Ex-Pentagon official Michael Rubin Statement : ಭಾರತದ ‘ಆಪರೇಷನ್ ಸಿಂದೂರ್’ನಿಂದ ಪಾಕಿಸ್ತಾನದ ಸ್ಥಿತಿ ಹೆದರಿದ ನಾಯಿಯಂತಾಗಿದೆ!

ಪಾಕಿಸ್ತಾನಕ್ಕೆ ಅದರ ಯೋಗ್ಯತೆ ತೋರಿಸಿದ ಅಮೆರಿಕದ ರಕ್ಷಣಾ ಇಲಾಖೆ ‘ಪೆಂಟಗನ್’ನ ಮಾಜಿ ಅಧಿಕಾರಿ ಮೈಕಲ್ ರೂಬಿನ್

ವಾಷಿಂಗ್ಟನ (ಅಮೆರಿಕ) – ಭಾರತವು ಪಾಕಿಸ್ತಾನದ ವಿರುದ್ಧ ನಡೆಸಿದ 4 ದಿನಗಳ ‘ಆಪರೇಷನ್ ಸಿಂದೂರ್’ನಿಂದ ಪಾಕಿಸ್ತಾನದ ಸ್ಥಿತಿ ಹೆದರಿದ ನಾಯಿಯಂತಾಗಿತ್ತು. ಅದು ಕೇವಲ ಕದನ ವಿರಾಮಕ್ಕಾಗಿ ಭಿಕ್ಷೆ ಬೇಡುತ್ತಿತ್ತು. ಪಾಕಿಸ್ತಾನವು ಈ ಸೋಲನ್ನು ಈಗ ಮರೆಮಾಚಲು ಸಾಧ್ಯವಿಲ್ಲ. ಅದು ಕೆಟ್ಟ ರೀತಿಯಲ್ಲಿ ಸೋತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ‘ಪೆಂಟಗನ್’ನ ಮಾಜಿ ಅಧಿಕಾರಿ ಮೈಕಲ್ ರೂಬಿನ್ ಅವರು ಪಾಕಿಸ್ತಾನದ ಮರ್ಯಾದೆ ತೆಗೆದಿದ್ದಾರೆ. ಅವರು ‘ಎ.ಎನ್.ಐ.’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಭಾರತದ ಸೈನಿಕ ಕಾರ್ಯಾಚರಣೆಯನ್ನು ಅವರು ಮುಕ್ತವಾಗಿ ಹೊಗಳಿದರು.

ಮೈಕಲ್ ರೂಬಿನ್ ಅವರು ಹೇಳಿದ ಸೂತ್ರಗಳು

1. ಭಾರತವು ‘ಆಪರೇಷನ್ ಸಿಂದೂರ್’ ಅಡಿಯಲ್ಲಿ ಕೈಗೊಂಡ ಕ್ರಮದಿಂದ ಪಾಕಿಸ್ತಾನವು ರಾಜತಾಂತ್ರಿಕ ಮತ್ತು ಸೈನ್ಯದ ಮೈತ್ರಿಯಲ್ಲಿ ದೊಡ್ಡ ಸೋಲನ್ನು ಅನುಭವಿಸಿದೆ.

2. ಪಹಲ್ಗಾಮ್‌ದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ತ್ವರಿತವಾಗಿ ಮತ್ತು ನಿಖರತೆಯಿಂದ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡಿತು. ಇದರಿಂದ ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಆಶ್ರಯದ ಕಡೆಗೆ ಇಡೀ ಜಗತ್ತಿನ ಗಮನ ಸೆಳೆಯಲ್ಪಟ್ಟಿತು. ಪಾಕಿಸ್ತಾನದ ಸುಳ್ಳು ಮತ್ತೆ ಜಗತ್ತಿನ ಮುಂದೆ ಬಯಲಾಯಿತು. ಇದು ಭಾರತದ ರಾಜತಾಂತ್ರಿಕ ವಿಜಯವಾಗಿದೆ.

ಯಾರು ಭಯೋತ್ಪಾದಕರು ಮತ್ತು ಯಾರು ಸೈನಿಕರು?

ಪಾಕಿಸ್ತಾನಿ ಸೇನೆಯ ಅಧಿಕಾರಿಗಳು ಸೈನಿಕ ಸಮವಸ್ತ್ರದಲ್ಲಿ ಬಂದು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವುದನ್ನು ನೋಡಿದಾಗ ಯಾರು ಭಯೋತ್ಪಾದಕರು ಮತ್ತು ಯಾರು ಸೈನಿಕರು? ಎಂಬ ಭೇದವೇ ಕೊನೆಗೊಳ್ಳುತ್ತದೆ, ಎಂದು ರೂಬಿನ್ ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನವನ್ನು ಹಾಗೆಯೇ ಬಿಡಬಾರದು; ಏಕೆಂದರೆ ಅದು ತಿರುಗಿ ಬಂದು ಮತ್ತೆ ದಾಳಿ ಮಾಡಬಹುದು. ಆದ್ದರಿಂದ ಅದನ್ನು ನಾಶಪಡಿಸುವುದು ಅವಶ್ಯಕವಾಗಿದೆ!