ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಟ್ರಂಪ್ ಸರಕಾರದ ಮೇಲೆ ಟೀಕೆ

ವಾಷಿಂಗ್ಟನ (ಅಮೆರಿಕಾ) – ಇಂದು ಅಮೆರಿಕಾ ಸರಕಾರವನ್ನು ನಡೆಸುತ್ತಿರುವ ಜನರು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ, ಸರಕಾರದಲ್ಲಿ ಒಳಗಿನಿಂದ ಮತ್ತು ಹೊರಗಿನಿಂದ ತಪ್ಪು ವಿಷಯಗಳಿಗೆ ವಿರೋಧವಿರುವುದು ಮಹತ್ವದ್ದಾಗಿದೆ; ಆದರೆ ಈಗ ಹಾಗೆ ಆಗುತ್ತಿಲ್ಲ” ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಇತ್ತೀಚೆಗೆ ಟೀಕಿಸಿದ್ದಾರೆ.
ಅಮೆರಿಕಾದ ಕನೆಕ್ಟಿಕಟ್ ರಾಜ್ಯದ ಹಾರ್ಟ್ಫೋರ್ಡ್ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ಒಬಾಮಾ ಅವರು ಅಮೆರಿಕಾವನ್ನು ಹಂಗೇರಿಯಂತಹ ದೇಶಗಳೊಂದಿಗೆ ಹೋಲಿಸಿದರು, ಅಲ್ಲಿ ಚುನಾವಣೆಗಳು ನಡೆಯುತ್ತವೆ; ಆದರೆ ಜನರ ಧ್ವನಿಗೆ ಗೌರವ ನೀಡಲಾಗುವುದಿಲ್ಲ ಮತ್ತು ನಾಯಕರು ತಮ್ಮಿಷ್ಟದಂತೆ ನಡೆದುಕೊಳ್ಳುತ್ತಾರೆ. ಒಬಾಮಾ ಎಚ್ಚರಿಕೆ ನೀಡುತ್ತಾ, “ಅಮೆರಿಕಾ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ, ಇಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವದ ನಿಜವಾದ ಭಾವನೆ ದುರ್ಬಲಗೊಳ್ಳುತ್ತಿದೆ” ಎಂದು ಹೇಳಿದರು. 2020 ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಉದಾಹರಣೆಯನ್ನು ಒಬಾಮಾ ನೀಡಿದರು, ಅದರಲ್ಲಿ ಬಿಡೆನ್ ಗೆದ್ದರು; ಆದರೆ ಸೋತ ಡೊನಾಲ್ಡ್ ಟ್ರಂಪ್ ಸುಳ್ಳು ವಂಚನೆಯ ಆರೋಪಗಳನ್ನು ಮಾಡಿದರು.
ಸಂಪಾದಕೀಯ ನಿಲುವುಅಮೆರಿಕಾ ಜಗತ್ತಿನ ಎಷ್ಟು ದೇಶಗಳಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ ಅಲ್ಲಿ ಅರಾಜಕತೆಯನ್ನು ಸೃಷ್ಟಿಸಿದೆ ಎಂಬುದರ ಮಾಹಿತಿಯನ್ನೂ ಒಬಾಮಾ ನೀಡಬೇಕು. ಹಾಗೆಯೇ, ಎಷ್ಟು ಸರ್ವಾಧಿಕಾರಿ ದೇಶಗಳಿಗೆ ಸಹಾಯ ಮಾಡಿ, ಪ್ರಜಾಪ್ರಭುತ್ವ ದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರೋತ್ಸಾಹಿಸಿದೆ ಎಂಬುದನ್ನೂ ಹೇಳಬೇಕು! |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman