ಭಾರತೀಯರ ವಿರೋಧದ ನಂತರ ಇಸ್ರೇಲ್ ನಿಂದ ಕ್ಷಮೆಯಾಚನೆ

ಟೆಲ್ ಅವಿವ್ (ಇಸ್ರೇಲ) – ಇಸ್ರೇಲ್ ರಕ್ಷಣಾ ಪಡೆಗಳು ಭಾರತದ ಕ್ಷಮೆ ಕೇಳಿವೆ. ಇಸ್ರೇಲ್ ಇರಾನಿನ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಯ ಬಗ್ಗೆ ಮಾಹಿತಿ ನೀಡಲು ‘X’ ನಲ್ಲಿ (ಹಿಂದಿನ ಟ್ವಿಟರ್) ಒಂದು ಮಾಹಿತಿಯನ್ನು ಪ್ರಸಾರ ಮಾಡಿತ್ತು. ಇದರಲ್ಲಿ ಒಂದು ನಕ್ಷೆಯನ್ನು ತೋರಿಸಲಾಗಿತ್ತು. ಈ ನಕ್ಷೆಯಲ್ಲಿ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದೂ ಮತ್ತು ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದೂ ತೋರಿಸಲಾಗಿತ್ತು. ಇದನ್ನು ಭಾರತೀಯರು ಸಾಮಾಜಿಕ ಮಾಧ್ಯಮಗಳ ಮೂಲಕ ವಿರೋಧಿಸಿದ ನಂತರ, ಇಸ್ರೇಲ್ ರಕ್ಷಣಾ ಪಡೆಗಳು ಕ್ಷಮೆ ಕೇಳಿದವು. ಇಸ್ರೇಲ್ ನಕ್ಷೆಯ ಮೂಲಕ ಇರಾನ್ ಯಾವ ಯಾವ ದೇಶಗಳ ಮೇಲೆ ಕ್ಷಿಪಣಿಗಳನ್ನು ಉಡಾಯಿಸಲು ಸಮರ್ಥವಾಗಿದೆ ಎಂಬುದನ್ನು ತೋರಿಸಿತ್ತು.
Iran is a global threat.
Israel is not the end goal, it’s only the beginning. We had no other choice but to act. pic.twitter.com/PDEaaixA3c
— Israel Defense Forces (@IDF) June 13, 2025
ಇಸ್ರೇಲ್ ರಕ್ಷಣಾ ಪಡೆಗಳು, “ಈ ಮಾಹಿತಿಯನ್ನು ಕೇವಲ ಒಂದು ಪ್ರದೇಶದ ಚಿತ್ರಣವಾಗಿ ಪ್ರಸಾರ ಮಾಡಲಾಗಿದೆ. ಇದರಲ್ಲಿ ನಾವು ಯಾವುದೇ ಪ್ರದೇಶದ ಅಥವಾ ದೇಶದ ನಕ್ಷೆಯನ್ನು ತೋರಿಸಿಲ್ಲ. ಆದರೂ, ಇದರಿಂದ ಯಾರದಾದರೂ ಭಾವನೆಗಳಿಗೆ ನೋವಾಗಿದ್ದರೆ ಅವರ ಕ್ಷಮೆ ಕೇಳುತ್ತೇವೆ” ಎಂದು ಹೇಳಿದೆ. (ಇಸ್ರೇಲ್ ‘ಇದ್ದರೆ-ಇಲ್ಲದಿದ್ದರೆ’ ಎಂಬ ಭಾಷೆಯಲ್ಲಿ ಕ್ಷಮೆ ಕೇಳಿದೆ. ಇಸ್ರೇಲ್ ನಿಂದ ಇದನ್ನು ನಿರೀಕ್ಷಿಸಲಾಗಿಲ್ಲ ಎಂದು ಭಾರತ ಸರಕಾರವು ಅವರಿಗೆ ತಿಳಿಸುವುದು ಅವಶ್ಯಕ! – ಸಂಪಾದಕರು)
🚨Israel Shows Distorted Map of India: Kashmir placed in Pakistan, Arunachal Pradesh shown in China!
Israel issues apology after backlash from Indians
India has never taken strict action against any country for distorting its map. That is precisely why anyone gets up and… pic.twitter.com/A2sXgIJ3mT
— Sanatan Prabhat (@SanatanPrabhat) June 14, 2025
ಸಂಪಾದಕೀಯ ನಿಲುವುನಕ್ಷೆಯ ವಿರೂಪಗೊಳಿಸುವಿಕೆಯ ಬಗ್ಗೆ ಭಾರತವು ಯಾವುದೇ ದೇಶದ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿಯೇ ಯಾರಾದರೂ ಭಾರತವನ್ನು ಈ ರೀತಿ ಅಪಮಾನ ಮಾಡಲು ಧೈರ್ಯ ಮಾಡುತ್ತಾರೆ. ಸರಕಾರವು ಈ ಚಿತ್ರಣವನ್ನು ಬದಲಾಯಿಸುವ ಅವಶ್ಯಕತೆಯಿದೆ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ