|
ಮಾಲದಾ (ಬಂಗಾಳ) – ಮುಸ್ಲಿಂ ಬಹುಸಂಖ್ಯಾತ ಮಾಲದಾ ಜಿಲ್ಲೆಯ ಜಲಾಲಪುರ ನಗರದಲ್ಲಿ ಕಳೆದ 629 ವರ್ಷಗಳಿಂದ ನಡೆಯುತ್ತಿದ್ದ ರಥಮೇಳಕ್ಕೆ ತೃಣಮೂಲ ಕಾಂಗ್ರೆಸ್ ಅನುಮತಿ ನಿರಾಕರಿಸಿದೆ. ಶ್ರೀ ಮಹಾಪ್ರಭು ಮಂದಿರದ ಬಳಿ ಈ ಮೇಳವನ್ನು ಆಯೋಜಿಸಲಾಗುತ್ತದೆ, ಇದು ಸುಮಾರು ಒಂದು ವಾರ ನಡೆಯುತ್ತದೆ. ರಥಯಾತ್ರೆ ಅದರ ಒಂದು ಭಾಗವಾಗಿದೆ. ಪೊಲೀಸರು ಕೇವಲ ರಥಯಾತ್ರೆಗೆ ಮಾತ್ರ ಅನುಮತಿ ನೀಡಿದ್ದಾರೆ; ಆದರೆ ಮೇಳಕ್ಕೆ ಅನುಮತಿ ನೀಡಿಲ್ಲ. ‘ಮೇಳದಿಂದ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗಬಹುದು’ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ರಥಯಾತ್ರೆಯ ಸಮಯದಲ್ಲಿ ಕೊಲೆಯಂತಹ ಅನೇಕ ಗಂಭೀರ ಅಪರಾಧಗಳು ನಡೆದಿವೆ. ಆದ್ದರಿಂದ, ಸ್ಥಳೀಯ ಆಡಳಿತವು ತೃಣಮೂಲ ಕಾಂಗ್ರೆಸ್ ಸರಕಾರದ ಸೂಚನೆಯಂತೆ ಮೇಳವನ್ನು ನಿಲ್ಲಿಸುವ ನಿರ್ಧಾರವನ್ನು ಕೈಗೊಂಡಿದೆ.
🚫 629-Year-Old Rath Mela (chariot fair) Blocked in Jalalpur, Malda, Bengal!
Trinamool Congress govt denies full permission citing “law & order” 🚔⚖️
Only Rath Yatra allowed.
But where was this concern in the past 6 centuries? 🤔
Isn’t it police duty to ensure order — not… pic.twitter.com/MKzFRABukw
— Sanatan Prabhat (@SanatanPrabhat) June 23, 2025
ನ್ಯಾಯಾಲಯಕ್ಕೆ ಮೊರೆ ಹೋಗುತ್ತೇವೆ – ಆಯೋಜಕರ ನಿರ್ಧಾರ
629 ವರ್ಷಗಳ ರಥಮೇಳವನ್ನು ನಿಲ್ಲಿಸುವ ನಿರ್ಧಾರದಿಂದ ಆಯೋಜಕರಿಗೆ ಆಶ್ಚರ್ಯವಾಗಿದೆ. ಈ ಮೇಳವು ಕೇವಲ ಧಾರ್ಮಿಕ ಮಾತ್ರವಲ್ಲ, ಆದರೆ ಪ್ರದೇಶದ ಆರ್ಥಿಕತೆಗೂ ಬಹಳ ಮುಖ್ಯವಾಗಿದೆ ಎಂದು ಅವರು ಹೇಳುತ್ತಾರೆ. ಪ್ರತಿಯೊಂದು ಜಾತಿ ಮತ್ತು ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ಆಯೋಜಕರು ಈಗ ಜಿಲ್ಲಾ ದಂಡಾಧಿಕಾರಿ ಮತ್ತು ನ್ಯಾಯಾಲಯಕ್ಕೆ ಹೋಗುವ ನಿರ್ಧಾರವನ್ನು ಕೈಗೊಂಡಿದ್ದಾರೆ. ರಥಯಾತ್ರಾ ಸಮಿತಿಯ ಕಾರ್ಯದರ್ಶಿ ಗೌತಮ ಮಂಡಲ ಅವರು, ಈ ಮೇಳ ಬಾಬರ್ ಮತ್ತು ಮೊಘಲರು ಭಾರತಕ್ಕೆ ಬರುವ ಮೊದಲಿನಿಂದಲೂ ನಡೆಯುತ್ತಿದೆ. ಕೇವಲ ವೋಟಬ್ಯಾಂಕ್ ರಾಜಕೀಯದಿಂದ ಇದನ್ನು ನಿಲ್ಲಿಸಲಾಗುತ್ತಿದೆ, ಎಂದು ಹೇಳಿದರು.
ತೃಣಮೂಲ ಕಾಂಗ್ರೆಸ್ ನಿಂದ ಬೆಂಬಲ, ಭಾಜಪ ವಿರೋಧ!
ತೃಣಮೂಲ ಕಾಂಗ್ರೆಸ್ಸಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣೇಂದು ನಾರಾಯಣ ಚೌಧರಿ ಅವರು ಪೊಲೀಸರ ನಿರ್ಧಾರವನ್ನು ಬೆಂಬಲಿಸಿ, ಕಾನೂನು-ಸುವ್ಯವಸ್ಥೆಯ ಸಮಸ್ಯೆ ಇದೆ ಎಂದು ಹೇಳಿದರು. ಭಾಜಪದ ಸ್ಥಳೀಯ ನಾಯಕ ಅಜಯ ಗಂಗೂಲಿ ಅವರು, ಈ ನಿರ್ಧಾರವು ಪೊಲೀಸರಿಂದ ಬಂದಿದ್ದರೂ, ಅದರ ಹಿಂದೆ ತೃಣಮೂಲ ಕಾಂಗ್ರೆಸ್ ಸರಕಾರವಿದೆ ಎಂದು ಆರೋಪಿಸಿದರು. (ಕೇಂದ್ರದ ಭಾಜಪ ಸರಕಾರವು ತೃಣಮೂಲ ಕಾಂಗ್ರೆಸ್ ಸರಕಾರವನ್ನು ವಿಸರ್ಜಿಸಬೇಕೆಂದು ಈಗಲೇ ಬೇಡಿಕೆ ಇಡಬೇಕು! – ಸಂಪಾದಕರು)
ಸಂಪಾದಕೀಯ ನಿಲುವು
|