
೧. ಶ್ರೀ ಗುರು ಎಂದರೆ ಜ್ಞಾನರೂಪಿ ವಾಣಿ.
೨. ಶ್ರೀ ಗುರು ಎಂದರೆ ಜ್ಞಾನದ ಭಂಡಾರ.
೩. ಶ್ರೀ ಗುರು ಎಂದರೆ ಚೈತನ್ಯದ ಮಹಾಸಾಗರ.
೪. ಶ್ರೀ ಗುರು ಎಂದರೆ ಶಿಷ್ಯನ ಆಧ್ಯಾತ್ಮಿಕ ತಂದೆ.
೫. ಶ್ರೀ ಗುರು ಎಂದರೆ ನಮ್ಮ ಜೀವನದಲ್ಲಿನ ಪವಾಡ(ಚಮತ್ಕಾರ).
೬. ಶ್ರೀ ಗುರು ಒಂದು ತೇಜಸ್ಸು ಆಗಿದ್ದಾರೆ. ಅವರು ಒಮ್ಮೆ ಜೀವನದಲ್ಲಿ ಬಂದರೆ, ಅಜ್ಞಾನದ ಕತ್ತಲು ಮಾಯವಾಗುತ್ತದೆ.
೭. ಶ್ರೀ ಗುರು ಎಂದರೆ ಒಂದು ಕೊಳಲು. ಅದರ ಸುಮಧುರ ಧ್ವನಿಯಿಂದಲೇ ನಮ್ಮ ಮನಸ್ಸು ಮತ್ತು ದೇಹ ಆತ್ಮಾನಂದದಲ್ಲಿ ಮುಳುಗಿ ಹೋಗುತ್ತದೆ.
೮. ಶ್ರೀ ಗುರು ಎಂತಹ ಒಂದು ದೀಕ್ಷೆಯೆಂದರೆ; ಅದು ಯಾರಿಗೆ ದೊರೆಯಿತೋ, ಅವನು ಈ ಭವಸಾಗರವನ್ನು ದಾಟಿ ಹೋದನೆಂದೇ ತಿಳಿಯಬೇಕು !
೯. ಶ್ರೀ ಗುರು ಎಂದರೆ ಒಂದು ಪ್ರಸಾದ. ಅದು ಯಾರ ಭಾಗ್ಯದಲ್ಲಿ ಇರುತ್ತದೆಯೋ, ಅವನಿಗೆ ಬೇರೆ ಏನನ್ನೂ ಕೇಳುವ ಇಚ್ಛೆಯಾಗುವುದಿಲ್ಲ.
೧೦. ಶ್ರೀ ಗುರು ಅಂದರೆ ಸತ್-ಚಿತ್-ಆನಂದ ! ಅವರು ನಮಗೆ ನಮ್ಮ ನಿಜವಾದ ಗುರುತನ್ನು ಮಾಡಿಸಿಕೊಡುತ್ತದೆ.
೧೧. ಶ್ರೀ ಗುರು ಮತ್ತು ಗುರುಗಳ ಜೀವನವು ಒಂದು ಸಮುದ್ರದ ವಿಸ್ತಾರವಿದ್ದಂತೆ, ಅದನ್ನು ವರ್ಣಿಸಲು ಅಸಾಧ್ಯ.
೧೨. ಆಕಾಶದಷ್ಟು ಕಾಗದ, ಎಲ್ಲಾ ಅರಣ್ಯಗಳ ಮರಗಳಿಂದ ಲೇಖನಿ ಮಾಡಿ, ಸಮುದ್ರದ ಶಾಯಿಯಿಂದ ಗುರುಗಳ ಗುಣವರ್ಣನೆಯನ್ನು ಮಾಡಿದರೂ, ಅದೂ ಕಡಿಮೆಯೇ ಆಗುವುದು.
ಜಗದ್ಗುರು ಸಂತ ತುಕಾರಾಮ ಮಹಾರಾಜರು ವರ್ಣಿಸಿದ ಗುರುಮಹಿಮೆ !
ಜಗದ್ಗುರು ಸಂತ ತುಕಾರಾಮ ಮಹಾರಾಜರು ಒಂದು ಅಭಂಗದಲ್ಲಿ ಹೇಳುತ್ತಾರೆ, ‘ಸದ್ಗುರುಗಳು ದೊರೆಯದೆ (ಮೋಕ್ಷಕ್ಕೆ ಹೋಗುವ) ಮಾರ್ಗವು ಸಿಗುವುದಿಲ್ಲ; ಆದ್ದರಿಂದ ಮೊದಲು ಅವರ ಪಾದಗಳನ್ನು ಹಿಡಿಯಬೇಕು. (ಅವರ ಕೃಪೆ ಪಡೆಯಲು ಪ್ರಯತ್ನಿಸಬೇಕು.) ಸದ್ಗುರುಗಳು ತಮ್ಮ ಶಿಷ್ಯನನ್ನು ಕ್ಷಣಾರ್ಧದಲ್ಲಿ ತಮ್ಮಂತೆಯೇ (ಮೋಕ್ಷಕ್ಕೆ ಅಧಿಕಾರಿ) ಮಾಡುತ್ತಾರೆ. ಅವರಿಗೆ ಕಾಲ, ಸಮಯ ಬೇಕಾಗುವುದಿಲ್ಲ’. ಸದ್ಗುರುಗಳ ಮಹಿಮೆಯು ಎಷ್ಟು ಅಗಾಧವಾಗಿದೆ ಎಂದರೆ, ಅವರಿಗೆ ಕಬ್ಬಿಣವನ್ನು ಚಿನ್ನವನ್ನಾಗಿ ಮಾಡುವ ಸ್ಪರ್ಶಮಣಿಯ ಉಪಮೆಯೂ ಶೋಭಿಸುವುದಿಲ್ಲ.
ಶಿಷ್ಯನಿಗೆ ಗುರುಗಳೇ ಸರ್ವಸ್ವವಾಗಿದ್ದಾರೆ !
‘ಗುರು’ ಎಂಬ ಶಬ್ದವನ್ನು ಉಚ್ಚರಿಸಿದ ತಕ್ಷಣ ಮನಸ್ಸಿನಲ್ಲಿ ಗೌರವಯುತ ಭಾವನೆ ಮೂಡಿ ಶರಣಾಗತಿ ಬರುತ್ತದೆ. ಗುರುಗಳ ಚರಣಗಳಲ್ಲಿ ಶಿಷ್ಯನು ತಾನಾಗಿಯೇ ನತಮಸ್ತಕನಾಗುತ್ತಾನೆ. ಶಿಷ್ಯನಿಗೆ ಗುರುಗಳ ಸ್ಥಾನವು ಅತ್ಯಂತ ಶ್ರೇಷ್ಠವಾದುದು; ಏಕೆಂದರೆ ಗುರುಗಳು ಅವನ ತಾಯಿ, ತಂದೆ, ಸಹೋದರ ಮತ್ತು ಸ್ನೇಹಿತ ಮಾತ್ರವಲ್ಲ, ಅವನ ಸರ್ವಸ್ವವಾಗಿದ್ದಾರೆ.
– ಸೌ. ವೈಷ್ಣವಿ ಬಧಾಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ.