1950 ರ ಸಂಬಂಧಿತ ಕಾನೂನು ಅಸ್ಸಾಂಗೆ ಮಾತ್ರ ಅನ್ವಯಿಸುತ್ತದೆ!

ನವದೆಹಲಿ – ರಾಜ್ಯದಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕಲು ಅಸ್ಸಾಂ ಸರಕಾರಕ್ಕೆ ಈಗ 75 ವರ್ಷಗಳಷ್ಟು ಹಳೆಯ ಕಾನೂನನ್ನು ಬಳಸಲು ಸಾಧ್ಯವಾಗಲಿದೆ. ಈ ಕಾನೂನಿನ ಪ್ರಕಾರ, ನುಸುಳುಕೋರರನ್ನು ಹೊರಹಾಕಲು ನ್ಯಾಯಾಲಯಕ್ಕೆ ಹೋಗುವ ಅವಶ್ಯಕತೆ ಇರುವುದಿಲ್ಲ. ಈ ಕಾನೂನನ್ನು ಬಳಸಲು ಸುಪ್ರೀಂ ಕೋರ್ಟ್ ಅಸ್ಸಾಂ ಸರಕಾರಕ್ಕೆ ಅನುಮತಿ ನೀಡಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಮಾಹಿತಿ ನೀಡಿದರು.
1. ಅಸ್ಸಾಂ ಸರಕಾರವು 1950 ರ ‘ವಲಸೆಗಾರರ ಹೊರಹಾಕುವಿಕೆ ಆದೇಶ’ವನ್ನು ಬಳಸಬಹುದು. ಈ ಕಾನೂನಿನ ಪ್ರಕಾರ, ಜಿಲ್ಲಾಧಿಕಾರಿಗಳಿಗೆ ನುಸುಳುಕೋರರನ್ನು ನೇರವಾಗಿ ದೇಶದಿಂದ ಹೊರಹಾಕುವ ಆದೇಶ ನೀಡುವ ಅಧಿಕಾರವಿದೆ ಎಂದು ಸರಮಾ ಇವರು ಹೇಳಿದರು.
2. ಈ ಕಾನೂನು ಅಸ್ಸಾಂಗೆ ಮಾತ್ರ ಅನ್ವಯಿಸುತ್ತದೆ. ಕೇಂದ್ರ ಸರಕಾರಕ್ಕೆ ಅಸ್ಸಾಂ ಹೊರಗಿನಿಂದ ಬರುವ ವ್ಯಕ್ತಿ ಅಲ್ಲಿನ ಸಾಮಾನ್ಯ ಜನರಿಗೆ ಅಪಾಯಕಾರಿ ಎಂದು ಅನಿಸಿದರೆ, ಸರಕಾರ ಅವರನ್ನು ಹೊರಹಾಕಬಹುದು. ಈ ಅಧಿಕಾರ ಕೇಂದ್ರ ಸರಕಾರದ ಬಳಿ ಇದ್ದರೂ, ಈ ಅಧಿಕಾರವನ್ನು ಅಸ್ಸಾಂ ಸರಕಾರದ ಅಧಿಕಾರಿಗಳಿಗೆ ಕೇಂದ್ರ ಸರಕಾರ ಹಸ್ತಾಂತರಿಸಬಹುದು.
ಸಂಪಾದಕೀಯ ನಿಲುವು75 ವರ್ಷಗಳಷ್ಟು ಹಳೆಯದಾದ ಕಾನೂನನ್ನು ತಿದ್ದುಪಡಿ ಮಾಡಿ ದೇಶಾದ್ಯಂತ ಜಾರಿಗೆ ತರಲು ಈಗ ಭಾರತ ಪ್ರೇಮಿ ವಕೀಲರು ಸರಕಾರದ ಮೇಲೆ ಸಂಘಟಿತವಾಗಿ ಒತ್ತಡ ಹೇರುವುದು ಅಗತ್ಯ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath