ಕಳೆದ ವರ್ಷವೂ ನೂಕುನುಗ್ಗಲು ಸಂಭವಿಸಿತ್ತು!

ಜಗನ್ನಾಥಪುರಿ (ಒಡಿಶಾ) – ಇಲ್ಲಿ ಜಗನ್ನಾಥ ರಥಯಾತ್ರೆಯ ಸಮಯದಲ್ಲಿ ನೂಕುನುಗ್ಗಲು ಸಂಭವಿಸಿ 600ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಈ ಘಟನೆ ನಗರದ ಶ್ರೀ ನಹರ (ರಾಜನ ಅರಮನೆ) ಬಳಿ ನಡೆದಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರಲ್ಲಿ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಪುರಿಯಲ್ಲಿನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ರಥಯಾತ್ರೆಯ ಮೊದಲ ದಿನ, ಅಂದರೆ ಜೂನ್ 27 ರಂದು, ‘ಪಹಾಡಿ’ ಸಮಾರಂಭದ ಸಮಯದಲ್ಲಿ ಗಜಪತಿ ದಿವ್ಯ ಸಂಘದೇವರ ಅರಮನೆಯ ಬಳಿ ಜನಸಂದಣಿ ಸೇರಿತ್ತು. ಅದನ್ನು ನಿಯಂತ್ರಿಸಲು ಆಡಳಿತಕ್ಕೆ ತೊಂದರೆಯಾಗುತ್ತಿತ್ತು. ಈ ಸಮಯದಲ್ಲಿ ಭಕ್ತರ ನಡುವೆ ಗೊಂದಲ ಉಂಟಾಗಿ ನೂಕುನುಗ್ಗಲು ಸಂಭವಿಸಿತು. ಕಳೆದ ವರ್ಷವೂ ರಥಯಾತ್ರೆಯ ಸಮಯದಲ್ಲಿ ನೂಕುನುಗ್ಗಲು ಉಂಟಾಗಿ ಒಬ್ಬ ಭಕ್ತನ ಸಾವಾಗಿತ್ತು.
ಸಂಪಾದಕೀಯ ನಿಲುವುಇದರರ್ಥ, ಹಿಂದಿನ ಘಟನೆಯಿಂದ ಆಡಳಿತವು ಯಾವುದೇ ಪಾಠ ಕಲಿತಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಆಡಳಿತಾಧಿಕಾರಿಗಳನ್ನು ಸರಕಾರವು ತಕ್ಷಣ ಜೈಲಿಗೆ ತಳ್ಳಬೇಕು! |
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !