ತಕ್ಷಣ ಕ್ರಮಕ್ಕೆ ಆಗ್ರಹಿಸಿದ ಹಿಂದೂ ವಿಧಿಜ್ಞ ಪರಿಷತ್ತು
3 ಕೋಟಿ 17 ಲಕ್ಷ 4 ಸಾವಿರ 895 ರೂಪಾಯಿಗಳ ಹಣ ಪಾವತಿ ಬಾಕಿ!

ಮುಂಬಯಿ – ಮುಂಬಯಿಯ ಅತ್ಯಂತ ಪ್ರಮುಖ ಪ್ರದೇಶವಾದ ‘ಫೋರ್ಟ್’ ವಲಯದಲ್ಲಿನ 1,137.32 ಚದರ ಮೀಟರ್ ನ ಸರಕಾರಿ ಭೂಮಿಯು ಕಳೆದ 33 ವರ್ಷಗಳಿಂದ ಕಾನೂನುಬಾಹಿರವಾಗಿ ‘ಫ್ರೀ ಚರ್ಚ್ ಆಫ್ ಸ್ಕಾಟ್ ಲ್ಯಾಂಡ್’ (ಇಂದಿನ ‘ಚರ್ಚ್ ಆಫ್ ಸೇಂಟ್ ಆಂಡ್ರ್ಯೂ ಆಂಡ್ ಸೇಂಟ್ ಕೊಲಂಬಾ’) ಸಂಸ್ಥೆಯ ವಶದಲ್ಲಿದೆ ಎಂದು ಹಿಂದೂ ವಿಧಿಜ್ಞ ಪರಿಷತ್ತು ಗಂಭೀರ ಆರೋಪ ಮಾಡಿದೆ. ಈ ಕುರಿತು ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಪರಿಷತ್ತು, ಸಂಬಂಧಪಟ್ಟ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಭೂಮಿಯನ್ನು ತಕ್ಷಣವೇ ಸರಕಾರದ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದೆ. ಹಿಂದೂ ವಿಧಿಜ್ಞ ಪರಿಷತ್ತು ನೀಡಿರುವ ದೂರಿನ ಪ್ರಕಾರ, 1894 ರಲ್ಲಿ ‘ಫೋರ್ಟ್’ ವಿಭಾಗದ ‘ಸರ್ವೆ ನಂಬರ್ 1,405’ ರ ಭೂಮಿಯನ್ನು ಆಗಿನ ‘ಫ್ರೀ ಚರ್ಚ್ ಆಫ್ ಸ್ಕಾಟ್ ಲ್ಯಾಂಡ್’ ಸಂಸ್ಥೆಗೆ 99 ವರ್ಷಗಳ ಅವಧಿಗೆ ಗುತ್ತಿಗೆ (ಲೀಸ್) ಆಧಾರದ ಮೇಲೆ ನೀಡಲಾಗಿತ್ತು. 1930 ರ ದಶಕದಲ್ಲಿ ಈ ಸಂಸ್ಥೆಯನ್ನು ‘ಚರ್ಚ್ ಆಫ್ ಸೇಂಟ್ ಆಂಡ್ರ್ಯೂ ಆಂಡ್ ಸೇಂಟ್ ಕೊಲಂಬಾ’ ಸಂಸ್ಥೆಯೊಂದಿಗೆ ವಿಲೀನಗೊಳಿಸಲಾಯಿತು. ಈ ಗುತ್ತಿಗೆಯ ಅವಧಿಯು 13 ಜೂನ್ 1993 ರಂದೇ ಮುಕ್ತಾಯಗೊಂಡಿದೆ. ನಿಯಮಗಳ ಪ್ರಕಾರ ಅವಧಿ ಮುಗಿದ ನಂತರ ಸರಕಾರ ಗುತ್ತಿಗೆಯನ್ನು ನವೀಕರಿಸಬೇಕಿತ್ತು ಅಥವಾ ಸಂಬಂಧಿತ ಸಂಸ್ಥೆಯನ್ನು ತೆರವುಗೊಳಿಸಿ ಭೂಮಿಯನ್ನು ತನ್ನ ವಶಕ್ಕೆ ಪಡೆಯಬೇಕಿತ್ತು; ಆದರೆ ಕಳೆದ ಮೂರು ದಶಕಗಳಿಂದ ಮುಂಬಯಿ ನಗರ ಜಿಲ್ಲಾಧಿಕಾರಿಗಳು ಇವುಗಳಲ್ಲಿ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.
Government Land Under Illegal Possession for 33 Years in Mumbai?
Over ₹3.17 crore in arrears pending for 3+ years.
Nearly 1,000 sq. meters of government land in Mumbai remains under the illegal Possession of the ‘Church of St. Andrew & St. Columba’ even after lease expiry… pic.twitter.com/Vx3k3a7JKb
— Sanatan Prabhat (@SanatanPrabhat) May 16, 2026
ಮೂಲ ಬಾಡಿಗೆದಾರರು ನಾಪತ್ತೆಯಾದರೂ ನಿಯಂತ್ರಣ ಮುಂದುವರಿಕೆ; ಆಡಳಿತ ಮಂಡಳಿಯಿಂದ ನೋಟಿಸ್ ನೀಡುವ ಔಪಚಾರಿಕ ಪ್ರಕ್ರಿಯೆ!
ಮೂಲತಃ ಯಾವ ಸಂಸ್ಥೆಗೆ (‘ಫ್ರೀ ಚರ್ಚ್ ಆಫ್ ಸ್ಕಾಟ್‌ಲ್ಯಾಂಡ್’) ಭೂಮಿಯನ್ನು ನೀಡಲಾಗಿತ್ತೋ, ಆ ಸಂಸ್ಥೆ ಈಗ ಅಸ್ತಿತ್ವದಲ್ಲೇ ಇಲ್ಲ. ‘ಚರ್ಚ್ ಆಫ್ ಸೇಂಟ್ ಆಂಡ್ರ್ಯೂ ಆಂಡ್ ಸೇಂಟ್ ಕೊಲಂಬಾ’ ಸಂಸ್ಥೆಯು ಈ ಭೂಮಿಯ ಮೇಲೆ ನಿಯಂತ್ರಣ ಸಾಧಿಸಿದೆ. ಭೂಮಿಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ಈ ಸಂಸ್ಥೆ ನೀಡದಿದ್ದರೂ, ಜಿಲ್ಲಾಧಿಕಾರಿಗಳ ಕಚೇರಿಯು ಅವರಿಗೆ ನೋಟಿಸ್ ಕಳುಹಿಸುವ ಮೂಲಕ ಕೇವಲ ಔಪಚಾರಿಕ ಪ್ರಕ್ರಿಯೆಯನ್ನು ಪೂರೈಸುತ್ತಿದೆ.
ಮೂರು ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ 3 ಕೋಟಿ 17 ಲಕ್ಷ 4 ಸಾವಿರ 895 ರೂಪಾಯಿಗಳಷ್ಟು ಹಣ ಪಾವತಿ ಬಾಕಿ!
2022 ರಲ್ಲಿ ಜಿಲ್ಲಾಧಿಕಾರಿಗಳು 3 ಕೋಟಿ 17 ಲಕ್ಷ 4 ಸಾವಿರ 895 ರೂಪಾಯಿಗಳ ಬಾಕಿ ಪಾವತಿಯ ನೋಟಿಸ್ ಜಾರಿ ಮಾಡಿದ್ದರು; ಆದರೆ ಈ ಮೊತ್ತ ಇದುವರೆಗೆ ಜಮೆಯಾಗಿಲ್ಲ. ‘ಮಹಾರಾಷ್ಟ್ರ ಭೂ ಕಂದಾಯ ಸಂಹಿತೆ’ಯ ಕಲಂ 53 ರ ಪ್ರಕಾರ ಅನಧಿಕೃತ ನಿಯಂತ್ರಣ ಸಾಧಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದ್ದರೂ, ಆಡಳಿತ ಮಂಡಳಿಯು ಕಳೆದ ಮೂರು ವರ್ಷಗಳಲ್ಲಿ ಬಾಕಿ ವಸೂಲಾತಿಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ.
ದೋಷಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ! – ವಕೀಲ ವೀರೇಂದ್ರ ಇಚಲಕರಂಜೀಕರ್![]() ಈ ಸಮಸ್ಯೆಯು ಕೇವಲ ಒಂದು ಚರ್ಚ್ ಗೆ ಮಾತ್ರ ಸೀಮಿತವಾಗಿರದೆ, ಮಹಾರಾಷ್ಟ್ರದ ಅನೇಕ ನಗರಗಳಲ್ಲಿ ಗುತ್ತಿಗೆ ಅವಧಿ ಮುಗಿದಿದ್ದರೂ ಸರಕಾರಿ ಭೂಮಿಗಳ ದುರ್ಬಳಕೆ ಮುಂದುವರೆದಿದೆ. ಲೆಕ್ಕಪರಿಶೋಧಕರು (ಆಡಿಟರ್ಸ್) ಕಂದಾಯದಲ್ಲಿನ ಭಾರಿ ನಷ್ಟದ ಕುರಿತು ಪದೇ-ಪದೇ ನೋಂದಾಯಿಸಿದ್ದಾರೆ. ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ಭೂಮಿ ಇಂದಿಗೂ ಆ ಸಂಸ್ಥೆಯ ವಶದಲ್ಲಿದೆ. ಈ ಪ್ರಕರಣದಲ್ಲಿ ‘ದೋಷಿ ಅಧಿಕಾರಿಗಳ ವಿರುದ್ಧ ಶಿಸ್ತುಭಂಗದ ಕ್ರಮ ಕೈಗೊಳ್ಳಬೇಕು’ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ವಕೀಲ ವೀರೇಂದ್ರ ಇಚಲಕರಂಜೀಕರ್ ಅವರು ಒತ್ತಾಯಿಸಿದ್ದಾರೆ. |

ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ