ಅಮೆರಿಕಾದಲ್ಲಿ ಪಾಕಿಸ್ತಾನದ ಸೇನಾದಳದ ಮುಖ್ಯಸ್ಥ ಅಸಿಮ್ ಮುನೀರ್ ವಿರುದ್ಧ ಪ್ರತಿಭಟನೆ!

ವಾಷಿಂಗ್ಟನ್ – ಪಾಕಿಸ್ತಾನದ ಸೇನಾದಳದ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಅಮೆರಿಕಾದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮುನೀರ್ ವಿರುದ್ಧ ವಾಷಿಂಗ್ಟನ್‌ನ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ವಾಷಿಂಗ್ಟನ್‌ನಲ್ಲಿ ಆಕ್ರೋಶಗೊಂಡ ಪಾಕಿಸ್ತಾನಿ ಜನರು ಅವರನ್ನು ಬಹಿರಂಗವಾಗಿ ‘ಇಸ್ಲಾಮಾಬಾದ್‌ನ ಕೊಲೆಗಾರ’ ಹಾಗೆಯೇ ‘ಪಾಕಿಸ್ತಾನದ ಕೊಲೆಗಾರ’ ಎಂದು ಕರೆದರು ಮತ್ತು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಾಕಿಸ್ತಾನಿ ಪ್ರತಿಭಟನಾಕಾರರು ‘ನಮಗೆ ಪ್ರಜಾಪ್ರಭುತ್ವ ಬೇಕು, ಸರ್ವಾಧಿಕಾರ ಬೇಡ’ ಎಂಬ ಘೋಷಣೆಯನ್ನೂ ಕೂಗಿದರು.

ಅಸಿಮ್ ಮುನೀರ್ ಮೇಲೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಹಾಕಿದ ಆರೋಪ ಇದೆ. ಇಮ್ರಾನ್ ಖಾನ್ ಬೆಂಬಲಿಗರಾದ ನೂರಾರು ಯುವಕರನ್ನು ಸಹ ಜೈಲಿನಲ್ಲಿ ಇರಿಸಲಾಗಿದೆ. ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, 2023 ರಿಂದ 2025 ರ ಅವಧಿಯಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳ ಹೆಸರಿನಲ್ಲಿ ಪಾಕಿಸ್ತಾನದಲ್ಲಿ 3 ಸಾವಿರಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.