
ಶೂನ್ಯದ ಹಿಂದೆ ಅಂಕಿ ಇಲ್ಲದಿದ್ದರೆ ಶೂನ್ಯಕ್ಕೆ ಬೆಲೆ ಇರುವುದಿಲ್ಲ. ಹಾಗೆಯೇ, ಶೂನ್ಯದಂತೆ ಇರುವ ಜಗತ್ತಿಗೆ ಅರ್ಥ ಬರುವುದು ಶ್ರೀ ಗುರು ಗಳಿಂದಲೇ ! ‘ಗುರು’ವಿನಲ್ಲಿನ ‘ಗು’ ಅಕ್ಷರವು ‘ಗುಣಾತೀತ’ವನ್ನು ಮತ್ತು ‘ರು’ ಅಕ್ಷರವು ‘ರೂಪಾತೀತ’ ಸ್ವರೂಪವನ್ನು ಸೂಚಿಸುತ್ತದೆ. ಗುಣರೂಪಕ್ಕೆ ಮೀರಿದ, ಅಂದರೆ ನಿರ್ಗುಣ ಮತ್ತು ನಿರಾಕಾರ ಸ್ವರೂಪವನ್ನು ಸಾಕ್ಷಾತ್ಕರಿಸುವಾತನೇ ಗುರು ! ಸಂಸ್ಕ್ರತಿಯ ಗೌರವ ಕಲಿಸುವವರೇ ಗುರು. ನಮ್ಮ ಕೈಗಳನ್ನು ಜೋಡಿಸಿ, ಅಂದರೆ ಎರಡು ಕೈಗಳ ದ್ವೈತದಿಂದ ನಮಸ್ಕಾರದ ಅದ್ವೈತವನ್ನು ಸಾಧಿಸಿ ಸಾಧಕನು ಶ್ರೀ ಗುರುಗಳಿಗೆ ಶರಣಾಗಬೇಕು. ಶ್ರೀಗುರುಗಳು ಸುಗಂಧಭರಿತ ಹೂವಿನಂತಿದ್ದಾರೆ. ಶಿμಯ್Àನು ದುಂಬಿಯಂತಿದ್ದಾನೆ. ಅವನ ಗುರುಭಕ್ತಿಯೇ ಗುಂಜಾರವವಾಗಿದೆ. ಅಗ್ನಿಯು ಒಣ ಮತ್ತು ಹಸಿ ಎಲ್ಲಾ ಕಟ್ಟಿಗೆಗಳನ್ನು ಸುಡುತ್ತದೆ. ಅದೇ ರೀತಿ, ಗುರುಚರಣಗಳಿಗೆ ಶರಣಾದಾಗ ಎಲ್ಲಾ ಸಂಚಿತ ಕರ್ಮಗಳು ಭಸ್ಮವಾಗುತ್ತವೆ; ಆದ್ದರಿಂದ ಶ್ರೀ ಗುರುಗಳ ಸ್ಮರಣಾರ್ಥವಾಗಿ ಹಣೆಗೆ ಭಸ್ಮ ಅಥವಾ ತಿಲಕವನ್ನು ಹಚ್ಚಬೇಕು. ಮಂಜು ಕರಗಿ ನೀರಿನೊಂದಿಗೆ ಒಂದಾಗುವಂತೆ, ‘ಅಹಂಭಾವ’ವನ್ನು ಬಿಟ್ಟು ಗುರುಭಾವದಲ್ಲಿ ಸಮರ್ಪಣೆ ಯಾಗುವುದೇ ಗುರುಸೇವೆ.
ಶ್ರೀ ಗುರುಗಳ ನಿರಂತರ ಚಿಂತನೆಯಿಂದ ಸಾಧಕನು ಗುರುತತ್ತ್ವವನ್ನು ಪಡೆಯಬಹುದು. ಉಸಿರಾಟವು ೨೪ ಗಂಟೆಗಳ ಕಾಲ ನಡೆಯುತ್ತಲೇ ಇರುತ್ತದೆ. ಅದರಲ್ಲಿ ‘ಗುರುಸ್ಮರಣೆ’ಯನ್ನು ಸೇರಿಸಲು ಸಾಧ್ಯವಾದರೆ, ಅಂದರೆ ಅಜಪಾ-ಜಪವನ್ನು ಮಾಡಲು ಸಾಧ್ಯವಾದರೆ, ನಿದ್ರೆಯಲ್ಲೂ ಗುರುಭಕ್ತಿ ಆಗುತ್ತದೆ. ಜೇನುನೊಣ ಜೇನುತುಪ್ಪವಲ್ಲದೆ ಬೇರೆಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಹಾಗೆಯೇ ಗುರುಭಕ್ತನು ಗುರುಭಕ್ತಿಯಲ್ಲದೆ ಬೇರೆ ಏನನ್ನೂ ಮಾಡುವುದೇ ಇಲ್ಲ.
– ಶ್ರೀ. ದಾಮೋದರ ದತ್ತಾತ್ರೇಯ ಕುಲಕರ್ಣಿ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು