
ಟೆಲ್ ಅವಿವ್ (ಇಸ್ರೇಲ್) – ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನಮ್ಮ ವ್ಯಾಪ್ತಿಯಲ್ಲಿ ಇದ್ದಿದ್ದರೆ, ನಾವು ಅವರನ್ನು ಹತ್ಯೆ ಮಾಡುತ್ತಿದ್ದೆವು ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಇಸಾಯಲ್ ಕಾಟ್ಜ್ ಅವರು ‘ಚಾನೆಲ್ 13’ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಟ್ಜ್ ಮಾತು ಮುಂದುವರೆಸಿ, ‘ಇಸ್ರೇಲ್‌ಗೆ ಖಮೇನಿ ಅವರನ್ನು ಮುಗಿಸುವ ಇಚ್ಛೆ ಇತ್ತು; ಆದರೆ ಅಂತಹ ಅವಕಾಶ ಸಿಗಲಿಲ್ಲ’ ಎಂದರು. ‘ಇಸ್ರೇಲ್ ಅಮೆರಿಕಾದ ಅನುಮತಿ ಪಡೆದುಕೊಂಡಿದೆಯೇ?’ ಎಂಬ ಪ್ರಶ್ನೆಗೆ, ‘ಈ ವಿಷಯಗಳಿಗೆ ನಮಗೆ ಯಾರ ಅನುಮತಿಯ ಅವಶ್ಯಕತೆ ಬೇಕಾಗಿಲ್ಲ’ ಎಂದು ಉತ್ತರಿಸಿದರು.
ಇರಾನ್ ಮತ್ತೆ ದಾಳಿ ಮಾಡಿದರೆ ದೊಡ್ಡ ಪ್ರಮಾಣದ ದಾಳಿ ನಡೆಸುತ್ತೇವೆ!

ಇರಾನ್‌ಗೆ ಎಚ್ಚರಿಕೆ ನೀಡಿದ ಕಾಟ್ಜ್, ಇಸ್ರೇಲ್‌ಗೆ ಇರಾನ್‌ನಿಂದ ಯಾವುದೇ ಬೆದರಿಕೆ ಕಂಡುಬಂದರೆ, ನಾವು ಮತ್ತೊಮ್ಮೆ ಅವರ ಮೇಲೆ ದಾಳಿ ಮಾಡುತ್ತೇವೆ. ಆ ಸಮಯದಲ್ಲಿ, ಆ ದಾಳಿ ಗಾಜಾ ಅಥವಾ ಲೆಬನಾನ್‌ನಲ್ಲಿ ನಡೆಸಿದ ದಾಳಿಗಿಂತ 100 ಪಟ್ಟು ದೊಡ್ಡದಾಗಿರುತ್ತದೆ ಎಂದು ಹೇಳಿದರು.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು