‘ಪಿಕೆ’ ಚಲನ ಚಿತ್ರ ಧರ್ಮ ವಿರೋಧಿ ಆಗಿರಲಿಲ್ಲವಂತೆ!’- ನಟ ಅಮೀರ್ ಖಾನ್ ಹೇಳಿಕೆ

ಮುಂಬಯಿ – ನಾವು ಯಾವುದೇ ಧರ್ಮದ ವಿರುದ್ಧವಾಗಿಲ್ಲ. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ‘ಪಿಕೆ’ ಚಲನ ಚಿತ್ರವು ಸಾಮಾನ್ಯ ಜನರನ್ನು ಮೂರ್ಖರನ್ನಾಗಿಸಲು ಮತ್ತು ಅವರಿಂದ ಹಣ ಕೀಳಲು ಧರ್ಮವನ್ನು ಬಳಸುವವರಿಂದ ಎಚ್ಚರವಾಗಿರಲು ಹೇಳುತ್ತದೆ. ಇಂತಹ ಜನರು ಪ್ರತಿ ಧರ್ಮದಲ್ಲಿಯೂ ಕಂಡುಬರುತ್ತಾರೆ. (ಹಾಗಾದರೆ, ಚಲನ ಚಿತ್ರದಲ್ಲಿ ಮುಸ್ಲಿಮರ ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ ದೃಶ್ಯಗಳು ಇರಲಿಲ್ಲವೇ? ಈ ಬಗ್ಗೆ ಅಮೀರ್ ಖಾನ್ ಏಕೆ ಮಾತನಾಡುವುದಿಲ್ಲ? – ಸಂಪಾದಕರು) ಇದೇ ಚಲನ ಚಿತ್ರದ ಏಕೈಕ ಉದ್ದೇಶವಾಗಿತ್ತು ಎಂದು ಈ ಚಲನ ಚಿತ್ರದ ನಟ ಅಮೀರ್ ಖಾನ್ ‘ಇಂಡಿಯಾ ಟಿ.ವಿ.’ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ‘ಲವ್ ಜಿಹಾದ್’ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ ಅಮೀರ್ ಖಾನ್, “ಎರಡು ಧರ್ಮಗಳ ವ್ಯಕ್ತಿಗಳು ಒಟ್ಟಿಗೆ ಬಂದಾಗ, ವಿಶೇಷವಾಗಿ ಹಿಂದೂ ಮತ್ತು ಮುಸಲ್ಮಾನರು ಪ್ರೀತಿಯಲ್ಲಿ ಬಿದ್ದು ಮದುವೆಯಾದಾಗ, ಅದು ಪ್ರತಿ ಬಾರಿಯೂ ‘ಲವ್ ಜಿಹಾದ್’ ಆಗಿರಲು ಸಾಧ್ಯವಿಲ್ಲ. ಇದನ್ನು ಮಾನವೀಯತೆ ಎಂದು ಕರೆಯುತ್ತಾರೆ. ನನ್ನ ಸಹೋದರಿ ನಿಖತ್ ಇವಳು ಸಂತೋಷ್ ಹೆಗ್ಡೆ ಅವರನ್ನು ಮದುವೆಯಾದರು, ಇನ್ನೊಬ್ಬ ಸಹೋದರಿ ಫರಹತ್ ಇವಳು ರಾಜೀವ್ ದತ್ತಾ ಅವರನ್ನು ಮದುವೆಯಾದರು. ನನ್ನ ಮಗಳು ಐರಾ ಇವಳು ನೂಪುರ್ ಶಿಖರೆ ಅವರನ್ನು ಮದುವೆಯಾದಳು. ಇದನ್ನು ನೀವು ‘ಲವ್ ಜಿಹಾದ್’ ಎಂದು ಕರೆಯುತ್ತೀರಾ? ಪ್ರೀತಿ ಜೀವನದ ಅತಿ ದೊಡ್ಡ ವಿಷಯವಾಗಿದೆ.” (ಮುಸಲ್ಮಾನರು ತಮ್ಮನ್ನು ಹಿಂದೂಗಳೆಂದು ಹೇಳಿಕೊಂಡು ಹಿಂದೂ ಹುಡುಗಿಯರನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಮತಾಂತರ ಮತ್ತು ವಂಚನೆ ಮಾಡುವುದರ ಬಗ್ಗೆ ಖಾನ್ ಏಕೆ ಏನನ್ನೂ ಮಾತನಾಡುವುದಿಲ್ಲ? ಹಾಗೆಯೇ ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು ಪ್ರೀತಿಸಿದ್ದಕ್ಕಾಗಿ ಹಿಂದೂ ಹುಡುಗರನ್ನು ಕೊಲೆ ಮಾಡುವ ತಮ್ಮದೇ ಧರ್ಮದವರ ಬಗ್ಗೆ ಅಮೀರ್ ಖಾನ್ ಏಕೆ ಈ ಸಲಹೆಯನ್ನು ನೀಡುವುದಿಲ್ಲ? – ಸಂಪಾದಕರು)

ಸಂಪಾದಕೀಯ ನಿಲುವು

‘ಪಿಕೆ’ ಚಲನ ಚಿತ್ರದಲ್ಲಿ ಕಾಣಿಕೆ ಪೆಟ್ಟಿಗೆಯ ಹಣಕ್ಕಾಗಿ ದುರಾಸೆ ಇರುವ ಪೂಜಾರಿ, ಶಿವನ ವೇಷದಲ್ಲಿ ಹೆದರಿ ಓಡುವ ನಟ, ಕಲ್ಲಿಗೆ ಸಿಂಧೂರ ಬಳಿದು ಜನರನ್ನು ಸುಲಿಗೆ ಮಾಡುವ ಅಥವಾ ಹಿಂದೂ ಧರ್ಮದ ಸಂತರು ಕಪಟಿಗಳು ಎಂದು ತೋರಿಸುವ ಪ್ರಸಂಗ ಈ ಎಲ್ಲ ದೃಶ್ಯಗಳು ಹಿಂದೂ ಧರ್ಮಕ್ಕೆ ಅಪಖ್ಯಾತಿ ತರುವ ರೀತಿಯಲ್ಲಿ ಚಿತ್ರೀಕರಿಸಲ್ಪಟ್ಟಿದ್ದವು. ‘ಹಿಂದೂ ಧರ್ಮದ ಮಹತ್ವವನ್ನು ತೋರಿಸುವ ಒಂದೇ ಒಂದು ದೃಶ್ಯವನ್ನು ತೋರಿಸದೆ, ಧರ್ಮವನ್ನು ಅಪಹಾಸ್ಯ ಮಾಡುವಂತಹ ‘ಪಿಕೆ’ ಚಲನ ಚಿತ್ರವು ಹಿಂದೂ ಧರ್ಮ ವಿರೋಧಿಯಾಗಿರಲಿಲ್ಲ’ ಎಂದು ಹೇಳುವುದು ಅಮೀರ್ ಖಾನ್ ಅವರ ಸುಳ್ಳು ಮತ್ತು ನಾಚಿಕೆ ಇಲ್ಲದ ಹೇಳಿಕೆ !