ಇದುವರೆಗೆ 138 ಇರಾನಿ ನಾಗರಿಕರ ಸಾವು

ಟೆಲ್ ಅವೀವ (ಇಸ್ರೇಲ್) – ಇಸ್ರೇಲ್ ಜೂನ್ 14 ರ ರಾತ್ರಿ ಮತ್ತೆ ಇರಾನ್ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಇದರಲ್ಲಿ ಇರಾನಿನ ರಾಜಧಾನಿ ಟೆಹರಾನನಲ್ಲಿರುವ ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಲಾಗಿದೆ ಎಂದು ಇಸ್ರೇಲ್ ಮಾಹಿತಿ ನೀಡಿದೆ. ಇದರೊಂದಿಗೆ ಟೆಹರಾನ ಮತ್ತು ಬುಶಹರ್ ನಗರಗಳಲ್ಲಿನ ತೈಲ ಡಿಪೋಗಳು ಮತ್ತು ಅನಿಲ ಸಂಸ್ಕರಣಾಗಾರಗಳು ಸೇರಿದಂತೆ 150 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆಕ್ರಮಣ ಮಾಡಲಾಗಿದೆ. ಈ ದಾಳಿಯಲ್ಲಿ ಇದುವರೆಗೆ 138 ಇರಾನಿ ನಾಗರಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ 9 ಅಣು ವಿಜ್ಞಾನಿಗಳು ಮತ್ತು 20 ಕ್ಕೂ ಹೆಚ್ಚು ಇರಾನಿ ಸೇನಾ ಕಮಾಂಡರ್‍ಗಳು ಸೇರಿದ್ದಾರೆ.
Israel-Iran Conflict: Israel launches strikes on Iran’s Defense Ministry and oil depots; 138 Iranian citizens dead so far pic.twitter.com/btbWzGVYGV
— Sanatan Prabhat (@SanatanPrabhat) June 15, 2025
ಇಸ್ರೇಲಿನ ದಾಳಿಗೆ ಇರಾನ್ ಪ್ರತಿದಾಳಿ ನೀಡಿ 150 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ. ಇದರಲ್ಲಿ 7 ಇಸ್ರೇಲಿ ಜನರು ಮೃತಪಟ್ಟಿದ್ದು, 215 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇರಾನ್, ಇಸ್ರೇಲ್ ನ 3 ‘ಎಫ್-35’ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಸಹ ಹೇಳಿಕೊಂಡಿದೆ.
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !