‘ಆಪರೇಷನ್ ಸಿಂದೂರ್’ ದಿಂದ ಭಾರತದ ಬಗ್ಗೆ ಟೀಕಿಸುವ ಪಾಕಿಸ್ತಾನಿ ಮಹಿಳೆಗೆ ಪ್ರತ್ಯುತ್ತರ ನೀಡುವಾಗ ಮುಸಲ್ಮಾನರ ಬಗ್ಗೆ ಕಥಿತ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ

ಕೋಲಕಾತಾ (ಬಂಗಾಲ) – ‘ಆಪರೇಷನ್ ಸಿಂದೂರ್’ ಮೇಲಿನ ಪೋಸ್ಟ್ ಗೆ ಉತ್ತರ ನೀಡುವಾಗ ಮುಸಲ್ಮಾನರ ವಿರೋಧದಲ್ಲಿ ಕಥಿತ ಆಕ್ಷೇಪಾರ್ಹ ಟಿಪ್ಪಣಿ ಮಾಡಿರುವ ಆರೋಪ ದಡಿಯಲ್ಲಿ ಕೊಲಕಾತಾ ಪೊಲೀಸರು ಶರ್ಮಿಷ್ಟ ಪನೊಲಿ ಈ ವಿದ್ಯಾರ್ಥಿನಿಯನ್ನು ಹರಿಯಾಣದ ಗುರುಗ್ರಾಮದಿಂದ ಬಂಧಿಸಿದ್ದಾರೆ. ಆಕೆಯನ್ನು ಕೋಲಕಾತಾದ ಅಲಿಪುರ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆಕೆಗೆ ಈಗ ೧೪ ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶರ್ಮಿಷ್ಟ ಪುಣೆಯಲ್ಲಿ ಕಾನೂನ ಶಿಕ್ಷಣ ಪಡೆಯುತ್ತಿದ್ದಾರೆ.
ನಾವು ಈಗ ಮಹಾತ್ಮ ಗಾಂಧಿಯವರ ಭಕ್ತರಲ್ಲ!
ಶರ್ಮಿಷ್ಟ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ ಅದರಲ್ಲಿ ಅವರು ಓರ್ವ ಪಾಕಿಸ್ತಾನಿ ಮಹಿಳೆಗೆ ಉತ್ತರ ನೀಡುವಾಗ ಮಹಮ್ಮದ್ ಪೈಗಂಬರ್ ಇವರ ಕುರಿತು ಕಥಿತ ಟೀಕೆ ಮಾಡಿದ್ದಾರೆ. ಪಾಕಿಸ್ತಾನಿ ಮಹಿಳೆಗೆ ಉದ್ದೇಶಿಸಿ ಆಕೆ, ಪಹಲ್ಗಾವ್ ಇಲ್ಲಿಯ ದಾಳಿ ಮತ್ತು ನಿಮ್ಮ ದೇಶ ಯಾವ ಇತರ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದಾರೆ, ಅವರ ಬಗ್ಗೆ ನೀವು ಕೇಳಿದ್ದೀರಾ? ಅದಕ್ಕೆ ನಾವು ಪ್ರತ್ಯುತ್ತರ ನೀಡಬಾರದೆ? ಈಗ ನಾವು ಮಹಾತ್ಮ ಗಾಂಧಿಯವರ ಭಕ್ತರಾಗಿಲ್ಲ! ಈ ವಿಡಿಯೋದಿಂದ ಶರ್ಮಿಷ್ಟ ಇವರ ವಿರೋಧದಲ್ಲಿ ದೂರು ದಾಖಲಿಸಲಾಗಿತ್ತು. ಅದರ ನಂತರ ಅವರ ಖಾತೆಯಿಂದ ಈ ವಿಡಿಯೋ ತೆಗೆದ ಹಾಕಲಾಯಿತು ಹಾಗೂ ಕ್ಷಮೆ ಕೂಡ ಯಾಚಿಸಲಾಗಿತ್ತು. ಇನ್ನೊಂದು ವಿಡಿಯೋದಲ್ಲಿ ಹಿಂದಿ ಚಲನಚಿತ್ರದಲ್ಲಿನ ಕಲಾವಿದರು ಮತ್ತು ಯುಟ್ಯೂಬ್ ನಡೆಸುವ ರಣವೀರ ಅಲಹಾಬಾದಿಯ ಇವರ ಬಗ್ಗೆ ಕೂಡ ತೀವ್ರವಾಗ್ದಾಳಿ ನಡೆಸಲಾಗಿತ್ತು. ಇಬ್ಬರೂ ಪಹಲ್ಗಾವ ಇಲ್ಲಿಯ ದಾಳಿಯ ನಂತರ ಪಾಕಿಸ್ತಾನದ ವಿರೋಧದಲ್ಲಿ ಸೌಮ್ಯ ನಿಲುವು ತಾಳಿದ್ದರು. ಇದನ್ನು ಆಕೆ ಡೋಂಗಿತನ ಎಂದು ಹೇಳಿದ್ದರು.
ಪಾಕಿಸ್ತಾನದಿಂದ ಜೀವ ಬೆದರಿಕೆ ನೀಡಲಾಗಿತ್ತು
ಶರ್ಮಿಷ್ಟ ಇವರ ವಿಡಿಯೋ ಪೋಸ್ಟ್ ಮಾಡಿದ ನಂತರ ಪಾಕಿಸ್ತಾನದಿಂದ ‘ಸರ್ ತನ ಸೇ ಜುದಾ’ (ತಲೆ ಕಡಿಯುವ) ಈ ರೀತಿಯ ಬೆದರಿಕೆ ನೀಡಲಾಗಿತ್ತು. ಹಾಗೆಯೇ ಆಕೆಯ ಕುರಿತು ದೂರು ದಾಖಲಿಸಲು ಆಗ್ರಹಿಸಲಾಗುತ್ತಿತ್ತು.
ಸಂಪಾದಕೀಯ ನಿಲುವುಪಾಕಿಸ್ತಾನಿ ಮಹಿಳೆಗೆ ಪ್ರತ್ಯುತ್ತರ ನೀಡಿರುವ ಕುರಿತು ಓರ್ವ ವಿದ್ಯಾರ್ಥಿನಿಯನ್ನು ಬಂಧಿಸಿರುವ ಕೋಲಕಾತಾ ಪೋಲಿಸರು ಭಾರತದವರೇ ಅಥವಾ ಪಾಕಿಸ್ತಾನದವರೆ ? ಮಮತಾ ಬ್ಯಾನರ್ಜಿ ಇವರ ಸರಕಾರ ಪಾಕಿಸ್ತಾನ ಪ್ರೇಮಿ ಅಷ್ಟೇ ಅಲ್ಲದೆ, ಅದು ಪಾಕಿಸ್ತಾನಿಯೇ ಆಗಿದೆ ಎಂದು ಕಾಣುತ್ತಿದೆ. ಈಗಲಾದರೂ ಕೇಂದ್ರ ಸರಕಾರ ಮಮತಾ ಬ್ಯಾನರ್ಜಿ ಇವರ ಸರಕಾರ ವಜಾ ಮಾಡಬಹುದೇ ? |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ