ಪಾಕಿಸ್ತಾನವು ಹಾಫಿಜ್ ಸಯೀದ್ ಮತ್ತು ಮಸೂದ್ ಅಜರ್ ರನ್ನು ಭಾರತಕ್ಕೆ ಹಸ್ತಾಂತರಿಸಬೇಕು

ಪಣಜಿ, ಮೇ 30 (ವಾರ್ತಾ ಇಲಾಖೆ) – ‘ಆಪರೇಷನ್ ಸಿಂದೂರ್’ ಕೇವಲ ಸೇನಾ ಕಾರ್ಯಾಚರಣೆಯಲ್ಲ, ಇದು ಭಯೋತ್ಪಾದನೆಯ ವಿರುದ್ಧ ಭಾರತದ ನೇರ ಪ್ರಹಾರವಾಗಿದೆ. ಪಾಕಿಸ್ತಾನವು ಯಾವುದೇ ದುಸ್ಸಾಹಸಕ್ಕೆ ಮುಂದಾದರೆ, ಭಾರತೀಯ ನೌಕಾಪಡೆಯ ಮಾರಕ ಸಾಮರ್ಥ್ಯ ಮತ್ತು ಆಕ್ರಮಣಶೀಲತೆಯನ್ನು ಎದುರಿಸಬೇಕಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೇ 30 ರಂದು ಗೋವಾದ ಕರಾವಳಿಯಲ್ಲಿ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ಯುದ್ಧನೌಕೆ ‘ಐ.ಎನ್.ಎಸ್. ವಿಕ್ರಾಂತ್’ ನಲ್ಲಿ ಅಧಿಕಾರಿಗಳು ಮತ್ತು ನೌಕಾಪಡೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಎಚ್ಚರಿಕೆ ನೀಡಿದರು.

ಸಮಗ್ರ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯ ಪಾತ್ರ ಪ್ರಶಂಸನೀಯವಾಗಿದೆಯೆಂದು ರಾಜನಾಥ್ ಸಿಂಗ್ ಶ್ಲಾಘಿಸಿದರು. ಭಾರತೀಯ ನೌಕಾಪಡೆಯ ಅಗಾಧ ಶಕ್ತಿ, ಅದರ ಮಿಲಿಟರಿ ಕೌಶಲ್ಯ ಮತ್ತು ವಿನಾಶಕಾರಿ ಸಾಮರ್ಥ್ಯವು ಶತ್ರುಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ ಎಂದವರು ಉಲ್ಲೇಖಿಸಿದರು. ‘ಆಪರೇಷನ್ ಸಿಂದೂರ್’ ಇನ್ನೂ ಮುಗಿದಿಲ್ಲ. ಇದು ಕೇವಲ ಒಂದು ವಿರಾಮವಾಗಿದೆ ಎಂದು ಅವರು ಎಚ್ಚರಿಸಿದರು.
ರಾಜನಾಥ್ ಅವರು ಮುಂದೆ ಮಾತನಾಡಿ,
1. ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತೀಯ ನೌಕಾಪಡೆಯು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ನೀಡಿತು, ಒಂದು ವೇಳೆ ಅದು ಕೆಟ್ಟ ದೃಷ್ಟಿಯಿಂದ ನೋಡಲು ಪ್ರಯತ್ನಿಸಿದರೆ, ಭಾರತದಿಂದ ಪ್ರತೀಕಾರದ ಕ್ರಮವು ನೌಕಾಪಡೆಯ ಕೈಯಲ್ಲಿರುತ್ತದೆ. ಪಾಕಿಸ್ತಾನವು ಸ್ವಾತಂತ್ರ್ಯ ಸಮಯದಿಂದ ಆಡುತ್ತಿರುವ ಭಯೋತ್ಪಾದನೆಯ ಅಪಾಯಕಾರಿ ಆಟದ ಸಮಯ ಈಗ ಮುಗಿದಿದೆ.
2. ಪಾಕಿಸ್ತಾನಿ ನೆಲದಿಂದ ಬಹಿರಂಗವಾಗಿ ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಮತ್ತು ಭಾರತವು ಗಡಿ ಮತ್ತು ಸಮುದ್ರ ಎರಡೂ ಕಡೆಗಳಿಂದ ಭಯೋತ್ಪಾದಕರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಂಪೂರ್ಣವಾಗಿ ಸ್ವತಂತ್ರವಾಗಿದೆ.
3. ಪಾಕಿಸ್ತಾನವು ತನ್ನ ನೆಲದಲ್ಲಿ ಬೆಳೆಯುತ್ತಿರುವ ಭಯೋತ್ಪಾದನೆಯ ಬೇರುಗಳನ್ನು ತನ್ನ ಕೈಯಾರೆ ಕಿತ್ತುಹಾಕಬೇಕು. ಹಾಫಿಜ್ ಸಯೀದ್ ಮತ್ತು ಮಸೂದ್ ಅಜರ್ ನಂತಹ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು. ಭಾರತದ ಪಟ್ಟಿಯಲ್ಲಿ ಮಾತ್ರವಲ್ಲದೆ, ವಿಶ್ವಸಂಸ್ಥೆಯು ಸೂಚಿಸಿದ ಭಯೋತ್ಪಾದಕರ ಪಟ್ಟಿಯಲ್ಲಿಯೂ ಸಹ ಈ ಇಬ್ಬರು ಉಗ್ರರ ಹೆಸರುಗಳಿವೆ.
4. ಇಂದು ನಾವು ಕೇವಲ ಗುಂಡು ಮತ್ತು ಬಾಂಬ್ ಗಳಿಂದ ಮಾತ್ರ ಹೋರಾಡುವುದಿಲ್ಲ, ಬದಲಿಗೆ ಸೈಬರ್ ಸ್ಪೇಸ್, ಡೇಟಾ ಪ್ರಾಬಲ್ಯ ಮತ್ತು ಕಾರ್ಯತಂತ್ರದ ನಿಗ್ರಹದ ಮೂಲಕವೂ ಹೋರಾಡುವ ಯುಗದಲ್ಲಿದ್ದೇವೆ. ಈ ಕ್ಷೇತ್ರಗಳಲ್ಲಿ ನೌಕಾಪಡೆಯು ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
5. ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರದ ರಕ್ಷಕ ಮಾತ್ರವಲ್ಲದೆ, ಈ ಪ್ರದೇಶದಲ್ಲಿ ಭಾರತದ ಅಸ್ತಿತ್ವವನ್ನು ಬಲಪಡಿಸುವ ಕಾರ್ಯತಂತ್ರದ ದೃಷ್ಟಿಯಿಂದಲೂ ಒಂದು ಶಕ್ತಿಯಾಗಿದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !