
ಜಗತ್ತಿನಲ್ಲಿ ಅನೇಕ ವಿಷಯಗಳಿವೆ, ನಮಗೆ ಅವುಗಳ ಬಗ್ಗೆ ಜ್ಞಾನವಿರುವುದಿಲ್ಲ ಅಥವಾ ಅವುಗಳ ಬಗ್ಗೆ ತಿಳಿಯುವುದಿಲ್ಲ; ಆದ್ದರಿಂದ ನಾವು ಆ ವಿಷಯಗಳನ್ನು ಸುಳ್ಳು ಎಂದು ನಂಬುವುದಿಲ್ಲ. ‘ನಾವು ನಮ್ಮ ಅತ್ಯಲ್ಪ ಜ್ಞಾನದ ಬಗ್ಗೆ ಹೆಮ್ಮೆಪಡುತ್ತೇವೆ’, ಇಲ್ಲಿ ನಮ್ಮಿಂದ ತಪ್ಪಾಗುತ್ತದೆ. ಭಗವಂತನು ನೀಡಿದ ಜ್ಞಾನದ ಬಗ್ಗೆ ಹೆಮ್ಮೆ ಪಡುತ್ತಿದ್ದರೆ ಕೈಯಲ್ಲಿನ ಖಡ್ಗದಿಂದ ಶತ್ರುವಿನ ತಲೆಯನ್ನು ಕತ್ತರಿಸುವ ಬದಲು ನಮ್ಮ ಕುತ್ತಿಗೆಯನ್ನೇ ಕತ್ತರಿಸಿದಂತಾಗುವುದು.
ಯಾವ ವಿದ್ಯೆಯಿಂದ ನಮ್ಮ ಹಿತ ತಿಳಿಯದ ಜ್ಞಾನವಿದೆಯೋ, ಅದು ಅವಿದ್ಯೆಯೇ ಆಗಿದೆ. ‘ಸತ್ಯ ಇಲ್ಲದ್ದನ್ನು ಸತ್ಯವೆಂದು ತಿಳಿಯುವುದು’, ಇದು ಅಜ್ಞಾನವಾಗಿದೆ; ಕತ್ತಲೆಯಲ್ಲಿ ಯಾವುದಾದರೊಂದು ಹಗ್ಗವನ್ನು ಹಾವು ಎಂದು ತಿಳಿಯುತ್ತೇವೆ. ಅವಿದ್ಯೆ ಮತ್ತು ಅಜ್ಞಾನ ಈ ಎರಡೂ ಒಂದೇತರಹದ ಅಪಾಯಕಾರಿಯಾಗಿವೆ. ‘ಯಾವ ವಿದ್ಯೆಯು ನಮಗೆ ಅಪಾಯಕಾರಿಯಾಗಿದೆಯೋ, ಅದು ಅವಿದ್ಯೆಯಾಗಿದೆ’ ಮತ್ತು ‘ಯಾವ ಜ್ಞಾನದ ಕೊರತೆಯಿಂದ ನಾವು ಸುಖ ಮತ್ತು ಸಮಾಧಾನವನ್ನು ಕಳೆದುಕೊಳ್ಳುತ್ತೇವೆ’, ಅದು ಅಜ್ಞಾನವಾಗಿದೆ. ಕೆಲವರು ತಮಾಷೆಯಿಂದ ‘ಅಜ್ಞಾನದಲ್ಲಿ ಸುಖವಿರುತ್ತದೆ’, ಎಂದು ಹೇಳುತ್ತಾರೆ. ಅದರಲ್ಲಿ ಏನು ಅರ್ಥವಿರುವುದಿಲ್ಲ. ಅದು ಮಾನಸಿಕ ಸಮಾಧಾನವಾಗಿದೆ. ‘ಪರಮಾತ್ಮನ ಸ್ವರೂಪದ ಬಗ್ಗೆ ನಾವು ಸಂದೇಹಪಡುತ್ತೇವೆ’, ಇದು ನಮ್ಮ ಅಜ್ಞಾನವೇ ಆಗಿದೆ. ‘ಪರಮಾತ್ಮನು ಇದ್ದಾನೆ’, ಎಂಬ ಅರಿವು ನಮ್ಮಲ್ಲಿ ಇರುವುದಿಲ್ಲ ಮತ್ತು ಪರಮಾತ್ಮನನ್ನು ಅರಿತುಕೊಳ್ಳುವ ನಮ್ಮ ಇಚ್ಛೆಯೂ ಇರುವುದಿಲ್ಲ. ನಮ್ಮಲ್ಲಿ ಆ ತಳಮಳ ಇಲ್ಲದಿರುವುದರಿಂದ ನಾವು ಪ್ರಯತ್ನಿಸುವುದೂ ಇಲ್ಲ; ಏಕೆಂದರೆ ನಮ್ಮಲ್ಲಿ ಜಿಜ್ಞಾಸೆ ಇರುವುದಿಲ್ಲ. ನಾವು ಆಲಸ್ಯ ಮತ್ತು ನಾಸ್ತಿಕರಾಗಿದ್ದೇವೆ. ‘ದೇವರು ನಮಗೆ, ನಮ್ಮ ಕೃತಿಯಿಂದ ನೋಡುತ್ತಾನೆ’, ಎಂಬ ಅರಿವು ಇರುವುದು, ಎಂದರೆನೇ ಜ್ಞಾನವಾಗಿದೆ’, ಎಂದು ಗೊಂದವಲೇಕರ ಮಹಾರಾಜರು ಹೇಳುತ್ತಾರೆ. ‘ಗ್ರಂಥದಲ್ಲಿನ ಜ್ಞಾನವನ್ನು ಆಚರಣೆಯಲ್ಲಿ ತಂದರೆ, ಮಾತ್ರ ಲಾಭವಾಗುವುದು. ಗ್ರಂಥವನ್ನು ಓದಲು ಪುರಾಣ ಹೇಳುವವನಿಗೆ ಹಣದ ರೂಪದಲ್ಲಿ ಪ್ರತಿಫಲ ನೀಡುವುದರಿಂದ ಅಪೇಕ್ಷಿತ ಲಾಭವಾಗುವುದಿಲ್ಲ. ‘ಭಗವದ್ಭಕ್ತಿಯನ್ನು ಮಾಡುವುದು’ ಇದು ನಿಜವಾದ ಪ್ರತಿಫಲವಾಗಿದೆ.’
ಭಗವಂತನು ಪ್ರತಿಯೊಬ್ಬರಿಗೆ ಅವರಿಗೆ ಅಗತ್ಯವಿದ್ದಷ್ಟು, ಕೊಡುತ್ತಲೇ ಇರುತ್ತಾನೆ. ಆದ್ದರಿಂದ ಅದರಲ್ಲಿ ಸಮಾಧಾನ ಪಡಬೇಕು. ಯಾರಾದರೊಬ್ಬರಲ್ಲಿ ಸುಖ-ಸಂಪತ್ತು ಮತ್ತು ವಾಹನ, ಬಂಗಲೆಗಳೆಲ್ಲವೂ ಇವೆ’ ಆದ್ದರಿಂದ ಅವನು ಸಮಾಧಾನಿ ಮತ್ತು ಆನಂದವಾಗಿದ್ದಾನೆ ಎಂದೇನಿಲ್ಲ. ಸಮಾಧಾನವು ಮನಸ್ಸಿನ ಸ್ಥಿತಿಯ ಮೇಲೆ ಮತ್ತು ನಂಬುವುದರ ಮೇಲೆ ಅವಲಂಬಿಸಿರುತ್ತದೆ. ಸ್ವಾರ್ಥ ಮತ್ತು ಅಪೇಕ್ಷೆ ಈ ದುರ್ಗುಣಗಳಿರುವ ವ್ಯಕ್ತಿಗೆ ಸಮಾಧಾನವು ಎಂದಿಗೂ ಸಿಗುವುದಿಲ್ಲ. ಅವನ ಆಸೆ ಎಂದಿಗೂ ಈಡೇರುವುದಿಲ್ಲ; ಆದರೆ ಭಗವಂತನ ಮೇಲೆ ಶ್ರದ್ಧೆಯಿರುವ ಯಾವುದಾದರೊಬ್ಬ ಬಡವನು ಹೆಚ್ಚು ಸಮಾಧಾನಿಯಾಗಿರುವನು. ‘ಸುಖ ಬಂದರೆ, ಭಗವಂತನ ಕೃಪೆಯಿಂದ ಮತ್ತು ದುಃಖ ಬಂದರೆ ಭಗವಂತನ ಇಚ್ಛೆಯಿಂದ’, ಎಂಬ ಅವನಲ್ಲಿ ದೃಢ ಭಾವವಿರುತ್ತದೆ. ಯಾರ ಸಮಾಧಾನವು ಭಗವಂತನ ಮೇಲೆ ಅವಲಂಬಿಸಿರುತ್ತದೆಯೋ, ಅವನ ಸಮಾಧಾನವು ಯಾವುದೇ ಪರಿಸ್ಥಿತಿಯಲ್ಲಿಯೂ ಇರುತ್ತದೆ. ನಮ್ಮ ನಿಷ್ಠೆಯು ಎಷ್ಟು ಬಲವಾಗಿರಬೇಕೆಂದರೆ, ಅದರಿಂದ ನಮಗೆ ಸಮಾಧಾನ ಸಿಗುವುದು. ರಾಜಾ ಹರಿಶ್ಚಂದ್ರ, ಭಕ್ತ ಪ್ರಹ್ಲಾದ ಇವರಿಗೆ ತುಂಬಾ ಕಷ್ಟವನ್ನು ಅನುಭವಿಸಬೇಕಾಯಿತು. ಅವರಲ್ಲಿ ದೃಢಶ್ರದ್ಧೆ ಇರುವುದರಿಂದ ಅವರು ಆ ಕಷ್ಟದಿಂದ ಸುಖರೂಪವಾಗಿ ಪಾರಾದರು. ವಿಷಯದಲ್ಲಿ ತಾತ್ಕಾಲಿಕ ಸುಖವಿರುತ್ತದೆ, ಆದರೆ ಭಗವಂತನ ಅನುಸಂಧಾನದಲ್ಲಿ ಶಾಶ್ವತ ಸಮಾಧಾನವಿರುತ್ತದೆ. ‘ಎಲ್ಲವೂ ಭಗವಂತನ ಇಚ್ಛೆಯಿಂದ ನಡೆಯುತ್ತದೆ ಮತ್ತು ಎಲ್ಲವನ್ನು ಅವನೇ ಮಾಡುತ್ತಾನೆ’, ಎಂಬ ಭಾವವಿದ್ದರೆ ಅದಕ್ಕಿಂತ ಬೇರೆ ಸಮಾಧಾನವಿಲ್ಲ !
– ಶ್ರೀ. ಅಶೋಕ ಲಿಮಕರ, ಸನಾತನ ಆಶ್ರಮ, ದೇವದ, ಪನವೇಲ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !