
ಕನ್ನೂರು (ಕೇರಳ) – ಗುರುಕುಲದಲ್ಲಿ ವೈದಿಕ ಶಿಕ್ಷಣ ಪಡೆದ ಕನ್ನೂರು ನಿವಾಸಿ ಗೋವಿಂದ ಕೃಷ್ಣನ್ ಎಂ. ಶೀಘ್ರದಲ್ಲೇ ತಿರುವನಂತಪುರಂನ ಥುಂಬಾದಲ್ಲಿರುವ ‘ಇಸ್ರೋ’ದ ಪ್ರಮುಖ ಕೇಂದ್ರವಾದ ‘ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ’ದಲ್ಲಿ ವಿಜ್ಞಾನಿಯಾಗಿ ಸೇರಲಿದ್ದಾರೆ.
೧. ವೈದಿಕ ಅಧ್ಯಯನದಲ್ಲಿ ಪ್ರಾವೀಣ್ಯತೆ ಪಡೆದಿದ್ದ ಗೋವಿಂದ, ಅವರ ಗುರುಕುಲದ ಸಹಪಾಠಿಗಳು ಪುರೋಹಿತಶಾಹಿಯತ್ತ ಒಲವು ತೋರಿದಾಗಲೂ ವಿಜ್ಞಾನದ ಕಡೆಗೆ ಆಸಕ್ತಿ ಬೆಳೆಸಿಕೊಂಡರು. “ಆಧ್ಯಾತ್ಮ ಮತ್ತು ವಿಜ್ಞಾನ ಒಟ್ಟಾಗಿ ಇರಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ; ಆದರೆ ಇದು ಸಾಧ್ಯ ಎಂದು ನಾನು ಸಾಬೀತುಪಡಿಸಿದ್ದೇನೆ” ಎಂದು ಗೋವಿಂದ ಹೇಳುತ್ತಾರೆ.
೨. ಅವರು ಮಾತು ಮುಂದುವರೆಸಿ ,”ನನ್ನ ಜೀವನದ ಒಂದು ಹಂತದಲ್ಲಿ ನಾನು ವೈದಿಕ ಶಿಕ್ಷಣಕ್ಕೆ ನನ್ನ ಅತ್ಯುತ್ತಮ ಪ್ರಯತ್ನವನ್ನು ನೀಡಿದೆ ಮತ್ತು ಎರಡನೇ ಹಂತದಲ್ಲಿ ವಿಜ್ಞಾನಕ್ಕೆ ನನ್ನ ಎಲ್ಲವನ್ನೂ ನೀಡಿದೆ. ಆದರೆ ನಾನು ಎಂದಿಗೂ ಒಂದಕ್ಕಾಗಿ ಇನ್ನೊಂದನ್ನು ಸಂಪೂರ್ಣವಾಗಿ ತ್ಯಜಿಸಲಿಲ್ಲ” ಎಂದು ಹೇಳಿದರು.
೩. ೨೦೧೧ ರಲ್ಲಿ ಪಯ್ಯನ್ನೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಅವರು ನಿಯಮಿತ ಶಾಲಾ ಶಿಕ್ಷಣವನ್ನು ತೊರೆದು ತ್ರಿಶೂರ್‌ನ ಬ್ರಹ್ಮಸ್ವಂ ಮಠದಲ್ಲಿ ನಾಲ್ಕು ವರ್ಷಗಳ ಕಾಲ ಗುರುಕುಲದಲ್ಲಿ ಶಿಕ್ಷಣ ಪಡೆದರು.
೪. ಗೋವಿಂದ ನಾಲ್ಕನೇ ತರಗತಿಯಲ್ಲಿದ್ದಾಗ ಅವರ ಉಪನಯನ ವಿಧಿ ನಡೆಯಿತು ಮತ್ತು ಅದರ ನಂತರ ತಕ್ಷಣವೇ ಅವರು ಗುರುಕುಲದ ಪ್ರಯಾಣವನ್ನು ಪ್ರಾರಂಭಿಸಿದರು.
೫. ತದನಂತರ ಗೋವಿಂದ ಮತ್ತೆ ನಿಯಮಿತ ಶಾಲೆಗೆ ಹೋಗಲು ಪ್ರಾರಂಭಿಸಿದರು. ಗುರುಕುಲದಲ್ಲಿ ಉಳಿದುಕೊಂಡು ಹತ್ತನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಗುರುಕುಲದಿಂದ ಹೊರಬಂದು ಉನ್ನತ ಮಾಧ್ಯಮಿಕ ಶಿಕ್ಷಣಕ್ಕಾಗಿ ಮಂಗಳೂರಿನ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿಗೆ ಸೇರಿದರು. ಆ ನಂತರ ತಿರುವನಂತಪುರಂನ ವಲಿಯಮಲದಲ್ಲಿರುವ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ’ಯಿಂದ ‘ಬಿ.ಟೆಕ್’ ಪದವಿ ಪಡೆದರು.
೬. ಗೋವಿಂದ ‘ಇಸ್ರೋ ಸೆಂಟ್ರಲ್ ರಿಕ್ರೂಟ್‌ಮೆಂಟ್ ಬೋರ್ಡ್’ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿದ್ದು, ಜುಲೈನಲ್ಲಿ ಅಧಿಕೃತವಾಗಿ ‘ಇಸ್ರೋ’ಗೆ ಸೇರಲಿದ್ದಾರೆ.
೭. ತಮ್ಮ ವೃತ್ತಿಜೀವನದಲ್ಲೂ ದೈನಂದಿನ ಧಾರ್ಮಿಕ ಕ್ರಿಯೆಗಳನ್ನು ಮುಂದುವರಿಸಲು ಅವರಿಗೆ ಇಚ್ಛೆಯಿದೆ. ವೈದಿಕ ಶಿಕ್ಷಣವು ಅವರಿಗೆ ಏಕಾಗ್ರತೆ, ಶಿಸ್ತು ಮತ್ತು ಶಕ್ತಿಯನ್ನು ನೀಡಿದೆ ಎಂದು ಅವರು ಹೇಳುತ್ತಾರೆ.
೮. ಗೋವಿಂದ ಅವರ ತಂದೆ ಹರೇಶ ಕುಮಾರ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯಾಗಿದ್ದಾರೆ.
ಸಂಪಾದಕೀಯ ನಿಲುವು
|
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!