ಪಾಕಿಸ್ಥಾನಕ್ಕೆ‘ಆಪರೇಷನ್ ಸಿಂದೂರ್’ ಕುರಿತ ಗೌಪ್ಯ ಮಾಹಿತಿ ಒದಗಿಸಿದ್ದನು!

ನವದೆಹಲಿ – ಇಲ್ಲಿನ ಭಾರತೀಯ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ ಗುಮಾಸ್ತನಾಗಿ (ಕ್ಲರ್ಕ್) ಕಾರ್ಯನಿರ್ವಹಿಸುತ್ತಿದ್ದ ವಿಶಾಲ ಯಾದವ್ ಎಂಬ ಸಿಬ್ಬಂದಿಯನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. ವಿಶಾಲ ಯಾದವ್ ಭಾರತದ ರಕ್ಷಣಾ ಸಂಸ್ಥೆಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಗೆ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ – ಅಂತರಸೇವಾ ಗುಪ್ತಚರ ಸಂಸ್ಥೆ) ಒದಗಿಸುತ್ತಿದ್ದನು. ವಿಶೇಷವೆಂದರೆ, ‘ಆಪರೇಷನ್ ಸಿಂದೂರ್’ ನ ಸಮಯದಲ್ಲಿಯೂ ಅವನು ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿಯನ್ನು ಒದಗಿಸಿದ್ದನು. ಹಲವು ತಿಂಗಳುಗಳ ಕಾಲ ಅವನ ಮೇಲೆ ಕಣ್ಣಿಟ್ಟಿದ್ದ ರಾಜಸ್ಥಾನ ಪೊಲೀಸರ ಗುಪ್ತಚರ ಶಾಖೆಯು ಅವನನ್ನು ಬಂಧಿಸಿದೆ. ಅವನು ಹರಿಯಾಣದ ನಿವಾಸಿಯಾಗಿದ್ದಾನೆ. ಯಾದವ್ ಐ.ಎಸ್.ಐ.ಗಾಗಿ ಕೆಲಸ ಮಾಡುತ್ತಿದ್ದ ಪ್ರಿಯಾ ಶರ್ಮಾ ಎಂಬ ಮಹಿಳೆಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದನು.
ವಿಶಾಲ ಯಾದವ್ ನೌಕಾಪಡೆಯ ಕಾರ್ಯಾಚರಣೆಗಳ ಕುರಿತ ಗೌಪ್ಯ ಮಾಹಿತಿ ಮತ್ತು ಇತರ ರಕ್ಷಣಾ ಸಂಸ್ಥೆಗಳ ಮಾಹಿತಿಯನ್ನು ಪ್ರಿಯಾ ಶರ್ಮಾಗೆ ನೀಡಿದ್ದಾನೆ. ಇದಕ್ಕೆ ಪ್ರತಿಯಾಗಿ, ಆಕೆ ವಿಶಾಲ ಯಾದವ್‌ಗೆ ಹಣ ಕಳುಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅವನು ಈ ಮಹಿಳೆಯೊಂದಿಗೆ ಹಲವು ವರ್ಷಗಳಿಂದ ಸಂಪರ್ಕದಲ್ಲಿದ್ದನು. ಅವನು ಈ ಅವಧಿಯಲ್ಲಿ ಹಲವಾರು ಮಾಹಿತಿಯನ್ನು ಆಕೆಗೆ ಒದಗಿಸಿದ್ದಾನೆ. ಅವನು ಎಷ್ಟು ಗೌಪ್ಯ ಮಾಹಿತಿಗಳನ್ನು ನೀಡಿದ್ದಾನೆ? ಈ ಬೇಹುಗಾರಿಕೆಯ ಜಾಲದಲ್ಲಿ ಇನ್ನೂ ಎಷ್ಟು ಜನರಿದ್ದಾರೆ?, ಎಂಬುದನ್ನು ಕಂಡುಹಿಡಿಯಲು ವಿಶಾಲ ಯಾದವ್‌ನನ್ನು ಕೂಲಂಕಷವಾಗಿ ವಿಚಾರಣೆ ಮಾಡಲಾಗುತ್ತಿದೆ.
ಸಂಪಾದಕೀಯ ನಿಲುವುಇಂತಹವರ ಮೇಲೆ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಸಾರ್ವಜನಿಕವಾಗಿ ಗಲ್ಲಿಗೇರಿಸುವುದೇ ಸೂಕ್ತ ಶಿಕ್ಷೆಯಾಗಿದೆ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ