'ಹಿಂದೂ ವಿಧಿಜ್ಞ ಪರಿಷತ್ತಿನ' ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರದ ಮೂಲಕ ಆಗ್ರಹ !

ಮುಂಬಯಿ – ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಲಂಡನ್‌ನಲ್ಲಿರುವ ಮನೆಯನ್ನು ಮಹಾರಾಷ್ಟ್ರ ಸರಕಾರ ಖರೀದಿಸಿ ಸಂರಕ್ಷಿಸುತ್ತಿದೆ. ಸ್ವಾತಂತ್ರ್ಯವೀರ ಸಾವರ್ಕರ್ ಅವರು 38 ವರ್ಷಗಳ ಕಾಲ ವಾಸವಿದ್ದ ಮಹಾರಾಷ್ಟ್ರದ ‘ಸಾವರ್ಕರ್ ಸದನ’ ಮಾತ್ರ ನಿರ್ಲಕ್ಷ್ಯಕ್ಕೊಳಗಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮನೆಯಂತೆ ಸಾವರ್ಕರ್ ಸದನವನ್ನು ಸಹ ಮಹಾರಾಷ್ಟ್ರ ಸರಕಾರ ಖರೀದಿಸಿ ಸಂರಕ್ಷಿಸಬೇಕು ಮತ್ತು ಅದಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ನೀಡಬೇಕು ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ವಕೀಲ ವೀರೇಂದ್ರ ಇಚಲಕರಂಜೀಕರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾಡ್ ಸತ್ಯಾಗ್ರಹ ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಡಿದರು, ಹಾಗೆಯೇ ಸ್ವಾತಂತ್ರ್ಯವೀರ ಸಾವರ್ಕರ್ ಅವರು ಪತಿತ ಪಾವನ ಮಂದಿರವನ್ನು ಸ್ಥಾಪಿಸಿ, ಅಲ್ಲಿ ಅಂತರ್ಜಾತಿಯ ಭೋಜನವನ್ನು ಆಯೋಜಿಸಿ ಮತ್ತು ಹರಿಜನರಿಗೆ ದೇವಾಲಯದೊಳಗೆ ಪ್ರವೇಶ ನೀಡುವ ಮೂಲಕ ಜಾತಿವಾದವನ್ನು ಕೊನೆಗೊಳಿಸುವ ಕೆಲಸ ಮಾಡಿದರು. ಡಾ. ಅಂಬೇಡ್ಕರ್ ಅವರ ಲಂಡನ್ ಮನೆಯನ್ನು ಖರೀದಿಸಲು ಮಹಾರಾಷ್ಟ್ರ ಸರಕಾರ 36 ಕೋಟಿ 4 ಲಕ್ಷ ರೂಪಾಯಿಗಳನ್ನು, ಹಾಗೂ ಅಲ್ಲಿ ವಿವಿಧ ವಸ್ತುಗಳ ಖರೀದಿಗಾಗಿ 1 ಕೋಟಿ 25 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ. ಇತರ ವಿವಿಧ ಸ್ಮಾರಕಗಳಿಗಾಗಿ 56 ಕೋಟಿ ರೂಪಾಯಿಗಳನ್ನು, ಹಾಗೂ ದೆಹಲಿಯಲ್ಲಿರುವ ಅಂತರರಾಷ್ಟ್ರೀಯ ಕೇಂದ್ರಕ್ಕಾಗಿ ಸರಕಾರವು 196 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದಕ್ಕೆ ವಿರುದ್ಧವಾಗಿ ಸಾವರ್ಕರ್ ಸದನದ ಬಗ್ಗೆ ಸರಕಾರ ಉದಾಸೀನತೆ ತೋರುತ್ತಿದೆ.

| ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಅವರು ಪ್ರಧಾನಿ ಮೋದಿಯವರಿಗೆ ಹಾಗೂ ಮಹಾರಾಷ್‌ಟರದ ಮುಖ್ಯಮಂತ್ರಿ ದೆವೇಂದ್ರ ಫಡಣ್ವಿಸ್ ಅವರಿಗೆ ಕಳುಹಿಸಿದ ಪತ್ರ |
ಸರಕಾರದ ಹಸ್ತಕ್ಷೇಪ ಅಗತ್ಯ !
ಪ್ರಸ್ತುತ ಮುಂಬಯಿ ಹೈಕೋರ್ಟ್‌ನಲ್ಲಿ ಈ ಕಟ್ಟಡದ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿದೆ. ಇದರಲ್ಲಿ ಓರ್ವ ಪ್ರಸಿದ್ಧ ಬಿಲ್ಡರ್ ಮಧ್ಯಪ್ರವೇಶ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರಿಂದಾಗಿ ಈ ಐತಿಹಾಸಿಕ ಕಟ್ಟಡದಲ್ಲಿ ಬಿಲ್ಡರ್ ಆಸಕ್ತಿ ಹೊಂದಿರುವ ಸಾಧ್ಯತೆಯಿದೆ. ಆದ್ದರಿಂದ ಈ ಐತಿಹಾಸಿಕ ಕಟ್ಟಡವನ್ನು ಉಳಿಸಲು ಸರಕಾರ ಮಧ್ಯಪ್ರವೇಶಿಸಬೇಕು.
ಸಾವರ್ಕರ್ ಕುಟುಂಬವು ದೇಶಕ್ಕಾಗಿ ದೊಡ್ಡ ತ್ಯಾಗವನ್ನು ಮಾಡಿದೆ. ಆ ಕುಟುಂಬದ ಮನೆಯ ಸಂರಕ್ಷಣೆಯ ಆರ್ಥಿಕ ಹೊರೆಯನ್ನು ಅದೇ ಕುಟುಂಬದ ಮೇಲೆ ಹಾಕುವುದು ಅನ್ಯಾಯವಾಗುತ್ತದೆ. ಸಾವರ್ಕರ್ ಸದನದ ಜಾಗವನ್ನು ಸಂಬಂಧಪಟ್ಟ ಮಾಲೀಕರಿಂದ ಖರೀದಿಸಿ, ಮುಂಬರುವ ಪೀಳಿಗೆಗೆ ಈ ಸದನವನ್ನು ಪ್ರೇರಣಾಸ್ಥಾನವನ್ನಾಗಿ ಮಾಡಬೇಕು. ಈ ಕಟ್ಟಡದ ಸಂರಕ್ಷಣೆ ಮತ್ತು ಅದರ ಪ್ರಸಾರಕ್ಕಾಗಿ ಸಾಕಷ್ಟು ಅನುದಾನವನ್ನು ನೀಡಬೇಕು. ಸ್ವಾತಂತ್ರ್ಯವೀರ ಸಾವರ್ಕರ್ ಅವರ ರಾಷ್ಟ್ರಕ್ಕಾಗಿ ನೀಡಿದ ಬಲಿದಾನ ಮತ್ತು ರಾಷ್ಟ್ರನಿರ್ಮಾಣ ಕಾರ್ಯದಲ್ಲಿನ ಕೊಡುಗೆಯನ್ನು ಗೌರವಿಸಲು ಕೇಂದ್ರ ಸರಕಾರವು ಇದರಲ್ಲಿ ಮಧ್ಯಪ್ರವೇಶಿಸಬೇಕು ಎಂಬ ಬಲವಾದ ವಿನಂತಿಯನ್ನು ವಕೀಲ ವೀರೇಂದ್ರ ಇಚಲಕರಂಜೀಕರ್ ಅವರು ಈ ಪತ್ರದಲ್ಲಿ ಮಾಡಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”