
ಟೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ಹಮಾಸ್ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯಿಂದಾಗಿ ಗಾಜಾ ಪಟ್ಟಿ ಸಂಪೂರ್ಣವಾಗಿ ನಾಶವಾಗುತ್ತಿದೆ. ಅಲ್ಲಿನ ಮುಸ್ಲಿಮರಿಗೆ ಆಹಾರ ಪದಾರ್ಥಗಳು ಸಿಗುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ, ‘ಎಕ್ಸ್’ ನಲ್ಲಿ ಮೊಹಮ್ಮದ್ ಜಾವೇದ್ ಎಂಬ ಖಾತೆಯಿಂದ ಒಂದು ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಅವರು ಒಂದು ಚಿತ್ರ ಮತ್ತು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆ ಚಿತ್ರ ಭಾರತದ ‘ಪಾರ್ಲೆ-ಜಿ’ ಬಿಸ್ಕತ್ ಪ್ಯಾಕೆಟ್‌ನದ್ದಾಗಿದ್ದು, ಅವರು ಈ ಪ್ಯಾಕೆಟ್ ಅನ್ನು ೨ ಸಾವಿರದ ೩೫೦ ರೂಪಾಯಿಗೆ ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪ್ಯಾಕೆಟ್‌ನ ಬೆಲೆ ಭಾರತದಲ್ಲಿ ಕೇವಲ ೫ ರೂಪಾಯಿ ಇದೆ. ಇದರಿಂದ ಗಾಜಾದಲ್ಲಿ ಆಹಾರ ಪದಾರ್ಥಗಳು ಸಿಗುವುದು ಎಷ್ಟು ದುಬಾರಿಯಾಗಿದೆ ಎಂದು ಅವರು ಹೇಳಲು ಪ್ರಯತ್ನಿಸಿದ್ದಾರೆ.
After a long wait, I finally got Ravif her favorite biscuits today. Even though the price jumped from €1.5 to over €24, I just couldn’t deny Rafif her favorite treat. pic.twitter.com/O1dbfWHVTF
— Mohammed jawad 🇵🇸 (@Mo7ammed_jawad6) June 1, 2025
ಪೋಸ್ಟ್‌ನಲ್ಲಿ ಅವರು, “ದೀರ್ಘ ಕಾಯುವಿಕೆಯ ನಂತರ, ಇಂದು ಕೊನೆಗೂ ನನಗೆ ರವಿಫ್‌ನ ಅಚ್ಚುಮೆಚ್ಚಿನ ಬಿಸ್ಕತ್ ಸಿಕ್ಕಿತು; ಆದರೆ ಅದರ ಬೆಲೆ ೧.೫ ಯೂರೋದಿಂದ (೧೪೭ ರೂಪಾಯಿ) ೨೪ ಯೂರೋಗಿಂತ ಹೆಚ್ಚಾಗಿದೆ (೨ ಸಾವಿರದ ೩೫೦ ರೂಪಾಯಿಗಿಂತ ಹೆಚ್ಚು). ಆದರೂ ನಾನು ರವಿಫ್‌ಗೆ ಅವನ ಅಚ್ಚುಮೆಚ್ಚಿನ ಬಿಸ್ಕತ್ ಅನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ” ಎಂದು ಬರೆದಿದ್ದಾರೆ.
ಸಂಪಾದಕೀಯ ನಿಲುವುಗಾಜಾದಲ್ಲಿ ಮುಸ್ಲಿಮರ ಪ್ರಸ್ತುತ ಪರಿಸ್ಥಿತಿಯು ಹಮಾಸ್‌ಗೆ ಬೆಂಬಲ ನೀಡಿದ್ದರಿಂದಲೇ ಆಗಿದೆ. ಇಷ್ಟೆಲ್ಲಾ ಆದರೂ ಅವರು ಹಮಾಸ್ ಅನ್ನು ವಿರೋಧಿಸುವುದಿಲ್ಲ, ಅದರ ಬಗ್ಗೆ ಮಾಹಿತಿ ನೀಡುವುದಿಲ್ಲ. ಆದ್ದರಿಂದ ಅವರು ಅನುಭವಿಸುತ್ತಿರುವುದು ಅವರ ಕರ್ಮಗಳ ಫಲವಾಗಿದೆ. ಭಯೋತ್ಪಾದನೆ ಪೀಡಿತ ಭಾರತ ಮತ್ತು ಭಾರತೀಯರು ಇವರ ಬಗ್ಗೆ ದುಃಖಪಡಬೇಕಾಗಿಲ್ಲ! |
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಸ್ಪೋರ್ಟ್ನಿಂದ ಪೌರತ್ವ ಸಾಬೀತಾಗುವುದಿಲ್ಲ! – ಕೇಂದ್ರ ಸರಕಾರ
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!