಾ ಪೆಲಿಯೇಟಿವ್’ ಕೇಂದ್ರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ‘ಐ.ಎಂ.ಎ.’ಯ ಫೋಂಡಾ ಶಾಖೆಯ ಅಧ್ಯಕ್ಷರಾದ ಡಾ. ಅಜಯ ಪೆಡ್ನೇಕರ್, ಐ.ಎಂ.ಎ. ಫೋಂಡಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಸಂತೋಷ ಉಸಗಾಂವ್ಕರ್, ಉಪಾಧ್ಯಕ್ಷರಾದ ಡಾ. ಸುಭಾಷ ಶಿಕೇರ್ಕರ್ ಹಾಗೂ ಇತರ ಪದಾಧಿಕಾರಿಗಳು ಮತ್ತು ಅನೇಕ ಆಧುನಿಕ ವೈದ್ಯರು (ಡಾಕ್ಟರ್‌ಗಳು) ಉಪಸ್ಥಿತರಿದ್ದರು.

Doctors’ Day Honours | Ponda, Goa
IMA Ponda Branch felicitated Dr. Pandurang Marathe (@SanatanSanstha), Dr. Gajanan Naik & Dr. Suraj Kanekar for decades of selfless service.
Dr. Marathe was honoured for 40+ yrs in medicine, incl. 20 yrs of free treatment to thousands via… pic.twitter.com/sJb6xVQASJ
— Sanatan Prabhat (@SanatanPrabhat) July 5, 2025
ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ನಿಸ್ವಾರ್ಥ, ನಿರಪೇಕ್ಷ ಹಾಗೂ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ್ದಕ್ಕಾಗಿ ಡಾ. ಪಾಂಡುರಂಗ ಮರಾಠೆ ಅವರನ್ನು ಶಾಲು, ಶ್ರೀಫಲ, ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಡಾ. ಪಾಂಡುರಂಗ ಮರಾಠೆ ಅವರು ತಮ್ಮ ವೈದ್ಯಕೀಯ ವೃತ್ತಿಜೀವನದ ಮೊದಲ 11 ವರ್ಷಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದರು. ನಂತರ ಅವರು ಸನಾತನ ಸಂಸ್ಥೆ ಎಂಬ ಆಧ್ಯಾತ್ಮ ಪ್ರಸಾರ ಮಾಡುವ ಸಂಸ್ಥೆಯ ಸಂಪರ್ಕಕ್ಕೆ ಬಂದ ನಂತರ ಕಳೆದ 20 ವರ್ಷಗಳಲ್ಲಿ ಸಂಸ್ಥೆಯ ವತಿಯಿಂದ ಸಹಸ್ರಾರು ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಿದ್ದಾರೆ. ಅದಕ್ಕೂ ಮೊದಲು ಅವರು ಗ್ರಾಮೀಣ ಪ್ರದೇಶಗಳಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸಿದ್ದರು. ಈ ಎಲ್ಲ ಸೇವೆಗಳನ್ನು ಪರಿಗಣಿಸಿ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಡಾ. ಸೂರಜ ಕಾಣೇಕರ್ ಅವರು ಯೋಗಗುರು ರಾಮದೇವ ಬಾಬಾ ಅವರ ಪತಂಜಲಿ ಯೋಗ ಸಮಿತಿಯ ಕೆಲವು ಕಾಲ ಗೋವಾ ಮುಖ್ಯಸ್ಥರಾಗಿದ್ದರು. ಅವರು ಈಗಲೂ ಸಮಾಜಕ್ಕೆ ಯೋಗಾಸನಗಳ ಮಹತ್ವವನ್ನು ತಿಳಿಸಲು ತರಗತಿಗಳನ್ನು ನಡೆಸುತ್ತಾರೆ.
ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸು ಪಡೆದ ವಿದ್ಯಾರ್ಥಿಗಳು ಮತ್ತು ಪ್ಯಾರಿಸ್‌ನಲ್ಲಿ ‘ಪ್ಯಾರಾ ಒಲಿಂಪಿಕ್’ನಲ್ಲಿ (ಮಂದಬುದ್ಧಿ ಮಕ್ಕಳ ಕ್ರೀಡಾಸ್ಪರ್ಧೆಯಲ್ಲಿ) ಭಾರತವನ್ನು ಪ್ರತಿನಿಧಿಸಿದ ಫೋಂಡಾ ಮೂಲದ ದೃಷ್ಟಿ ದೋಷವುಳ್ಳ ಕುಮಾರಿ ಸಾಕ್ಷಿ ಈಶ್ವರ ಕಾಳೆ ಅವರಿಗೂ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
![]() |
ಡಾ. ಪಾಂಡುರಂಗ ಮರಾಠೆ ಅವರಿಗೆ ಲಭಿಸಿದ ಪ್ರಮಾಣಪತ್ರ ಮತ್ತು ಸ್ಮರಣಿಕೆ |
ಡಾ. ಪಾಂಡುರಂಗ ಮರಾಠೆ ಅವರು ವ್ಯಕ್ತಪಡಿಸಿದ ಕೃತಜ್ಞತೆ!

ಆಧುನಿಕ ವೈದ್ಯರಾಗಲು ಸಹಾಯ ಮಾಡಿದ ಎಲ್ಲ ಜನರು, ಶಿಕ್ಷಕರು ಹಾಗೂ ವೈದ್ಯರಿಗೆ ಮತ್ತು ಈಗಲೂ ಸಹಾಯ ಮಾಡುತ್ತಿರುವವರಿಗೆ ಡಾ. ಪಾಂಡುರಂಗ ಮರಾಠೆ ಅವರು ಕೃತಜ್ಞತೆ ಸಲ್ಲಿಸಿದರು. ಕೇವಲ ಆಧುನಿಕ ವೈದ್ಯರಾಗಿ ಮಾತ್ರವಲ್ಲದೆ, ಉತ್ತಮ ಆಧುನಿಕ ವೈದ್ಯರಾಗಲು ಹಾಗೂ ಆನಂದಮಯ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತಿರುವ ತಮ್ಮ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಚರಣಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ