ತುಂಡು ಬಟ್ಟೆ ಧರಿಸುವ ಹೆಣ್ಣುಮಕ್ಕಳು, ಮಹಿಳೆಯರು ಶೂರ್ಪನಖಿಯಂತೆ ಕಾಣುತ್ತಾರೆ! – ಕೈಲಾಶ್ ವಿಜಯವರ್ಗೀಯ

ಮಧ್ಯಪ್ರದೇಶದ ಭಾಜಪ ಸರಕಾರದ ಸಚಿವರಾದ ಕೈಲಾಶ್ ವಿಜಯವರ್ಗೀಯ ಅವರ ಹೇಳಿಕೆ

ಇಂದೋರ್ (ಮಧ್ಯಪ್ರದೇಶ) – ‘ತುಂಡು ಬಟ್ಟೆ ಧರಿಸುವ ಹೆಣ್ಣುಮಕ್ಕಳು ಚೆನ್ನಾಗಿ ಕಾಣುತ್ತಾರೆ’ ಎಂದು ವಿದೇಶಗಳಲ್ಲಿ ಹೇಳಲಾಗುತ್ತದೆ; ಆದರೆ ಅದು ಅವರ ವಿಚಾರಧಾರೆ. ನಾನು ಕಾರ್ಯಕ್ರಮಗಳಿಗೆ ಹೋದಾಗ, ತುಂಡು ಬಟ್ಟೆ ಧರಿಸುವ ಮಹಿಳೆಯರು ಅಥವಾ ಹೆಣ್ಣುಮಕ್ಕಳು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ; ಆದರೆ ನಾನು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದಿಲ್ಲ. ತುಂಡು ಬಟ್ಟೆ ಧರಿಸುವ ಮಹಿಳೆಯರು ಚೆನ್ನಾಗಿ ಕಾಣುವುದಿಲ್ಲ. ಯಾವ ಮಹಿಳೆಯರು ತುಂಡು ಬಟ್ಟೆ ಧರಿಸುತ್ತಾರೋ, ಅವರು ಶೂರ್ಪನಖಿಯಂತೆ ಕಾಣುತ್ತಾರೆ. ಭಾರತದ ಹೆಣ್ಣುಮಕ್ಕಳು, ಮಹಿಳೆಯರು ಉತ್ತಮ ಬಟ್ಟೆಗಳನ್ನು ಧರಿಸಬೇಕು. ಅವರು ಸುಂದರ ಬಟ್ಟೆಗಳನ್ನು, ಒಳ್ಳೆಯ ಆಭರಣಗಳನ್ನು ಧರಿಸಬೇಕು, ಎಂದು ಮಧ್ಯಪ್ರದೇಶದ ಭಾಜಪ ಸರಕಾರದ ಕ್ಯಾಬಿನೆಟ್ ಸಚಿವ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ. ಅವರು ಇಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

‘ಕೈಲಾಶ್ ವಿಜಯವರ್ಗೀಯ ರಾಜೀನಾಮೆ ನೀಡಬೇಕಂತೆ !’ – ತೃಣಮೂಲ ಕಾಂಗ್ರೆಸ್

ಕೈಲಾಶ್ ವಿಜಯವರ್ಗೀಯ ಅವರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಪ್ಪಿಗೆ ಇದೆಯೇ? ಪ್ರಧಾನಿ ಮೋದಿ ಇದಕ್ಕೆ ಉತ್ತರ ನೀಡಬೇಕು. ಈ ಪ್ರಕರಣದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಕೈಲಾಶ್ ವಿಜಯವರ್ಗೀಯ ರಾಜೀನಾಮೆ ನೀಡಬೇಕು ಎಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.

ಸಂಪಾದಕೀಯ ನಿಲುವು

ತುಂಡು ಬಟ್ಟೆಗಳನ್ನು ಬೆಂಬಲಿಸುವ ತೃಣಮೂಲ ಕಾಂಗ್ರೆಸ್! ಇದು ಮಮತಾ ಬ್ಯಾನರ್ಜಿ ಮತ್ತು ರಾಜ್ಯದ ಮಹಿಳೆಯರಿಗೆ ಒಪ್ಪಿಗೆ ಇದೆಯೇ?