Allahabad High Court Order : ಓರ್ವ ವ್ಯಕ್ತಿಯ ಅಪಹರಣ ಬಳಿಕ ಆತನ ಕೊಲೆಯಾದರೆ ಅದಕ್ಕೆ ಪೊಲೀಸು ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು – ಅಲಹಾಬಾದ್ ಹೈಕೋರ್ಟ್

ಪ್ರಯಾಗ್ರಾಜ (ಉತ್ತರಪ್ರದೇಶ) – ಅಪಹರಣ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳ ಹೊಣೆಗಾರಿಕೆ ನಿಗದಿಯಾಗದ ಕಾರಣ, ಅವರು ನಿಷ್ಕ್ರಿಯರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅಪಹೃತ ವ್ಯಕ್ತಿಯನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ ಮತ್ತು ಅವರ ಕೊಲೆಯಾಗುತ್ತದೆ. ಪ್ರಾಥಮಿಕವಾಗಿ, ಇಂತಹ ಪ್ರಕರಣಗಳಲ್ಲಿ ಯಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆಯೋ, ಆ ಠಾಣೆಯ ವ್ಯಾಪ್ತಿಯ ಪೊಲೀಸ್ ಅಧಿಕಾರಿಯನ್ನು ಸಹ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ವಿಚಾರಣೆಯೊಂದರಲ್ಲಿ ಹೇಳಿದೆ. ನ್ಯಾಯಾಲಯವು ಈ ಪ್ರಕರಣದಲ್ಲಿ ವಾರಣಾಸಿಯ ಪೊಲೀಸ್ ಆಯುಕ್ತರಿಂದ ವೈಯಕ್ತಿಕ ಅಫಿಡವಿಟ್ ಕೋರಿದೆ. ಅಪಹೃತ ವ್ಯಕ್ತಿ ಇನ್ನೂ ಏಕೆ ಪತ್ತೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದೆ. ಅಲ್ಲದೆ, ನ್ಯಾಯಾಲಯವು ಸರಕಾರಿ ವಕೀಲರಿಗೆ ನೋಟಿಸ್ ಜಾರಿಗೊಳಿಸಿದೆ.

೧. ವಾರಣಾಸಿಯ ನಿತೇಶ ಕುಮಾರ ಅವರ ಸಹೋದರ ಮಾರ್ಚ್ ೩೧, ೨೦೨೫ ರಿಂದ ಕಾಣೆಯಾಗಿದ್ದಾರೆ. ನಿತೇಶ ಕುಮಾರ ಅವರು ಅಪಹರಣದ ಭೀತಿಯನ್ನು ವ್ಯಕ್ತಪಡಿಸಿ ಲಿಖಿತ ದೂರು ನೀಡಿದ್ದರು. ಪೊಲೀಸರು ಏಪ್ರಿಲ್ ೩ ರಂದು ಪ್ರಕರಣ ದಾಖಲಿಸಿದರು. ಪೊಲೀಸರು ಅವರನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ, ನಿತೇಶ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು.

೨. ಅಪಹೃತ ವ್ಯಕ್ತಿಗಳನ್ನು ಪತ್ತೆಹಚ್ಚಲು ಪೊಲೀಸರು ಅಸಮರ್ಥರಾಗಿರುವ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಮತ್ತು ಇದರಿಂದ ಗಂಭೀರ ಪರಿಣಾಮಗಳು ಎದುರಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಸಂಪಾದಕೀಯ ನಿಲುವು

ಈ ವಿಷಯದಲ್ಲಿ ಕಾನೂನು ರೂಪಿಸಲು ಉಚ್ಚ ನ್ಯಾಯಾಲಯ ಆದೇಶಿಸಬೇಕು ಎಂದು ಸಾರ್ವಜನಿಕರು ನಿರೀಕ್ಷೆ !