
ಕರ್ಣಾವತಿ (ಗುಜರಾತ) – ಗುಜರಾತನಲ್ಲಿ ವಾಸಿಸುತ್ತಿದ್ದ 250 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಜುಲೈ 2 ರಂದು ಗಡೀಪಾರು ಮಾಡಲಾಯಿತು. ಈ ಅಕ್ರಮ ವಲಸಿಗರನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ವಡೋದರಾ ವಾಯುನೆಲೆಯಿಂದ ಢಾಕಾ (ಬಾಂಗ್ಲಾದೇಶ)ಗೆ ಕಳುಹಿಸಲಾಯಿತು. ಕಟ್ಟುನಿಟ್ಟಿನ ಭದ್ರತೆಯಲ್ಲಿ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಈ ಕಾರ್ಯಾಚರಣೆಯನ್ನು ನಡೆಸಿದವು. ಯಾವುದೇ ಗೊಂದಲ ಉಂಟಾಗದಂತೆ, ಎಲ್ಲಾ ಅಕ್ರಮ ವಲಸಿಗರ ಕೈಗಳನ್ನು ಕಟ್ಟಲಾಗಿತ್ತು.

ಈ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಕರ್ಣಾವತಿ (ಅಹಮದಾಬಾದ), ಸೂರತ, ವಡೋದರಾ ಮತ್ತು ರಾಜಕೋಟನಂತಹ ವಿವಿಧ ನಗರಗಳಿಂದ ಪೊಲೀಸರ ಮೇಲ್ವಿಚಾರಣೆಯಲ್ಲಿ ಬಸ್ಸುಗಳ ಮೂಲಕ ಕರೆತರಲಾಯಿತು. ಕಳೆದ 2 ತಿಂಗಳಲ್ಲಿ 1 ಸಾವಿರದ 200 ಕ್ಕೂ ಹೆಚ್ಚು ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ವಾಪಸ್ಸು ಕಳುಹಿಸಲಾಗಿದೆ. ನಕಲಿ ಆಧಾರ ಕಾರ್ಡ್, ಪಾನ ಕಾರ್ಡ್‌ಗಳಂತಹ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರು ಅವರ ಗುರುತನ್ನು ಪತ್ತೆ ಮಾಡುತ್ತಿದ್ದಾರೆ.
✈️ 250 Bangladeshi infiltrators deported from Gujarat with hands tied!
🛡️ A strong message to illegal entrants.
📍 All had fake IDs, picked from 4 cities.
🔁 Over 1,200 deported in 2 months — crackdown intensifies!
⚠️ Action must continue daily with zero re-entry!… pic.twitter.com/cTMZTKyvjA
— Sanatan Prabhat (@SanatanPrabhat) July 5, 2025
ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು !
ಅಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ವಿಶೇಷವಾಗಿ ದೊಡ್ಡ ನಗರಗಳಲ್ಲಿ ಅಕ್ರಮ ವಲಸಿಗರ ಮೇಲೆ ನಿಗಾ ಇಡಲಾಗುತ್ತಿದೆ. ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ನಾಗರಿಕರಿಗೂ ಮನವಿ ಮಾಡಲಾಗಿದೆ.
ಸಂಪಾದಕೀಯ ನಿಲುವುಇಂತಹ ಕ್ರಮಗಳು ದೇಶಾದ್ಯಂತ ಪ್ರತಿದಿನ ನಡೆಯಬೇಕು ಮತ್ತು ಅದೇ ಸಮಯದಲ್ಲಿ, ಈ ಅಕ್ರಮ ವಲಸಿಗರು ಮತ್ತೆ ಭಾರತಕ್ಕೆ ನುಸುಳದಂತೆ ಅಷ್ಟೇ ಜಾಗರೂಕತೆಯಿಂದ ಗಮನಹರಿಸಬೇಕು! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed