‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ನಿಮಿತ್ತ ಸಂತ ಸಂದೇಶ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಲೇ ಅದರ 2 ಭಾಗಗಳಾದವು. ಒಂದು ಪಾಕಿಸ್ತಾನ ಮುಸಲ್ಮಾನರಿಗಾಗಿ ಮತ್ತು ಇನ್ನೊಂದು ಭಾರತ ಹಿಂದೂಗಳಿಗಾಗಿ (ಅಂದರೆ ಎಲ್ಲ ಧರ್ಮೀಯರಿಗಾಗಿ). ಆ ಸಮಯದಲ್ಲಿ ಗಾಂಧಿ-ನೆಹರೂ ಅವರು ಭಾರತದ ಮುಖಂಡರಾಗಿದ್ದು ಮುಸಲ್ಮಾನ ಪ್ರೇಮಿಗಳಾಗಿದ್ದರು. ಆದ್ದರಿಂದ ಭಾರತದ ಭೂಭಾಗವನ್ನು ನೀಡಿ ಅದರ ಮೇಲೆ 55 ಕೋಟಿ ರೂಪಾಯಿಗಳನ್ನು (ಈಗಿನ 20 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು) ಪಾಕಿಸ್ತಾನಕ್ಕೆ ನೀಡಲಾಯಿತು. ಇದರ ಹೊರತಾಗಿ ಕಾಂಗ್ರೆಸ್ ಆಡಳಿತದಲ್ಲಿ ಎಲ್ಲ ನಿರ್ಣಯಗಳನ್ನು ಮುಸಲ್ಮಾನರಿಗೆ ಅನುಕೂಲಕರವಾಗಿ ತೆಗೆದುಕೊಳ್ಳಲಾಗುತ್ತಿತ್ತು.
ಈಗ ಭಾರತದ ಗ್ರಹಗಳು ಬದಲಾಗಿವೆ. ನರೇಂದ್ರ ಮೋದಿಯಂತಹ ಕಟ್ಟರ ಹಿಂದೂ ಧರ್ಮನಿಷ್ಠ ನಾಯಕ ಈ ರಾಷ್ಟ್ರಕ್ಕೆ ಲಭಿಸಿದ್ದಾರೆ. ಮೋದಿ-ಶಾಹ ಅವರು ರಾಮ-ಲಕ್ಷ್ಮಣರಂತೆ ಹಾಗೂ ಯೋಗಿ ಹನುಮಂತರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಪಾಕಿಸ್ತಾನದ ಆಕ್ರಮಣಕ್ಕೆ ತೀವ್ರ ಪ್ರತ್ಯುತ್ತರ ನೀಡಿ ಯುದ್ಧದ ಶಂಖನಾದ ಮಾಡುವ ಶೌರ್ಯವನ್ನು ಭಾರತ ತೋರಿಸುತ್ತಿದೆ. ಈ ಪವಿತ್ರ ಶಂಖನಾದದ ದಿನವು ಉದಯಿಸಿದ್ದು ಶೀಘ್ರದಲ್ಲೇ ಭಾರತ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲ್ಪಡಲಿದೆ ಎಂದು ಈ ಸಂದರ್ಭದಲ್ಲಿ ನಾವು ಮಹಾನ್ ಭವಿಷ್ಯವನ್ನು ನುಡಿಯುತ್ತೇವೆ.