
ನವದೆಹಲಿ – ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಳೆದ 17 ದಿನಗಳಿಂದ ನಾಪತ್ತೆಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ಯಾವುದೇ ಸಾರ್ವಜನಿಕ ಹೇಳಿಕೆಗಳು ಕಂಡುಬಂದಿಲ್ಲ. ಅವರ ಯಾವುದೇ ಸಂದರ್ಶನಗಳು ಪ್ರಕಟವಾಗಿಲ್ಲ. ಮತ್ತೊಂದೆಡೆ, ಅವರ ಆಪ್ತ ಅಧಿಕಾರಿಗಳನ್ನು ಸಹ ಬದಲಾಯಿಸಲಾಗಿದೆ. ಜುಲೈ 6 ಮತ್ತು 7 ರಂದು ಬ್ರೆಜಿಲ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಅವರು ಭಾಗವಹಿಸುವುದಿಲ್ಲ. ಕಳೆದ 12 ವರ್ಷಗಳಲ್ಲಿ ಅವರು ಈ ಸಭೆಯಲ್ಲಿ ಭಾಗವಹಿಸದಿರುವುದು ಇದೇ ಮೊದಲು. ಕೆಲವು ದಿನಗಳ ಹಿಂದೆ, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಚೀನಾ ಸಾಮ್ರಾಟನ ಅಂತ್ಯವಾಗಲಿದೆ” ಎಂದು ಭವಿಷ್ಯ ನುಡಿದಿದ್ದರು. ಅದು ಈಗ ನಿಜವಾಗುತ್ತದೆಯೇ? ಚೀನಾದಲ್ಲಿ ಅಧಿಕಾರ ಬದಲಾವಣೆಯಾಗಲಿದೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಕ್ಸಿ ಜಿನ್‌ಪಿಂಗ್ ಮೇ 7 ರಿಂದ 10, 2025 ರವರೆಗೆ ರಷ್ಯಾ ಪ್ರವಾಸದಲ್ಲಿದ್ದರು. ಆ ನಂತರ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಯಾವುದೇ ಹೇಳಿಕೆ ಪ್ರಕಟವಾಗಿಲ್ಲ. ಯಾವುದೇ ಫೋಟೋ ಕೂಡ ಬಿಡುಗಡೆಯಾಗಿಲ್ಲ. ಹಾಗೆಯೇ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಒಂದೂ ಪೋಸ್ಟ್ ಕಂಡುಬಂದಿಲ್ಲ.
ಕ್ಸಿ ಜಿನ್‌ಪಿಂಗ್ ಅನಾರೋಗ್ಯವಾಗಿರುವ ಸಾಧ್ಯತೆ
ಕ್ಸಿ ಜಿನ್‌ಪಿಂಗ್ ಅವರಿಗೆ ಗಂಭೀರ ಕಾಯಿಲೆ ಇರಬಹುದು. ಕೆಲವು ದಿನಗಳ ಹಿಂದೆ ಬೆಲಾರಸ್ ಅಧ್ಯಕ್ಷರ ಭೇಟಿಯ ಸಮಯದಲ್ಲಿ ಅವರ ಆರೋಗ್ಯ ಸರಿ ಇರಲಿಲ್ಲ.
ಚೀನಾದಲ್ಲಿ ಅಧಿಕಾರ ಬದಲಾವಣೆಯ ಸಾಧ್ಯತೆ
ಚೀನಾದಲ್ಲಿ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ’ ಒಂದೇ ಪಕ್ಷವಿದೆ. ಈ ಪಕ್ಷದ ಪ್ರಧಾನ ಕಾರ್ಯದರ್ಶಿಯೇ ಅಧ್ಯಕ್ಷ ಮತ್ತು ಮಿಲಿಟರಿಯನ್ನು ನಿಯಂತ್ರಿಸುವ ಆಯೋಗದ ಮುಖ್ಯಸ್ಥರಾಗಿರುತ್ತಾರೆ. ಪ್ರಸ್ತುತ, ಕ್ಸಿ ಜಿನ್‌ಪಿಂಗ್ ಅಧ್ಯಕ್ಷ ಸ್ಥಾನದೊಂದಿಗೆ ಈ ಎರಡೂ ಹುದ್ದೆಗಳನ್ನು ಹೊಂದಿದ್ದಾರೆ; ಆದರೆ ಪ್ರಸ್ತುತ, ಎಲ್ಲಾ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಅವರಿಂದ ಕಸಿದುಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. ಈಗ ಈ ಅಧಿಕಾರವು ‘ಏಜೆನ್ಸಿ ಆಫ್ ಡಿಸಿಷನ್ ಮೇಕಿಂಗ್’ ಎಂಬ ಹೊಸ ಸಮಿತಿಗೆ ವರ್ಗಾವಣೆಯಾಗಿದೆ. ಇದರಿಂದಾಗಿ ಕ್ಸಿ ಜಿನ್‌ಪಿಂಗ್ ವಿರುದ್ಧ ರಾಜಕೀಯ ಅಸ್ಥಿರತೆ ನಡೆಯುತ್ತಿದೆ ಎಂದು ಊಹಿಸಲಾಗಿದೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid