
ಟೋಕಿಯೋ (ಜಪಾನ್) – ಜಪಾನ್‌ನ ಖಾಸಗಿ ಸಂಸ್ಥೆಯಿಂದ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಪ್ರಯತ್ನ ಎರಡನೇ ಬಾರಿಗೆ ವಿಫಲವಾಗಿದೆ. ಜಪಾನ್‌ನ ‘ಐಸ್ಪೇಸ್’ (ispace) ಸಂಸ್ಥೆಯು ಕಳುಹಿಸಿದ್ದ ಲ್ಯಾಂಡರ್‌ನೊಂದಿಗಿನ ಸಂಪರ್ಕ ಕಡಿತಗೊಂಡಿದ್ದರಿಂದ ಈ ಯೋಜನೆ ವಿಫಲಗೊಂಡಿತು. ಇದು ಈ ಸಂಸ್ಥೆಯ ಎರಡನೇ ಚಂದ್ರಯಾನ ಯೋಜನೆಯಾಗಿತ್ತು. ಈ ಸಂಸ್ಥೆಯ ‘ರೆಸಿಲಿಯನ್ಸ್’ (Resilience) ಹೆಸರಿನ ಬಾಹ್ಯಾಕಾಶ ನೌಕೆಯು ಜೂನ್ 6 ರಂದು ಬೆಳಿಗ್ಗೆ 4:17 ಕ್ಕೆ ಚಂದ್ರನ ಮೇಲೆ ಇಳಿಯಬೇಕಿತ್ತು. ಆದರೆ, ಯೋಜಿತ ಲ್ಯಾಂಡಿಂಗ್‌ಗೆ ಒಂದು ನಿಮಿಷ ಮೊದಲು ಲ್ಯಾಂಡರ್‌ನೊಂದಿಗಿನ ಸಂಪರ್ಕ ಕಡಿತಗೊಂಡಿತು. ಸಂಪರ್ಕವನ್ನು ಮರುಸ್ಥಾಪಿಸಲು ಪ್ರಯತ್ನಿಸಲಾಯಿತು, ಆದರೆ ಅದು ಯಶಸ್ವಿಯಾಗಲಿಲ್ಲ. ಇದರ ನಂತರ, ಈ ಯೋಜನೆಯು ಕೊನೆಗೊಂಡಿದೆ ಎಂದು ಘೋಷಿಸಲಾಯಿತು. ಈ ಹಿಂದೆ, ‘ಐಸ್ಪೇಸ್’ ಏಪ್ರಿಲ್ 2023 ರಲ್ಲಿ ಮೊದಲ ಬಾರಿಗೆ ಚಂದ್ರನ ಮೇಲೆ ನೌಕೆಯನ್ನು ಇಳಿಸಲು ಪ್ರಯತ್ನಿಸಿತ್ತು. ಜಪಾನ್‌ನ ಸರಕಾರಿ ಬಾಹ್ಯಾಕಾಶ ಸಂಸ್ಥೆಯು 2024 ರಲ್ಲಿ ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿದೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ