(ಪೆಂಟಗಾನ್ ಅಮೇರಿಕಾದ ರಕ್ಷಣಾ ಪಡೆಗಳ ಪ್ರಧಾನ ಕಛೇರಿ.)
ನವದೆಹಲಿ – ಪಾಕಿಸ್ತಾನವನ್ನು ಅಮೇರಿಕಾ ಒಂದು ಬೊಂಬೆಯಂತೆ ಬಳಸಿಕೊಳ್ಳುವುದಿಲ್ಲ ಎಂದು ನಾವು ಆಶಿಸುತ್ತೇವೆ. ಪಾಕಿಸ್ತಾನ ಆ ಮಾರ್ಗದಲ್ಲಿ ಹೋಗುವುದಿಲ್ಲ. ಇಸ್ರೇಲಿ ಆಕ್ರಮಣಗಳ ವಿರುದ್ಧ ಇರಾನ್ ಜೊತೆ ಪಾಕಿಸ್ತಾನ ನಿಲ್ಲುತ್ತದೆ ಎಂದು ಭಾರತದಲ್ಲಿನ ಇರಾನ್ ರಾಯಭಾರ ಕಚೇರಿಯ ಉಪ ರಾಯಭಾರಿ ಮೊಹಮ್ಮದ್ ಜವಾದ ಹೊಸೈನಿ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಮತ್ತು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್‌ನಲ್ಲಿ ಭೇಟಿಯಾದ ನಂತರ, ಟ್ರಂಪ್, “ಅಗತ್ಯವಿದ್ದರೆ ಪಾಕಿಸ್ತಾನ ಅಮೇರಿಕಾಕ್ಕೆ ಉಪಯುಕ್ತವಾಗಬಹುದು. ಪಾಕಿಸ್ತಾನ ಇಸ್ರೇಲ್ ವಿರೋಧಿಯಲ್ಲ. ಮುನೀರ್ ಅವರಿಗೆ ಇರಾನ್ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರು ಅಮೇರಿಕಾದ ನಿಲುವನ್ನು ಒಪ್ಪುತ್ತಾರೆ” ಎಂದು ಹೇಳಿದ್ದರು. ಟ್ರಂಪ್ ಅವರ ಈ ಹೇಳಿಕೆಯ ಬಳಿಕ ಮೊಹಮ್ಮದ್ ಹೊಸೈನಿ ಈ ಮೇಲಿನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಮೇರಿಕಾ ತನ್ನ ಲಾಭಕ್ಕಾಗಿ ಪಾಕಿಸ್ತಾನವನ್ನು ಬಳಸಿಕೊಳ್ಳಬಹುದು ಎಂದು ಇರಾನ್ ಕಳವಳ ವ್ಯಕ್ತಪಡಿಸಿದೆ.
“Hope Pakistan will no longer be used by the U.S.!” – Iran
📌Iran hopes the U.S. will no longer use Pakistan – but based on history, this is merely wishful thinking. Pakistan has always misused such alliances. In fact, the U.S. itself no longer trusts Pakistan. This has been… pic.twitter.com/TfzQZ7elSh
— Sanatan Prabhat (@SanatanPrabhat) June 21, 2025
ಅಮೇರಿಕಾ ಪಾಕಿಸ್ತಾನದಿಂದ ಯಾವುದಾದರೂ ಮಿಲಿಟರಿ ನೆರವನ್ನು ಪಡೆಯಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೊಸೈನಿ, ಪಾಕಿಸ್ತಾನ ಇರಾನ್ ಜೊತೆ ನಿಲ್ಲುತ್ತದೆ. ಅದು ಇರಾನ್ ವಿರುದ್ಧ ಅಮೇರಿಕಾಕ್ಕೆ ಮಿಲಿಟರಿ ನೆರವು ನೀಡುವುದಿಲ್ಲ ಎಂದು ಹೇಳಿದರು. (ಇರಾನ್ ಭ್ರಮನಿರಸನಗೊಂಡರೆ ಆಶ್ಚರ್ಯಪಡಬೇಕಾಗಿಲ್ಲ! – ಸಂಪಾದಕರು)
ಭಾರತ ಇಸ್ರೇಲ್ ಆಕ್ರಮಣವನ್ನು ಖಂಡಿಸಬೇಕು!
ಹೊಸೈನಿ ತಮ್ಮ ಮಾತನ್ನು ಮುಂದುವರೆಸಿ, “ಭಾರತದಂತಹ ದೇಶ ದಕ್ಷಿಣದ ಗೋಲಾರ್ಧದ (‘ಗ್ಲೋಬಲ್ ಸೌತ್’) ಧ್ವನಿ ಎಂದು ಪರಿಗಣಿಸಲಾಗುತ್ತದೆ. ಭಾರತೀಯರು ಶಾಂತಿಯ ಪ್ರತಿಪಾದಕರು. ಇರಾನ್-ಇಸ್ರೇಲ್ ಯುದ್ಧದಲ್ಲಿ ಭಾರತ ಸಕ್ರಿಯ ಪಾತ್ರ ವಹಿಸಬೇಕು. ಭಾರತವು ಎರಡೂ ದೇಶಗಳೊಂದಿಗೆ ಸಮನ್ವಯ ಸಾಧಿಸಿ ಇಸ್ರೇಲ್ ಮೇಲೆ ಒತ್ತಡ ಹೇರಬೇಕು. ಭಾರತ ಮೊದಲು ಇಸ್ರೇಲ್ ನ ಆಕ್ರಮಣವನ್ನು ಖಂಡಿಸಬೇಕು” ಎಂದು ಆಗ್ರಹಿಸಿದರು.
ಭಾರತೀಯರ ರಕ್ಷಣೆಗಾಗಿ ವಾಯುಗಡಿಯನ್ನು ತೆರೆದ ಇರಾನ್ !
ಇರಾನ್ ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಇರಾನ್ ಅಸಾಧಾರಣವಾಗಿ ತನ್ನ ವಾಯುಗಡಿಯನ್ನು ತೆರೆದಿದೆ. ಭಾರತದ ‘ಆಪರೇಷನ್ ಸಿಂಧು’ ಅಡಿಯಲ್ಲಿ ಇರಾನ್ ನ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಒಂದು ಸಾವಿರ ವಿದ್ಯಾರ್ಥಿಗಳು ಈ ವಾರಾಂತ್ಯದಲ್ಲಿ ಭಾರತಕ್ಕೆ ಮರಳಲಿದ್ದಾರೆ. ‘ಆಪರೇಷನ್ ಸಿಂಧು’ ಅಡಿಯಲ್ಲಿ ಇರಾನ್ ನಲ್ಲಿ ಸಿಲುಕಿದ್ದ 110 ವಿದ್ಯಾರ್ಥಿಗಳನ್ನು ಹೊತ್ತ ಮೊದಲ ಭಾರತೀಯ ವಿಮಾನವು ಇತ್ತೀಚೆಗೆ ದೆಹಲಿಗೆ ಬಂದಿಳಿದಿತ್ತು. ಈ ವಿಮಾನದಲ್ಲಿದ್ದ 90 ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರದವರಾಗಿದ್ದರು. ಇರಾನ್ ನಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಸಿಲುಕಿದ್ದು, ಅವರನ್ನು ಸಹ ಭಾರತಕ್ಕೆ ಕರೆತರಲಾಗುವುದು ಎಂದು ಅವರು ಆಶಿಸಿದ್ದರು.
ಸಂಪಾದಕೀಯ ನಿಲುವುಪಾಕಿಸ್ತಾನದ ಇಲ್ಲಿಯವರೆಗಿನ ಇತಿಹಾಸವನ್ನು ಗಮನಿಸಿದರೆ, ಇರಾನ್ ಪಾಕಿಸ್ತಾನದ ಮೇಲೆ ಇಟ್ಟಿರುವ ಈ ಭರವಸೆ ಮೂರ್ಖತನದ್ದಾಗಿದೆ ಎಂದು ಹೇಳಬಹುದು! ಆದರೆ, ಇನ್ನೊಂದೆಡೆ ಪಾಕಿಸ್ತಾನವು ಅಮೇರಿಕಾಕ್ಕೂ ದ್ರೋಹ ಬಗೆಯಬಹುದು ಎಂದು ಅಮೇರಿಕಾಕ್ಕೆ ತಿಳಿದಿದೆ ಎಂದು ‘ಪೆಂಟಗಾನ್ ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ ಈಗಾಗಲೇ ಸ್ಪಷ್ಟಪಡಿಸಿದ್ದಾರೆ! ಪಾಕಿಸ್ತಾನವು ಯಾರ ಜೊತೆಯೂ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! |