
ಕೆಲವು ತಿಂಗಳ ಹಿಂದೆ ರಷ್ಯಾ ಯುಕ್ರೇನಿನ ‘ಪವರ್ ಗ್ರಿಡ್’ (ವಿದ್ಯುತ್ ನಿರ್ಮಾಣಕೇಂದ್ರದಿಂದ ವಿದ್ಯುತ್ ವಾಹಿನಿಗಳ ಮೂಲಕ ವಿದ್ಯುತ್ತನ್ನು ಗ್ರಾಹಕರ ವರೆಗೆ ತಲುಪಿಸುವ ವ್ಯವಸ್ಥೆ) ಮೇಲೆ ಭಾರಿ ದಾಳಿ ನಡೆಸಿತು. ಇದರಿಂದ ಯುಕ್ರೇನಿನಲ್ಲಿ ಲಕ್ಷಾಂತರ ಜನರು ಕತ್ತಲೆಯಲ್ಲಿದ್ದರು. ಚಳಿಗಾಲದಲ್ಲಿ ಈ ದಾಳಿ ನಡೆದಿರುವುದರಿಂದ ಲಕ್ಷಾಂತರ ಯುಕ್ರೇನಿಯನ್ನರು ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಜೀವಿಸಬೇಕಾಗುತ್ತಿದೆ. ಇದರಿಂದ ಅನೇಕ ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ. ಶತ್ರುವಿನ ಸೈನಿಕ ಸತ್ತಾಗ ಶತ್ರುವಿನ ಮೇಲೆ ಎಷ್ಟು ಒತ್ತಡ ನಿರ್ಮಾಣವಾಗುತ್ತದೆಯೋ, ಅದಕ್ಕಿಂತ ಎಷ್ಟು ಪಟ್ಟು ಹೆಚ್ಚು ಒತ್ತಡ ಸಾಮಾನ್ಯ ನಾಗರಿಕ ಸತ್ತಾಗ ಅಥವಾ ಅವರು ಆ ಸ್ಥಿತಿಗೆ ಬಂದಾಗ ಉಂಟಾಗುತ್ತದೆ. ಈ ಒತ್ತಡ ಆ ರಾಷ್ಟ್ರದ ಜನರಿಂದಲೂ ಇರುತ್ತದೆ. ಶತ್ರುವಿನ ಮನೋಬಲವು ಇದರಿಂದ ಬೇಗನೆ ಕ್ಷೀಣಿಸುತ್ತದೆ. ವಿದ್ಯುತ್ ಜಾಲದ ಮೇಲೆಯೇ ದಾಳಿ ನಡೆದಿರುವುದರಿಂದ ವಿದ್ಯುತ್ ಕೊರತೆಯಿಂದ ಯುಕ್ರೇನಿನ ಕೈಗಾರಿಕೆಗಳ ಮೇಲೂ ಪರಿಣಾಮ ಬೀಳುತ್ತದೆ. ಇದನ್ನು ‘ಆತ್ಮವನ್ನು ಅಥವಾ ಶಕ್ತಿ ಕೇಂದ್ರವನ್ನು ಘಾಸಿಗೊಳಿ ಸುವುದು’ (ಆತ್ಮ ಅಥವಾ ಶಕ್ತಿ ಕೇಂದ್ರದ ಮೇಲೆ ಆಘಾತವನ್ನುಂಟು ಮಾಡುವುದು) ಎಂದು ಹೇಳುತ್ತಾರೆ. ಶತ್ರುವನ್ನು ಈ ರೀತಿ ಗೊಂದಲಕ್ಕೀಡುಗೊಳಿಸುವುದು ಯುದ್ಧತಂತ್ರದ ಒಂದು ಭಾಗವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಎರಡನೇ ಮಹಾಯುದ್ಧದ ಒಂದು ಘಟನೆಯನ್ನು ನೋಡೋಣ.
೧. ಜರ್ಮನಿಯನ್ನು ತಡೆಯಲು ‘ಮೊಹನೆ’ ಹೆಸರಿನ ಅಣೆಕಟ್ಟನ್ನು ಸ್ಫೋಟಿಸುವ ಯೋಜನೆಯನ್ನು ಇಂಗ್ಲೆಂಡ್ ಗುಪ್ತಚರ ಇಲಾಖೆ ಪ್ರಸ್ತುತಪಡಿಸುವುದು ಎರಡನೆಯ ಮಹಾಯುದ್ಧದ ಸಮಯದಲ್ಲಿ, ಜರ್ಮನಿ ಯುರೋಪ್ ಅನ್ನು ನುಂಗುತ್ತಾ ಹೊರಟಿತ್ತು. ಜರ್ಮನಿ, ಅಂದರೆ ಹಿಟ್ಲರನನ್ನು ನಿಲ್ಲಿಸುವುದು ಸರಿಸುಮಾರು ಅಸಾಧ್ಯವಾಗಿತ್ತು. ಕೈಗಾರಿಕಾ ಕ್ಷೇತ್ರದಲ್ಲಿಯೂ ಜರ್ಮನಿ ಪ್ರಗತಿ ಸಾಧಿಸುತ್ತಿತ್ತು. ಜರ್ಮನಿಯ ಹೆಚ್ಚಿನ ಕೈಗಾರಿಕೆಗಳು ಯುದ್ಧಸಾಮಗ್ರಿಗಳನ್ನು ಉತ್ಪಾದಿಸುತ್ತಿದ್ದವು. ಜರ್ಮನಿಯ ಸುಮಾರು ಶೇ. ೫೦ ರಷ್ಯಾ ಕೈಗಾರಿಕೆಗಳಿಗೆ ಬೇಕಾಗುವ ವಿದ್ಯುತ್ತಿನ ನಿರ್ಮಾಣವನ್ನು ರೂಹರ ವ್ಯಾಲಿಯ ‘ಮೊಹನೆ’ ಹೆಸರಿನ ಅಣೆಕಟ್ಟಿನಿಂದ ಉತ್ಪಾದಿಸಲಾಗುತ್ತಿತ್ತು. ಹಾಗಾಗಿ ಆ ಆಣೆಕಟ್ಟನ್ನು ಸ್ಫೋಟಿಸುವ ಕಲ್ಪನೆಯನ್ನು ಇಂಗ್ಲೆಂಡಿನ ಗುಪ್ತಚರ ಇಲಾಖೆಯ ಬಾರ್ನ್ಸ್ ವಾಲಿಸ್ ಎಂಬ ವ್ಯಕ್ತಿಗೆ ಹೊಳೆಯಿತು. ಅವನು ಈ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದನು. ‘ಅವನ ಕಲ್ಪನೆಯು ಯಾವುದೇ ಚಲನಚಿತ್ರ ಅಥವಾ ಕಾದಂಬರಿಯ ವಿಷಯವಾಗಿ ಉತ್ತಮವಾಗಿದೆ’ ಮತ್ತು ಅದನ್ನು ಕಾರ್ಯಗತಗೊಳಿಸಲು ಅಸಾಧ್ಯವಾಗಿದೆ’ ಎಂದು ಅವನ ಅಪಹಾಸ್ಯ ಮಾಡಲಾಯಿತು.

೨. ‘ಮೊಹನೆ’ ಅಣೆಕಟ್ಟನ್ನು ಸ್ಫೋಟಿಸುವ ನಿಜವಾದ ಯೋಜನೆಯನ್ನು ರೂಪಿಸುವುದು
ಆ ವ್ಯಕ್ತಿಯು ತನ್ನ ವರದಿಯನ್ನು ಸಲ್ಲಿಸಿದ ಬಳಿಕ ೪-೫ ವರ್ಷಗಳು ಕಳೆದವು. ಆದರೆ ಹಿಟ್ಲರನನ್ನು ತಡೆಯಲು ಯಾರ ಬಳಿಯೂ ಯಾವುದೇ ನಿರ್ದಿಷ್ಟ ಉಪಾಯಯೋಜನೆ ಇರಲಿಲ್ಲ. ಕಟ್ಟಕಡೆಯ ಉಪಾಯವೆಂದು ಇಂಗ್ಲೆಂಡಿನ ಗುಪ್ತಚರ ಸಂಸ್ಥೆಯು ಆ ವ್ಯಕ್ತಿಯ ವರದಿಯನ್ನು ಮರು-ಪರಿಶೀಲಿಸಿತು ಮತ್ತು ಕಲ್ಪನೆಯನ್ನು ವಾಸ್ತವಗೊಳಿಸಲು ಏನೇನು ಮಾಡಬೇಕಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲು ಆ ವ್ಯಕ್ತಿಗೆ ಕೇಳಿತು. ಆ ವ್ಯಕ್ತಿ ಹಾಗೆ ಅಧ್ಯಯನ ಮಾಡಿದನು. ಅಣೆಕಟ್ಟಿನ ಗೋಡೆಯು ಹಲವಾರು ಮೀಟರ್ ಉದ್ದವಿತ್ತು. ಅಣೆಕಟ್ಟಿನ ಗೋಡೆಯ ಬಳಿ ನೀರಿನ ಆಳ ನೂರಾರು ಅಡಿ ಇತ್ತು. ಅಣೆಕಟ್ಟಿನ ಗೋಡೆಯಿಂದ ೨೦೦ ಮೀಟರ್ ದೂರದಲ್ಲಿ ಕಬ್ಬಿಣದ ಜಾಳಿಗೆಯನ್ನು (ಜಾಲರಿಯನ್ನು) ತಳದವರೆಗೆ ಇಳಿಸಲಾಗಿತ್ತು. ಅದರ ಮುಂದೆ ೨೦೦ ಮೀಟರ್ ದೂರದಲ್ಲಿ, ಮತ್ತೊಂದು ಕಬ್ಬಿಣದ ಜಾಳಿಗೆಯನ್ನು ನೀರಿನ ತಳದ ವರೆಗೆ ಇಳಿಸಲಾಗಿತ್ತು.
ಆ ವ್ಯಕ್ತಿಯ ಕಲ್ಪನೆ ನಿಜವಾಗಿಯೂ ಸಿನಿಮಾಕ್ಕೆ ಒಪ್ಪುವ ರೀತಿಯಲ್ಲಿಯೇ ಇತ್ತು. ಅದು ನಿಖರವಾಗಿ ಏನಿತ್ತು ? ಹೇಳುತ್ತೇನೆ ! ನಾವು ಬಾಲ್ಯದಲ್ಲಿ, ನದಿ ಅಥವಾ ಕೆರೆಯಲ್ಲಿ ಒಂದು ಚಪ್ಪಟೆಯಾದ ಕಲ್ಲನ್ನು ಎಸೆದಾಗ, ಅದು ನೀರಿನಲ್ಲಿ ತಕ್ಷಣವೇ ಮುಳುಗದೇ, ಕ್ರಮೇಣ ಹಂತಹಂತವಾಗಿ ನೀರಿನಲ್ಲಿ ಮುಳುಗುತ್ತದೆ. ಜರ್ಮನಿಯ ಅಣೆಕಟ್ಟನ್ನು ಸ್ಫೋಟಿಸಲು ಇದೇ ರೀತಿಯಲ್ಲಿ ದೊಡ್ಡ ಬಾಂಬ್ ಅನ್ನು ಎಸೆಯಲು ಯೋಜಿಸಲಾಗಿತ್ತು, ಇದರಿಂದ ಆ ಬಾಂಬ್ ಎರಡು ಜಾಲರಿಗಳಲ್ಲಿ ಸಿಲುಕಿಕೊಳ್ಳದೇ ಅದು ಮೇಲಿನಿಂದ ಹಂತ ಹಂತವಾಗಿ ಮುಂದೆ ಗೋಡೆಯ ಹತ್ತಿರ ಹೋಗಬಹುದು’ ಎನ್ನುವುದು ಆ ಯೋಜನೆಯಾಗಿತ್ತು.
೩. ಅಣೆಕಟ್ಟನ್ನು ಸ್ಫೋಟಿಸಲು ನಡೆಸಿದ ಅಧ್ಯಯನ ಅಣೆಕಟ್ಟಿನ ಗೋಡೆಯ ಉದ್ದ ಎಷ್ಟು ?, ಅಗಲ ಎಷ್ಟು ?, ನೀರಿನ ಸರಾಸರಿ ಆಳ ಎಷ್ಟು ?, ಗೋಡೆಯ ಬಳಿ ನೀರಿನ ಆಳ ಎಷ್ಟು ?, ಮೊದಲ ಜಾಳಿಗೆಯ ಬಳಿ ನೀರಿನ ಆಳ ಎಷ್ಟು ?, ಎರಡನೇ ಜಾಳಗಿಯ ಬಳಿ ಇರುವ ನೀರಿನ ಆಳ ಎಷ್ಟು ?, ಆಯಾ ಸ್ಥಳದಲ್ಲಿ ನೀರಿನ ಸಾಂದ್ರತೆ ಎಷ್ಟು ?, ಬಾಂಬ್ ಎಷ್ಟು ಕೆ.ಜಿ. ಮತ್ತು ಯಾವ ಆಕಾರದಲ್ಲಿ ಬೇಕಾಗಬಹುದು ?, ಆ ಬಾಂಬ್ ಬೀಳಿಸುವಾಗ ಅದರ ವೇಗ ಎಷ್ಟಿರಬೇಕು ? ಎಷ್ಟು ಎತ್ತರದಿಂದ ಆ ಬಾಂಬ್ ವಿಮಾನದಿಂದ ಬೀಳಿಸಬೇಕಾಗಬಹುದು ? ಯಾವ ಸಮಯದಲ್ಲಿ ಬಾಂಬ್ ಬೀಳಿಸುವುದಿದೆಯೋ, ಆ ಸಮಯದಲ್ಲಿ ಗಾಳಿಯ ದಿಕ್ಕು ಮತ್ತು ವೇಗ ಎಷ್ಟು ಇರುತ್ತದೆ ?, ಒಟ್ಟಾರೆ ಹವಾಮಾನ ಹೇಗಿರುತ್ತದೆ ? ಅಣೆಕಟ್ಟಿನ ಮೇಲೆ ಕಾವಲುಗಾರರ ಪಾಳಿ ಬದಲಾಯಿಸುವ ಸಮಯ ಏನಿದೆ ? ಯಾವ ವಿಮಾನದಿಂದ ಬಾಂಬ್ ಎಸೆಯಲಾಗುವುದೋ, ಆ ವಿಮಾನದೊಂದಿಗೆ ಮುಂದೆ ಎಲ್ಲಿ ಮತ್ತು ಹೇಗೆ ಹೋಗುವುದು ?, ಇಂತಹ ಅನೇಕ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಲಾಯಿತು. ಯೋಜನೆಯನ್ನು ಕಾರ್ಯಗತಗೊಳಿಸುವಾಗ ಯಾವ ಯಾವ ತೊಂದರೆಗಳು ಎದುರಾಗಬಹುದು, ಎನ್ನುವುದನ್ನು ಅಧ್ಯಯನ ಮಾಡಲು ಒಂದು ಸಣ್ಣ ಅಣೆಕಟ್ಟನ್ನು ‘ಮಾದರಿ’ಯಾಗಿ ನಿರ್ಮಿಸಲಾಯಿತು ಮತ್ತು ಇತರ ವಿಷಯಗಳನ್ನು ಆ ಪ್ರಮಾಣದಲ್ಲಿ ತಯಾರಿಸಿ ಪರೀಕ್ಷಿಸಲಾಯಿತು. ಯೋಜನೆಯನ್ನು ಪ್ರತ್ಯಕ್ಷ ಕಾರ್ಯಗತಗೊಳಿಸಬಹುದೆಂದು ಮನವರಿಕೆಯಾದ ನಂತರ, ಎಲ್ಲಾ ಸಿದ್ಧತೆಗಳನ್ನು ಮಾಡಲಾಯಿತು.
೪. ಅಣೆಕಟ್ಟನ್ನು ಸ್ಫೋಟಿಸಲು ಪ್ರತ್ಯಕ್ಷ ಕೈಕೊಂಡ ಕ್ರಮಗಳು ನೂರಾರು ಕಿಲೋಗಳ ಗೋಲಾಕಾರದ ಬಾಂಬ್ ತಯಾರಿಸಲಾಯಿತು. ಇದನ್ನು ವಾಯುಪಡೆಯ ಯುದ್ಧ ವಿಮಾನದಲ್ಲಿ ನೇತುಹಾಕಿ ತೆಗೆದುಕೊಂಡು ಹೋಗಲು ನಿರ್ಧರಿಸಲಾಯಿತು. ಯಾವ ಸ್ಥಳದಲ್ಲಿ ಅದನ್ನು ಬೀಳಿಸುವುದಿದೆಯೋ ಆ ಸ್ಥಳದಲ್ಲಿ ಆ ವಿಮಾನದಿಂದ ಬೇರ್ಪಡಿಸುವಂತೆ ವಿಮಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ೧೬ ಮೇ ೧೯೪೩ ಆಕ್ರಮಣದ ದಿನವೆಂದು ನಿರ್ಧರಿಸಲಾಯಿತು. ರಾತ್ರಿ ಪಾಳಿಯ ಬದಲಾವಣೆಯ ಸಮಯದಲ್ಲಿ, ಬ್ರಿಟಿಷ್ ವಾಯುಪಡೆಯ ಒಂದು ವಿಮಾನವು ‘ಲೋ ಫ್ಲೈಯಿಂಗ್’ನಲ್ಲಿ ಬಂದಿತು, ಅಂದರೆ ಕಡಿಮೆ ಎತ್ತರದಿಂದ ಹಾರುತ್ತಿತ್ತು. ಆ ವಿಮಾನಕ್ಕೆ ನೂರಾರು ಕಿಲೋಗ್ರಾಂ ತೂಕದ ಗೋಲಾಕಾರದ ಬಾಂಬ್ನ್ನು ಜೋಡಿಸಲಾಗಿತ್ತು. ನಿಗದಿತ ವೇಗದಲ್ಲಿ ಮತ್ತು ನಿಗದಿತ ಎತ್ತರದಲ್ಲಿ, ವಿಮಾನವು ಬಂದು ನಿಗದಿತ ಸ್ಥಳದಲ್ಲಿ ಬಾಂಬ್ ವಿಮಾನದಿಂದ ಬೇರ್ಪಟ್ಟಿತು. ವೇಗ ಮತ್ತು ದುಂಡನೆಯ ಕಾರಣ, ಬಾಂಬ್ ನೀರಿಗೆ ಬಿದ್ದಾಗ, ಅದು ಮೊದಲ ಒಂದು ಹಂತವನ್ನು ದಾಟಿ, ಜಾಳಿಗೆಯನ್ನು ದಾಟಿತು, ಮತ್ತೊಂದು ಹಂತವನ್ನು ದಾಟಿ ಎರಡನೇ ಜಾಳಿಗೆಯನ್ನು ದಾಟಿತು ಮತ್ತು ಇನ್ನೂ ಎರಡು ಹಂತಗಳನ್ನು ದಾಟಿ ನಂತರ, ನೂರಾರು ಕೆಜಿ ತೂಕದ ಬಾಂಬ್ ಗೋಡೆಯ ಹತ್ತಿರ ಬಂದು, ಮುಳುಗುತ್ತಾ ನೀರಿನ ತಳಕ್ಕೆ ಹೋಯಿತು.
೫. ಅಣೆಕಟ್ಟಿನಲ್ಲಿ ನಡೆಸಿದ ಸ್ಫೋಟದಿಂದ ಜರ್ಮನಿಗೆ ಆದ ಹಾನಿ ಮತ್ತು ಯುದ್ಧ ತಂತ್ರದ ಪಾಠ ಕೆಲವೇ ಕ್ಷಣಗಳಲ್ಲಿ ಭಾರಿ ಸ್ಫೋಟ ಸಂಭವಿಸಿ ಗೋಡೆಗೆ ದೊಡ್ಡ ರಂಧ್ರವಾಯಿತು. ಕೋಟ್ಯಂತರ ಲೀಟರ್ ನೀರು ಹರಿದು ಹೋಯಿತು. ಇದರಿಂದಾಗಿ ಮುಂದಿನ ಅಣೆಕಟ್ಟ್ಟಿಗೂ ಹಾನಿಯಾಯಿತು. ಇದರ ಪರಿಣಾಮದಿಂದ ಎರಡು ‘ಜಲವಿದ್ಯುತ್ ಕೇಂದ್ರಗಳು’ ನಾಶವಾದವು. ವಿದ್ಯುತ್ ಉತ್ಪಾದನೆಯು ನಿಂತಿತು ಮತ್ತು ಜರ್ಮನಿಯಲ್ಲಿನ ಹೆಚ್ಚಿನ ಕೈಗಾರಿಕೆಗಳು ಸಹ ಮುಚ್ಚಲ್ಪಟ್ಟವು. ಆಣೆಕಟ್ಟು ಒಡೆದಿದ್ದರಿಂದ ಉಂಟಾದ ಪ್ರವಾಹ ದಿಂದ ಸರಿಸುಮಾರು ೧,೬೦೦ ಜರ್ಮನ್ ನಾಗರಿಕರು, ೬೦೦ ಜರ್ಮನ್ ಕಾರ್ಮಿಕರು ಮತ್ತು ೧,೦೦೦ ಗುಲಾಮ ಕಾರ್ಮಿಕರು (ರಷ್ಯಾದವರು) ಕೊಲ್ಲಲ್ಪಟ್ಟರು. ಜರ್ಮನ್ ಪ್ರಜೆಗಳು ಅಣೆಕಟ್ಟನ್ನು ಬೇಗನೆ ದುರಸ್ತಿ ಮಾಡಿದರು; ಆದರೆ ಅವರ ಉದ್ಯಮವು ಪುನರಾರಂಭಿಸಲು ಮತ್ತು ಉತ್ಪಾದನೆಯನ್ನು ಪುನರಾರಂಭಗೊಳ್ಳಲು ೫-೬ ತಿಂಗಳು ಬೇಕಾಯಿತು. ಗಡಿಯಲ್ಲಿ ಹೋರಾಡುವ ಬದಲು ಶತ್ರುವಿನ ಮರ್ಮ ಸ್ಥಾನ ಅಥವಾ ಶಕ್ತಿ ಕೇಂದ್ರಗಳ ಮೇಲೆ ನೇರವಾಗಿ ದಾಳಿ ಮಾಡುವ ಮೂಲಕ ಶತ್ರುವನ್ನು ನಿರುತ್ಸಾಹಗೊಳಿಸುವುದು ಇದು ಯುದ್ಧತಂತ್ರದ ಪ್ರಮುಖ ಭಾಗವಾಗಿದೆ. ಈ ರೀತಿಯಾಗಿ ಅನೇಕ ಜನರು ತಮ್ಮ ದೇಶವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ ಮತ್ತು ಯಶಸ್ವಿಯಾಗುತ್ತಿರುತ್ತಾರೆ. ಮುಂಬರುವ ಮೂರನೇ ಮಹಾಯುದ್ಧದ ಹಿನ್ನೆಲೆಯಲ್ಲಿ, ಭಾರತೀಯ ಆಡಳಿತಗಾರರು ಇಂತಹ ವಿಷಯಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕು ಮತ್ತು ಅದಕ್ಕೆ ಅನುಗುಣವಾಗಿ ಶತ್ರುಗಳನ್ನು ಸೋಲಿಸಲು ತಮ್ಮ ಗುಪ್ತಚರ ಸಂಸ್ಥೆಗಳು ಮತ್ತು ಸೈನ್ಯದ ಯೋಜನೆಗಳಿಗೆ ‘ಪೂರ್ಣ ಸ್ವಾತಂತ್ರ್ಯ’ ನೀಡಬೇಕು.
– ಶ್ರೀ. ವಿಕ್ರಮ ಭಾವೆ, ಹಿಂದೂ ವಿಧಿಜ್ಞ ಪರಿಷತ್ತು, ಮುಂಬಯಿ
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಲಂಡನ್ ಮನೆಯಂತೆ ಮಹಾರಾಷ್ಟ್ರದಲ್ಲಿರುವ ಸಾವರ್ಕರ್ ಸದನವನ್ನು ಖರೀದಿಸಿ ಸಂರಕ್ಷಿಸಬೇಕು !
ಮುಂಬಯಿ: 33 ವರ್ಷಗಳಿಂದ ಕಾನೂನುಬಾಹಿರವಾಗಿದ್ದ ಸರಕಾರಿ ಭೂಮಿ; ಸದ್ಯ ‘ಚರ್ಚ್ ಆಫ್ ಸೇಂಟ್ ಆಂಡ್ರ್ಯೂ ಆಂಡ್ ಸೇಂಟ್ ಕೊಲಂಬಾ’ ಸಂಸ್ಥೆಯ ವಶದಲ್ಲಿ!
ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿನ ಕಾರ್ಪೊರೇಟ್ ಜಿಹಾದ್ ಮತ್ತು ಮತಾಂತರದ ವಿಷಯಗಳು ಗಂಭೀರವಾಗಿದ್ದು, ಕೇಂದ್ರ ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಸಚಿವರು!
ಫ್ರಾನ್ಸಿಸ್ ಕ್ಸೇವಿಯರ್ನ ನಿಜವಾದ ಇತಿಹಾಸವನ್ನು ಜಗತ್ತಿನ ಮುಂದೆ ತರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ!
ಸಾರಸಬಾಗ್ ಅನ್ನು ‘ಶಾಹೀನ್ ಬಾಗ್’ ಆಗಲು ಬಿಡುವುದಿಲ್ಲ! – ಹಿಂದುತ್ವನಿಷ್ಟರ ನಿರ್ಧಾರ
ಪುಣೆ: ಹಿಂದುತ್ವಕ್ಕಾಗಿ ಕಾರ್ಯನಿರ್ವಹಿಸುವ ಸೇನಾನಿಗಳಿಗೆ ‘ಹಿಂದೂ ಶೌರ್ಯ’ ಪ್ರಶಸ್ತಿ ನೀಡಿ ಗೌರವ!