‘ಗುರು’ಗಳೇ ಆತ್ಮಜ್ಞಾನ, ಬ್ರಹ್ಮಜ್ಞಾನ ಮತ್ತು ಭಗವಂತನ ಪ್ರಾಪ್ತಿಗೆ ಸಾಧನ !

ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ

೧. ಗುರು ಮತ್ತು ಸೇವೆ ಇಲ್ಲದೆ ಆತ್ಮಜ್ಞಾನ ಸಿಗದ ಕಾರಣ ಶಿಷ್ಯನು ಗುರುಸೇವೆಯನ್ನು ಮಾಡಬೇಕು !

‘ಗುರುಗಳಿಲ್ಲದೆ ಮತ್ತು ಸೇವೆ ಇಲ್ಲದೆ ಆತ್ಮಜ್ಞಾನ ಅಥವಾ ಇತರ ಯಾವುದೇ ಜ್ಞಾನ ಸಿಗುವುದಿಲ್ಲ. ಯಾವುದೇ ರಹಸ್ಯ ತಿಳಿಯುವುದಿಲ್ಲ. ಇದಕ್ಕಾಗಿ ಗುರುಗಳ ಸೇವೆಯನ್ನು ಮಾಡಬೇಕು. ಸೇವೆಯಿಂದ ಅಹಂಕಾರವನ್ನು ಅಳಿಸಿ ಹಾಕಬೇಕು. ಶಿಷ್ಯನು ಗುರುಗಳನ್ನು ಅನುಸರಿಸಬೇಕು. ಧ್ಯಾನ ಮತ್ತು ಚಿಂತನೆ ಮಾಡಬೇಕು. ನಂತರ ಅವನಿಗೆ ಗುರುಗಳಿಲ್ಲದೆಯೂ ಇರಲು ಸಾಧ್ಯವಾಗಬೇಕು. ಅವನಿಗೆ ಗುರುಗಳ ಅವಶ್ಯಕತೆಯೂ ಇರಬಾರದು. ಕೊನೆಯಲ್ಲಿ ಶಿಷ್ಯನೇ ಗುರುವಾಗಬೇಕು.

೨. ಅನಂತ ಸ್ವರೂಪದಲ್ಲಿರುವ ಭಗವಂತನನ್ನು ತಿಳಿಯಲು ಶಿಷ್ಯನು ನಿರಂತರ ಮುನ್ನಡೆಯುವುದು ಆವಶ್ಯಕ !

ಭಗವಂತನ ರಸವು ನಾನಾರೂಪಗಳಲ್ಲಿ ಹರಿಯಲಿ. ಮನಸ್ಸು ಸ್ವಲ್ಪ ಶಾಂತವಾದಾಗ ಸುಖವೆನಿಸುತ್ತದೆ, ವಿಶ್ರಾಂತಿ ಸಿಗುತ್ತದೆ ಮತ್ತು ಆನಂದವಾಗುತ್ತದೆ; ಆದರೆ ಅದು ಕೇವಲ ಒಂದು ಮಿನುಗು ನೋಟ. ಅದು ಒಂದು ಮಾದರಿಯಾಗಿದೆ. ಅಲ್ಲಿ ನಿಲ್ಲಬೇಡಿರಿ. ಎಷ್ಟು ಸಿಕ್ಕರೂ, ಮುನ್ನಡೆಯುತ್ತಲೇ ಇರಿ. ಇನ್ನೂ ಅನಂತವನ್ನು ಪಡೆಯಬೇಕಿದೆ. ಭಗವಂತನು ಅನಂತನಾಗಿದ್ದಾನೆ. ಪರಮೇಶ್ವರನ ರಹಸ್ಯ ಅನಂತವಾಗಿದೆ. ಇನ್ನಷ್ಟು ನೋಡಿರಿ ಆದರೂ ಗುರುತು ಸಿಗುವುದೇ ಇಲ್ಲ. ನೋಡುತ್ತಾ ನೋಡುತ್ತಾ ನೋಡುವವನೇ ಮುಗಿಯಬೇಕು. ‘ನಾನು’ ಎಂಬುದು ಸಂಪೂರ್ಣವಾಗಿ ನಾಶ ವಾಗದೆ ‘ವಿರಾಟ’ದೊಂದಿಗೆ ಒಂದಾಗಲು ಸಾಧ್ಯವಿಲ್ಲ.

– ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ (ಆಧಾರ : ಮಾಸಿಕ ‘ಘನಗರ್ಜಿತ’, ೧ ಡಿಸೆಂಬರ್‌ ೨೦೨೧)