ಸವಣೂರಿನಲ್ಲಿ ನಡೆದ ಘಟನೆ

ಸವಣೂರು – ನಗರದ ಸಂಗಮೇಶ್ವರ ಖಾನಾವಳಿಯಲ್ಲಿ ಮೂವರು ಮುಸಲ್ಮಾನರು ಊಟ ಮಾಡಿದ ನಂತರ ಹಣ ನೀಡದೆ ಹೊರಡಲು ಯತ್ನಿಸಿದಾಗ, ಖಾನಾವಳಿಯ ಮಾಲೀಕ ಮೃತ್ಯುಂಜಯ ಕನವಳ್ಳಿಮಠ ಅವರು ಅವರನ್ನು ತಡೆದು ಹಣ ಕೇಳಿದ್ದಾರೆ. ಆ ಸಮಯದಲ್ಲಿ ಮುಸಲ್ಮಾನರು ಮೃತ್ಯುಂಜಯ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆಗ ಮೃತ್ಯುಂಜಯನನ್ನು ರಕ್ಷಿಸಲು ಬಂದ ಅವರ ತಾಯಿ, ಪತ್ನಿ ಮತ್ತು ಮಕ್ಕಳ ಮೇಲೂ ಮುಸಲ್ಮಾನರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಸವಣೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರು ಮೃತ್ಯುಂಜಯ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಕೊಲೆ ಯತ್ನದ ಪ್ರಕರಣ ದಾಖಲಿಸದಿದ್ದರೆ ಆಂದೋಲನ – ಪ್ರಮೋದ ಮುತಾಲಿಕ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ ಅವರು, ಹಸಿದವರಿಗೆ ಅನ್ನ ನೀಡುವವರ ಮೇಲೆ ಹಲ್ಲೆ ಮಾಡುವ ದುಷ್ಟರ ಅಹಂಕಾರವನ್ನು ಈಗ ನಿಲ್ಲಿಸಬೇಕು. ಇಂತಹ ಗಂಭೀರ ಘಟನೆಯಲ್ಲಿ ಪೊಲೀಸರು ಗೂಂಡಾಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಇದು ಜಿಲ್ಲಾಡಳಿತದ ನಿಷ್ಕ್ರಿಯತೆಯನ್ನು ಸ್ಪಷ್ಟಪಡಿಸುತ್ತದೆ. ಶ್ರೀರಾಮ ಸೇನೆಯು ಈ ರೀತಿಯ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಹಲ್ಲೆ ಮಾಡಿದ ಅಲಾವುದ್ದೀನ್, ಅಸ್ಫಾಕ್ ಮತ್ತು ಫರಾಜ್ ಈ ಗೂಂಡಾಗಳ ವಿರುದ್ಧ ಕೇವಲ ಸಾಮಾನ್ಯ ದೂರು ದಾಖಲಿಸಲಾಗಿದೆ. ಅವರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಬೇಕು. ಹಾಗಾಗದಿದ್ದರೆ, ಶ್ರೀರಾಮ ಸೇನೆಯ ನೇತೃತ್ವದಲ್ಲಿ ತೀವ್ರ ಆಂದೋಲನ ನಡೆಸಲಾಗುವುದು, ಎಂದು ಅವರು ಎಚ್ಚರಿಕೆ ನೀಡಿದರು.
ಸಂಪಾದಕೀಯ ನಿಲುವುರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ, ಮುಸಲ್ಮಾನರಿಗೆ ಮುಕ್ತ ಅವಕಾಶ ಸಿಕ್ಕಿದ್ದು, ಅವರು ಹಿಂದೂಗಳ ವಿರುದ್ಧ ಏನನ್ನಾದರೂ ಮಾಡಲು ಸ್ವತಂತ್ರರಾಗಿದ್ದಾರೆ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ