ನಮೋಸ್ತುತೇ ವ್ಯಾಸ ವಿಶಾಲಬುದ್ಧೇ ಫುಲ್ಲಾರವಿಂದಾಯತಪತ್ರನೇತ್ರ |
ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ ||

ಅರ್ಥ : ಸಂಪೂರ್ಣ ಅರಳಿದ ಕಮಲದ ಪಕಳೆಯ ಹಾಗೆ ವಿಶಾಲ ಕಣ್ಣುಗಳಿರುವ ವಿಶಾಲ ಬುದ್ಧಿಯ ವ್ಯಾಸ, ಮಹಾಭಾರತರೂಪಿ ತೈಲದಿಂದ ಸಂಪೂರ್ಣ ಜ್ಞಾನಮಯ ದೀಪವನ್ನು ಪ್ರಜ್ವಲಿಸಿದ ಆ ವ್ಯಾಸರಿಗೆ ನಮಸ್ಕಾರವಿರಲಿ.
ಅತ್ಯಂತ ವಿಶಾಲಬುದ್ಧಿ ಹಾಗೂ ಅರಳಿದ ಕಮಲದ ಪಕಳೆಯಂತೆ ವಿಶಾಲ ನೇತ್ರವುಳ್ಳ, ಇಡೀ ಹಿಂದುಸ್ಥಾನದಲ್ಲಿ ಜ್ಞಾನದ ದೀಪ ಬೆಳಗಿಸಿ ಅಜ್ಞಾನರೂಪಿ ಅಂಧಃಕಾರವನ್ನು ದೂರಗೊಳಿಸಲು ಸಹಾಯ ಮಾಡಿದ ಆ ಮಹರ್ಷಿ ವ್ಯಾಸರಿಗೆ ನಮಸ್ಕಾರ ! ಮಹರ್ಷಿ ವ್ಯಾಸರ ಜ್ಞಾನದಾನದ ಕಾರ್ಯ ಎಷ್ಟು ಪ್ರಧಾನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ ಎಂದರೆ, ಅವರ ಸ್ಮೃತಿದಿನವನ್ನು ನಾವು `ಗುರುಪೂರ್ಣಿಮೆ’ಎಂದು ಆಚರಿಸುತ್ತೇವೆ. ಅವರ ಬೋಧನೆಯು ಸಂಸ್ಕೃತಿಯನ್ನು ಘಟಿಸುವುದಾಗಿದೆ. ವ್ಯಾಸ ಮಹರ್ಷಿ ಇವರು ಮತ್ಸ್ಯಕನ್ಯೆ ಸತ್ಯವತೀ ಹಾಗೂ ಪರಾಶರ ಋಷಿಗಳ ಸುಪುತ್ರರಾಗಿದ್ದಾರೆ ! ಅವರು ಶ್ರೇಷ್ಠ ಜ್ಞಾನಿಯಾಗಿದ್ದರು. ವಿವಿಧ ಋಷಿಗಳಲ್ಲಿ ಹಂಚಿಹೋಗಿರುವ ವೇದಮಂತ್ರಗಳನ್ನು ಒಟ್ಟುಗೂಡಿಸಿ ಅವುಗಳನ್ನು ವರ್ಗೀಕರಣಗೊಳಿಸಿ 4 ವೇದಗಳನ್ನು ರಚಿಸುವ ಕಾರ್ಯವನ್ನು ವ್ಯಾಸರು ಮಾಡಿದರು; ಆದ್ದರಿಂದ ಅವರಿಗೆ ವೇದವ್ಯಾಸ ಎಂದೂ ಹೇಳುತ್ತಾರೆ.
ಮಹರ್ಷಿ ವ್ಯಾಸರೆಂದರೆ ಬ್ರಹ್ಮ, ಹರಿ ಹಾಗೂ ಭಗವಾನ ಶಂಕರ ಆಗಿದ್ದಾರೆ. ಸನಾತನ ಭಾರತೀಯ ಧರ್ಮದ ಅಡಿಪಾಯ ಆಗಿರುವ ಬ್ರಹ್ಮಸೂತ್ರವನ್ನು ವಿಶ್ಲೇಷಣೆ ಮಾಡುವ ಮೋಹವನ್ನು ಅನೇಕ ವಿದ್ವಾಂಸರಿಗೆ ಕೂಡ ಅದುಮಿಡಲು ಸಾಧ್ಯವಾಗಲಿಲ್ಲ. ಆದಿ ಶಂಕಾರಾಚಾರ್ಯರು ಕೂಡ ಅದರ ಬಗ್ಗೆ ಮಾತುಗಳನ್ನು ಆಡಿದರು. ಇದು ಆ ತತ್ತ್ವಜ್ಞಾನದ ವೈಶಿಷ್ಟ್ಯವಾಗಿದೆ.
ಕುರುಕ್ಷೇತ್ರದ ಮಹಾಯುದ್ಧದ ಸಮಯದಲ್ಲಿ ಅರ್ಜುನನ ನಿಮಿತ್ತದಲ್ಲಿ ಕಲಿಯುಗದಲ್ಲಿನ ಜನರಿಗೆ ಇದೇ ತತ್ತ್ವಜ್ಞಾನವನ್ನು ಭಗವಂತ ಸ್ವತಃ ಸುಲಭಗೊಳಿಸಿ ಹೇಳಿದನು. ಭಗವದ್ಗೀತೆಯ ಹೆಸರಿನಲ್ಲಿ ಆ ಉಪದೇಶವನ್ನು ಶಬ್ದಬದ್ಧಗೊಳಿಸುವ ಮಹತ್ಕಾರ್ಯವನ್ನು ಮಹರ್ಷಿ ವ್ಯಾಸರು ಮಾಡಿದರು. ಇಂದು ಕೂಡ ಜೀವನದ ಕುರುಕ್ಷೇತ್ರದಲ್ಲಿ ಭಗವದ್ಗೀತೆ ಹೆಜ್ಜೆ ಹೆಜ್ಜೆಗೂ ಮಾರ್ಗ ತೋರಿಸುತ್ತದೆ. ಅದನ್ನು ಒದಗಿಸಿಕೊಟ್ಟಿರುವ ಮಹರ್ಷಿ ವ್ಯಾಸರ ಅನಂತ ಉಪಕಾರ ಸಂಪೂರ್ಣ ವಿಶ್ವದ ಮೇಲಿದೆ. ಮಹಾಭಾರತದ 1 ಲಕ್ಷ ಶ್ಲೋಕಗಳ ಮಹಾಕಾವ್ಯದ ರಚನೆಯನ್ನು ಕೂಡ ವ್ಯಾಸರೇ ಮಾಡಿದ್ದಾರೆ !
ಊಧ್ರ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಚ್ಛೃಣೋತಿ ಮೆ |
ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೆ ||
– ಮಹಾಭಾರತ, ಪರ್ವ 18, ಅಧ್ಯಾಯ 5, ಶ್ಲೋಕ 62
ಅರ್ಥ : (ಮಹರ್ಷಿ ವ್ಯಾಸರು ಹೇಳುತ್ತಾರೆ) ನಾನು ಕೈಗಳನ್ನು ಮೇಲೆ ಮಾಡಿ ಜೋರಾಗಿ ಕೂಗಿ ಹೇಳುತ್ತಿದ್ದೇನೆ; ಆದರೆ ಯಾರೂ ನನ್ನ ಮಾತನ್ನು ಕೇಳುವುದಿಲ್ಲ. ಧರ್ಮದಿಂದಲೆ ಅರ್ಥ ಹಾಗೂ ಕಾಮ ಪ್ರಾಪ್ತಿಯಾಗುತ್ತದೆ, ಆ ಧರ್ಮವನ್ನು ಜನರು ಏಕೆ ಆಚರಿಸುವುದಿಲ್ಲ ? ನಾನು ಎರಡೂ ಕೈಗಳನ್ನು ಮೇಲೆತ್ತಿ ಕೂಗಿ ಜಗತ್ತಿಗೆ ಮಾನವ ಜೀವನದ ಸಾರವನ್ನು ಹೇಳುತ್ತೇನೆ’ ಆದರೆ ಯಾರೂ ಕೇಳುವುದಿಲ್ಲ. `ಅರ್ಥ ಹಾಗೂ ಕಾಮಪ್ರಾಪ್ತಿ ನಿಜವಾಗಿಯೂ ಧರ್ಮ ಪಾಲನೆಯಿಂದಲೆ ಆಗುತ್ತದೆ. ಆದರೂ ಜನರು ಧರ್ಮ ಪಾಲನೆಯನ್ನು ಏಕೆ ಮಾಡುವುದಿಲ್ಲ ?’, ಎನ್ನುವ ವಿಷಯ ವ್ಯಾಸರಿಗೆ ಕಾಡುತ್ತಿತ್ತು. ಅವರು ದೇವರ್ಷಿ ನಾರದರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ನಾರದರು, `ಅಲಂಕಾರ ಶಬ್ದ, ರಸ ಮತ್ತು ಭಾವದಿಂದ ಸಮೃದ್ಧವಾಗಿರುವ ಎಷ್ಟೇ ಸಾಹಿತ್ಯಗಳನ್ನು ಬರೆದರೂ, ಎಲ್ಲಿಯ ವರೆಗೆ ಶ್ರೀಕೃಷ್ಣನ ಕಥೆಯನ್ನು ಬರೆಯುವುದಿಲ್ಲವೊ, ಅಲ್ಲಿಯ ವರೆಗೆ ಎಲ್ಲವೂ ವ್ಯರ್ಥವಾಗಿದೆ’ ಎಂದು ಹೇಳಿದರು.
ಸ್ವತಃ ವ್ಯಾಸರು ತಮ್ಮ ಶಿಷ್ಯರಿಗೆ ಅವರ ಹೆಸರಿನ ಜಪ ಅಥವಾ ಪೂಜೆ ಮಾಡಲು ಹೇಳುವುದಿಲ್ಲ. ತದ್ವಿರುದ್ಧ ಭಾಗವತ್ಪುರಾಣದಲ್ಲಿ ಅವರು ಸ್ಪಷ್ಟವಾಗಿ ಹೇಳುತ್ತಾರೆ `ಕೃಷ್ಣಂ ವಂದೇ ಜಗದ್ಗುರುಮ್ |’
(‘ಜಗದ್ಗುರು ಶ್ರೀಕೃಷ್ಣನಿಗೆ ನಾನು ನಮಿಸುತ್ತೇನೆ.)’ – ಸೌ. ಲಲಿತಾ ಮೋದಿ, ಪೇಣ ರಾಯಗಡ (ಆಧಾರ : `ವೈಷ್ಣವ ಜಾಗೃತಿ’)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !